ಉಜಿರೆ: ಕಾಲೇಜು ದಿನಗಳು ವೇಗವಾಗಿ ಸಾಗುತ್ತವೆ, ಅದರ ಮಧ್ಯೆ ಅವಕಾಶ ಮತ್ತು ಜ್ಞಾನವನ್ನು ಉಪಯೋಗಿಸಿ ನೀವು ಹೇಗೆ ಅಭಿವೃದ್ಧಿ ಹೊಂದುತ್ತೀರಿ ಎಂಬುದು ಮುಖ್ಯ ಎಂದು ಕಾಮರ್ಸ್ ಮತ್ತು ಮ್ಯಾನೇಜ್ ಮೆಂಟ್ ಡೀನ್ ಡಾ. ಪಿ. ಎನ್. ಉದಯಚಂದ್ರ ಹೇಳಿದರು.
ಡಿ. 23ರಂದು ಶ್ರೀ ಧ. ಮಂ ಕಾಲೇಜಿನಲ್ಲಿ ಬಿಬಿಎ ವಿಭಾಗದ ಬಿಜ್-ವಿಜ್ ಡಿಜಿಟಲ್ ಬಿತ್ತಿಪತ್ರಿಕೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಇವರು ಡಿಜಿಟಲ್ ಮಾಧ್ಯಮ ಈಗ ಸಕ್ರಿಯವಾಗಿದ್ದು ಕೋರ್ಸೇರದಂತಹ ಆನ್ಲೈನ್ ಕೋರ್ಸ್ ಗಳಿಗೆ ಸೇರಿ ಜ್ಞಾನವನ್ನು ವೃದ್ಧಿಸಿ ಔದ್ಯೋಗಿಕ ಕೌಶಲ್ಯ ಹೊಂದಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಭಾಗದ ಮುಖ್ಯಸ್ಥ ರಾಕೇಶ್ ವಹಿಸಿದ್ದು ಅಧ್ಯಾಪಕರಾದ ಶರಶ್ಚಂದ್ರ ಕೆ.ಎಸ್, ಗುರುದಾಸ್ ಶೆಣೈ ಮತ್ತಿತರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪದ್ಮಶ್ರೀ ನಿರೂಪಿಸಿ, ಸ್ವಾತಿ ಪ್ರಾರ್ಥಿಸಿದರು. ರೂಪ ಸ್ವಾಗತಿಸಿ, ಸಿರಿ ವಂದಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ