||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ. ಶ್ರೀಧರ್ ಹೆಚ್.ಜಿ. ಅವರ 'ಚಪಡ' ಕಾದಂಬರಿ ಲೋಕಾರ್ಪಣೆ

ಡಾ. ಶ್ರೀಧರ್ ಹೆಚ್.ಜಿ. ಅವರ 'ಚಪಡ' ಕಾದಂಬರಿ ಲೋಕಾರ್ಪಣೆ

ಚರಿತ್ರೆಯನ್ನು ಮತ್ತೆ ಮೆಲುಕು ಹಾಕುವಂತಹ ಮತ್ತು ಸಂಶೋಧನಾತ್ಮಕ ಕಾದಂಬರಿ 'ಚಪಡ': ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ


ಪುತ್ತೂರು. ಡಿ.17: ಒಂದು ಕಾದಂಬರಿಯನ್ನು ರಚಿಸಲು ಸೃಜನಶೀಲತೆ ಬಹಳ ಮುಖ್ಯ. ಅದರಲ್ಲೂ ಒಬ್ಬ ಲಿಪಿಕಾರನ ಬಗ್ಗೆ ಕಾದಂಬರಿಯನ್ನು ರಚಿಸಲು ಮಾಹಿತಿಗಳ ಜೊತೆಗೆ ಸಮರ್ಪಣೆ ತುಂಬಾ ಅಗತ್ಯ. ಅಂತಹ ಕಾದಂಬರಿಗಳಲ್ಲಿ 'ಚಪಡ' ಕೂಡ ಒಂದು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಹೇಳಿದರು.


ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ, ಕನ್ನಡ ವಿಭಾಗ ಹಾಗೂ ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ಬೆಂಗಳೂರು ಇದರ ಸಹಯೋಗದಲ್ಲಿ ಆಯೋಜಿಸಲಾದ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ವಿವೇಕಾನಂದ ಸಂಶೋಧನ ಕೇಂದ್ರದ ನಿರ್ದೇಶಕ, ಸಾಹಿತಿ ಡಾ. ಶ್ರೀಧರ್ ಎಚ್.ಜಿ. ಅವರ ಎರಡನೇ ಕಾದಂಬರಿಯಾದ 'ಚಪಡ' ಲೋಕಾರ್ಪಣೆ ಕಾರ್ಯಕ್ರಮದಲ್ಲಿ, ಕಾದಂಬರಿ ಲೋಕಾರ್ಪಣೆಗೊಳಿಸಿ ಶುಕ್ರವಾರ ಅವರು ಮಾತನಾಡಿದರು.


ಬಂಡೆಯಲ್ಲಿ ಒಂದು ಶಿಲ್ಪವನ್ನು ಕೆತ್ತಬಹುದು. ಆದರೆ ಬಂಡೆಯಲ್ಲಿ ಲಿಪಿಗಳನ್ನು ಕೆತ್ತುವುದು ಬಹಳ ಕಠಿಣ. ಈ ತರಹ ಲಿಪಿಗಳನ್ನು ರಚಿಸಿದ ಲಿಪಿಕಾರನ ಜೀವನಶೈಲಿಯ ಬಗ್ಗೆ ತಿಳಿಸಿ ಕೊಡುವಂತಹ ಕಾದಂಬರಿ 'ಚಪಡ'. ಇದು ಚರಿತ್ರೆಯನ್ನು ಮತ್ತೆ ಮೆಲುಕು ಹಾಕುವಂತಹ ಮತ್ತು ಸಂಶೋಧನಾತ್ಮಕ ಕಾದಂಬರಿಯಾಗಿದೆ. ಈ ಕಾದಂಬರಿ ಲಿಪಿ, ಶಿಲ್ಪ, ಇತಿಹಾಸ, ಶಾಸನಗಳ ಬಗ್ಗೆ ತಿಳಿಸಲು ತಿಳಿಸಿಕೊಡುವುದು ಎಂದು ಅಭಿಪ್ರಾಯಪಟ್ಟರು.

ಕಾದಂಬರಿಕಾರ ಡಾ. ಶ್ರೀಧರ್ ಹೆಚ್. ಜಿ. ಮಾತನಾಡಿ, ಚಪಡನ ಕಥೆ ಹೊಳೆದದ್ದು ಎರಡು ದಶಕಗಳ ಹಿಂದೆ. ನನಗೆ ಶಾಸನ ಸಂಸ್ಕೃತಿಯ ಬಗ್ಗೆ ಮೊದಲಿನಿಂದಲೂ ಕುತೂಹಲ. ಸಂಶೋಧನೆ ನನ್ನ ಮುಖ್ಯ ಆಸಕ್ತಿ. ಈ ಕಾದಂಬರಿಯಲ್ಲಿ ಆ ಸಂಶೋಧನೆಯಾಧರಿತ ಅಂಶಗಳಿವೆ ಎಂದು ತಮ್ಮ ‘ಚಪಡ’ ಕಾದಂಬರಿಯ ಹುಟ್ಟಿನ ಕುರಿತಾದ ವಿಚಾರಗಳನ್ನು ಹಂಚಿಕೊಂಡರು.


ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ, ವಿವೇಕಾನಂದ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿ, ಸಮಾಜಕ್ಕೆ ಬೇಕಾದ ಸಂದೇಶ ಮಾಹಿತಿಗಳನ್ನು ಪುಸ್ತಕದ ನೀಡಬೇಕು. ಬರಹಗಳು ಸಹಜತೆಗೆ ಹತ್ತಿರವಾಗಿದ್ದಷ್ಟು ಅದಕ್ಕೆ ಮೌಲ್ಯಗಳು ಜಾಸ್ತಿ ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ.ಶ್ರೀಪತಿ ಕಲ್ಲೂರಾಯ ಮಾತನಾಡಿ, ಡಾ. ಶ್ರೀಧರ್ ಹೆಚ್.ಜಿ. ಅವರು ಲಾಕ್ ಡೌನ್ ಸಂದರ್ಭದಲ್ಲಿ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡ ಕಾರಣ, ಇಂತಹ ಅದ್ಭುತವಾದ ಕೃತಿರಚನೆಗೆ ಕಾರಣವಾಯಿತು. ಇದು ಉಳಿದವರಿಗೂ ಸ್ಪೂರ್ತಿದಾಯಕ ಎಂದು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಡಾ. ಶ್ರೀಧರ್ ಎಚ್.ಜಿ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಬೆಂಗಳೂರಿನ ಪುಸ್ತಕ ಪ್ರಕಾಶಕ ಸುರೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿಶ್ರಾಂತ ಉಪನ್ಯಾಸಕರು, ಆಡಳಿತ ಮಂಡಳಿಯ ಪದಾಧಿಕಾರಿಗಳು, ಸಾಹಿತ್ಯ ಪ್ರೇಮಿಗಳು ಮತ್ತು ವಿವೇಕಾನಂದ ಕಾಲೇಜಿನ ಉಪನ್ಯಾಸಕ ವೃಂದ ಭಾಗವಹಿಸಿದರು.


ಕಾರ್ಯಕ್ರಮದಲ್ಲಿ ತೃತೀಯ ಬಿ.ಎ ವಿದ್ಯಾರ್ಥಿನಿಯರಾದ ಸ್ವಾತಿ ಮತ್ತು ಶಿವಪ್ರಿಯ ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಸ್ವಾಗತಿಸಿದರು. ಐಕ್ಯೂಎಸಿ ಘಟಕದ ಸಂಚಾಲಕರು ಶಿವಪ್ರಸಾದ್ ವಂದಿಸಿದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾ ಕುಮಾರಿ ಟಿ. ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post