ಮೂಡುಬಿದಿರೆ: ಸೆಪ್ಟೆಂಬರ್ 2021 ರಲ್ಲಿ ನಡೆದ ಸರ್ಟಿಫೈಡ್ ಮ್ಯಾನೇಜ್ಮೆಂಟ್ ಎಕೌಂಟೆಂಟ್ (ಯು.ಎಸ್) ಪಾರ್ಟ್-2 ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಅಂತರಾಷ್ಟ್ರೀಯ ಕೋರ್ಸನ್ನು ಪ್ರಥಮ ಬಾರಿಗೆ ಪದವಿಯಲ್ಲಿ ಸೇರ್ಪಡೆಗೊಳಿಸಿದ್ದು, ವೃತ್ತಿಪರ ವಾಣಿಜ್ಯ ವಿಭಾಗದ ತೃತೀಯ ಬಿ.ಕಾಂ. ವಿದ್ಯಾರ್ಥಿನಿಯರಾದ ಅನನ್ಯ ಜೈನ್ 370/500 (74%) ಹಾಗೂ ಕೀರ್ತಿ ಶಂಕರ್ 360/500 (75%) ಈ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಮ್. ಮೋಹನ್ ಆಳ್ವ, ಪ್ರಾಂಶುಪಾಲರಾದ ಡಾ. ಕುರಿಯನ್, ವೃತ್ತಿಪರ ವಾಣಿಜ್ಯ ವಿಭಾಗದ ಮುಖ್ಯಸ್ಥ ಅಶೋಕ್ ಕೆ.ಜಿ. ಹಾಗೂ ಸಿ.ಎಮ್.ಎ. (ಯು.ಎಸ್) ಕೋರ್ಸ್ ಸಂಯೋಜಕಿ ಶಿಲ್ಪಾ ಭಟ್ ಎನ್.ಎಚ್. ಅಭಿನಂದಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ