ಭಗವದ್ಗೀತಾ ಕಂಠಪಾಠ ಸ್ಪರ್ಧೆ: 3ನೇ ತರಗತಿಯ ಪುಟಾಣಿ ಸಂವೃತಾ ಭಟ್‌ಗೆ ಕೇರಳ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ

Upayuktha
0


ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯದ ಮೂರನೇ ತರಗತಿಯ ವಿದ್ಯಾರ್ಥಿನಿ ಪುಟಾಣಿ ಸಂವೃತಾ ಭಟ್ ಪೇರಿಯ ಚಿನ್ಮಯ ಮಿಷನ್ ನವರು ನಡೆಸಿದ ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಕೇರಳ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾಳೆ. ಬಹುಮಾನವು ಹತ್ತು ಸಾವಿರ ರುಪಾಯಿ ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.


ಈ ಸ್ಪರ್ಧೆಯಲ್ಲಿ ಕೇರಳದ ಹಲವು ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವರ್ಷ ಕೆ.ಜಿ.ಯಿಂದ ಪ್ಲಸ್ ಟು ತನಕ 7 ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗಿತ್ತು. 23 ಶ್ಲೋಕಗಳನ್ನು ಕಂಠಪಾಠ ಮಾಡುವಂತೆ ಸೂಚಿಸಲಾಗಿತ್ತು. ಅವುಗಳಿಂದ ಆಯ್ದ ಶ್ಲೋಕಗಳನ್ನು ಕಂಠಪಾಠವಾಗಿ ಹೇಳುವಂತೆ ಸೂಚಿಸಲಾಗಿತ್ತು.


ಇವಳು ಗಣೇಶ ಭಟ್‌ ಪೇರಿಯ  ಮತ್ತು ಸ್ವಾತಿ ದಂಪತಿ ಸುಪುತ್ರಿ. ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದಾಗಲೂ ಪುಟಾಣಿ ಸಂವೃತಾ ಭಟ್ ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಕೇರಳ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ್ದಳು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top