ಪೊಲೀಸರಿಂದ ಕಾರಿಂಜದಲ್ಲಿ ಬ್ಯಾನರ್ ಅಳವಡಿಕೆ

Upayuktha
0 minute read
0

 


ಕಾರಿಂಜ: ದೇವಸ್ಥಾನಕ್ಕೆ ಧಕ್ಕೆ ತರುವ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಪೊಲೀಸರು ಈ ಬಗ್ಗೆ ಎಚ್ಚರಿಕೆಯ ಬ್ಯಾನರ್ ಒಂದನ್ನು ಕಾರಿಂಜೇಶ್ವರ ದೇವಸ್ಥಾನದ ಪ್ರದೇಶದಲ್ಲಿ ಅಳವಡಿಸಿದ್ದಾರೆ.


ಕಾವಳಮೂಡೂರು ಗ್ರಾಮದ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಪರಿಸರದಲ್ಲಿ ದೇಗುಲದ ಪಾವಿತ್ರ್ಯಕ್ಕೆ ಧಕ್ಕೆ ಉಂಟು ಮಾಡುವ ಮಧ್ಯಪಾನ, ಧೂಮಪಾನ ಅಥವಾ ಇನ್ಯಾವುದೇ ಅನೈತಿಕ ಚಟುವಟಿಕೆಗಳನ್ನು ಮಾಡಬಾರದು.


ಇಂತಹ ಚಟುವಟಿಕೆಗಳು ಪರಿಸರದಲ್ಲಿ ಕಂಡುಬಂದಲ್ಲಿ ತುರ್ತು ಸ್ಪಂದನ ಸೇವಾ ಸೇವೆ ನಂಬರ್ (ERSS) 112,  ಪುಂಜಾಲಕಟ್ಟೆ ಪೊಲೀಸ್ ಠಾಣೆಯ 08256-279375, 8 27798 6411 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಎಂಬುದಾಗಿ ಪೊಲೀಸರು ಈ ಬ್ಯಾನರ್ ನಲ್ಲಿ ಪ್ರಕಟಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top