ನ.14 ರಂದು ವಿದ್ವಾಂಸರಿಗೆ ‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ

Upayuktha
0


ಶ್ರೀಮಧ್ವ ಜಯಂತಿ ಅಂಗವಾಗಿ ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಿಗೆ ಇದೇ ನವೆಂಬರ್ 14, ಭಾನುವಾರ ಸಂಜೆ 4.30ಕ್ಕೆ ಬೆಂಗಳೂರು ಚಾಮರಾಜಪೇಟೆ ಶ್ರೀಮನ್ಮಾಧ್ವ ಸಂಘದಲ್ಲಿ ‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಶ್ವ ಮಧ್ವಮತ ವೆಲ್‌ಫೇರ್ ಅಸೋಸಿಯೇಷನ್ ಆಯೋಜಿಸಿದೆ.  


ಕನ್ನಡನಾಡಿನ ಹೆಮ್ಮೆಯ ಆಚಾರ್ಯ, ವಿಶ್ವಗುರು ಮಧ್ವಾಚಾರ್ಯರ‍ ಸಂದೇಶದ ಪ್ರಸಾರ ತನ್ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕೈಂಕರ್ಯ ಮಾಡುತ್ತಿರುವ ವಿ.ಎಂ.ಡ್ಲೂ.ಎ ವತಿಯಿಂದ ವಿಜಯದಾಸರ ಆರಾಧನೆಯಂದು ಪೂಜ್ಯ ಶ್ರೀ ಸುವಿದ್ಯೇಂದ್ರ ತೀರ್ಥರ ದಿವ್ಯ ಉಪಸ್ಥಿಯಲ್ಲಿ ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಾದ ಪ್ರಾಂಶುಪಾಲ ಡಾ.ಎಸ್.ಆರ್.ರಾಘವೇಂದ್ರ , ಕನ್ನಡ ಪ್ರಾಧ್ಯಾಪಕಿ ಡಾ.ವಾಣಿಶ್ರೀ ಬಿ.ಎಂ, ದಾಸ ಸಾಹಿತ್ಯ ಪ್ರಚಾರಕಿ ಗೀತಾಬಾಯಿ , ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯದ ಡಾ.ಪರಶುರಾಮ ಬೆಟಗೇರಿ ಹಾಗೂ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಇವರಿಗೆ ಪ್ರಥಮ ‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.  


ಇದೇ ಸಂದರ್ಭದಲ್ಲಿ ಯುವ ವಿದ್ವಾಂಸರಾದ ಭೀಮಸೇನ ದೇಸಾಯಿ , ರಾಘವೇಂದ್ರ ಆಚಾರ್ಯ, ಸಂಜೀವ ಆಚಾರ್ಯ, ಪ್ರಭಂಜನ ಆಚಾರ್ಯ, ಮಧ್ವೇಶ ಮೌದ್ಗಲ್ಯರವರನ್ನು ಸನ್ಮಾನಿಸಲಾಗುವುದು . ವಿ.ಎಂ.ಡ್ಲೂ.ಎ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ವೆಂಕೋಬ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.  


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top