ಗರುಡಾ ಮಾಲ್ ಗೆ ದಂಡ ವಿಧಿಸಿದ ಬಿಬಿಎಂಪಿ

Arpitha
0

ಬೆಂಗಳೂರು: ಕೋವಿಡ್ ಮುನ್ಸೂಚನೆಗಳನ್ನು ಪಾಲಿಸದೆ, ನಿಯಮಾವಳಿಗಳನ್ನು ಉಲ್ಲಂಘಿಸಿದ ಬೆಂಗಳೂರಿನ ಗರುಡ ಮಾಲ್ ಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು 20000 ರೂ ದಂಡ ವಿಧಿಸಿದ್ದಾರೆ.

ಕೊರೋನಾ ವೈರಸ್ ನ ರೂಪಾಂತರಿ ಓಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾಲ್ ಹಾಗೂ ಸಿನಿಮಾ ಮಂದಿರ ಪ್ರವೇಶಿಸುವ ಜನರು ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು. ಲಸಿಕೆ ಪಡೆಯದವರಿಗೆ ಪ್ರವೇಶ ನಿರ್ಬಂಧವೆಂಬ ಸೂಚನೆ ಕೂಡ ಇದೆ.

ಆದರೆ ಬೆಂಗಳೂರಿನ ಅಶೋಕನಗರದಲ್ಲಿರುವ ಗರುಡಾ ಮಾಲ್ ನಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಕೋವಿಡ್ ನಿಯಮ ಪಾಲನೆ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ನೋಟೀಸ್ ನೀಡಲಾಗಿದೆ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top