ಮಂಗಳೂರು: ವಿಶ್ವವಿದ್ಯಾನಿಲಯದ ಸ್ನಾತಕ/ಸ್ನಾತಕೋತ್ತರ ಪದವೀಧರರಿಗೆ ಮತ್ತು ಐಟಿಐ, ಡಿಪ್ಲೋಮಾ ಹಾಗೂ ತಾಂತ್ರಿಕ ಪದವೀಧರರಿಗೆ ವಿಶ್ವವಿದ್ಯಾನಿಲಯ ತರಬೇತಿ ಮತ್ತು ಉದ್ಯೋಗ ಕೋಶ, ಹಾಗೂ ಉದ್ಯೋಗ ಮಾಹಿತಿ ಮಾರ್ಗದರ್ಶನ ಕೇಂದ್ರದ ವತಿಯಿಂದ ನಗರದ ಹಂಪನ ಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಆವರಣದಲ್ಲಿ ನವೆಂಬರ್ 16 ಮತ್ತು 17 (ಮಂಗಳವಾರ ಮತ್ತು ಬುಧವಾರ) ರಂದು ಬೆಳಗ್ಗೆ 9.30ರಿಂದ ಸಂಜೆ 5.30 ರವರೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಇನ್ಫೋಸಿಸ್, ಹೆಚ್‌ಎಸ್‌ಬಿಸಿ, ಕೋಟಕ್ ಮಹೇಂದ್ರ, ಯುರೇಕಾ ಫೋರ್ಬ್ಸ್, ಜೆಟ್‌ಕಿಂಗ್, ವಿನ್‌ಮ್ಯಾನ್ ಸಾಫ್ಟ್‌ವೇರ್, ಮಾಂಡವಿಮೋಟರ್ಸ್, ಶ್ರೀಸಾಯಿ ಎಂಟರ್ಪ್ರೈಸಸ್, ವಿ.ಕೆ. ಫರ್ನೀಚರ್ ಆಂಡ್ ಎಲೆಕ್ಟ್ರಾನಿಕ್ಸ್, ಜೋಯ್ ಅಲುಕಾಸ್, ಎ.ಜೆ. ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್, ದಿಯಾ ಸಿಸ್ಟಮ್ಸ್, ಕೆಫೆ ಕಾಫಿ ಡೇ, ಆಕ್ಸೆಂಚರ್ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕಂಪನಿಗಳು ತಮ್ಮ ಭಾಗವಹಿಸುವಿಕೆಯನ್ನು ಈಗಾಗಲೇ ಖಚಿತಪಡಿಸಿವೆ.
ಆಸಕ್ತ ಅಭ್ಯರ್ಥಿಗಳು ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳುವವರು https://docs.google.com/forms/d/e/1FAIpQLSeHpg5Tj2y7FjfynQVBpvX-bvkhGbuY-rtd16rYoVz19YwBHw/viewform?usp=sf_link ಕೊಂಡಿಯನ್ನು ಬಳಸಿಕೊಳ್ಳಬಹುದು. ಅಂಕಪಟ್ಟಿಯ ಮೂಲ ಪ್ರತಿ, ಭಾವಚಿತ್ರಗಳು ಮತ್ತು ತಮ್ಮ ಪರಿಚಯ ಪತ್ರದ (ಬಯೋಡೇಟಾ) ಕನಿಷ್ಠ ನಾಲ್ಕು ಪ್ರತಿಗಳನ್ನು ತರುವುದು ಕಡ್ಡಾಯವಾಗಿದೆ. ಅರ್ಹ ಪುರುಷ/ಮಹಿಳಾ ಅಭ್ಯರ್ಥಿಗಳನ್ನು ಕಂಪನಿಗಳು ನೇರ ನೇಮಕಾತಿ ಮಾಡಿಕೊಳ್ಳಲಿವೆ. ಆನ್‌ಲೈನ್‌ನಲ್ಲಿ ಸಂದರ್ಶನ ಪ್ರಕ್ರಿಯೆಗೂ ಅವಕಾಶ ಕಲ್ಪಿಸಲಾಗಿದೆ. ಮೊದಲ ದಿನ ಅವಕಾಶ ಸಿಗದವರು ಎರಡನೇ ದಿನ ಭಾಗವಹಿಸಬಹುದು ಎಂದು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.
ಉದ್ಘಾಟನಾ ಕಾರ್ಯಕ್ರಮ:
ನವೆಂಬರ್ 16 ರಂದು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಉದ್ಯೋಗ ಮೇಳದ ಉದ್ಘಾಟನೆ ಜರುಗಲಿದೆ. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್, ಸಿಐಐ ಮಾಜಿ ಅಧ್ಯಕ್ಷ ಪ್ರಕಾಶ್ ರಾವ್ ಕಲ್ಬಾವಿ, ಮಂಗಳಾ ಅಲ್ಯುಮಿನಿ ಅಸೋಸಿಯೇಶನ್ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ವಿನಯ ರಾಜ್ ಎ ಸಿ ಮುಖ್ಯ ಅತಿಥಿಗಳಾಗಿ ಇರಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:
ಶಾರದಾ ಸೋಮಯಾಜಿ: 6363022303
ಗುರುಪ್ರಸಾದ್ ಟಿಎನ್: 9964939267