||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಕ್ಷಮ-ಪತಂಜಲಿ ಸಹಯೋಗದಲ್ಲಿ ಹೊಲಿಗೆ ಯಂತ್ರ ವಿತರಣೆ

ಸಕ್ಷಮ-ಪತಂಜಲಿ ಸಹಯೋಗದಲ್ಲಿ ಹೊಲಿಗೆ ಯಂತ್ರ ವಿತರಣೆಮಂಗಳೂರು: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಪತಂಜಲಿ ಉತ್ಪನ್ನಗಳ ಮಳಿಗೆ ಸುರತ್ಕಲ್ ಇವರ ಸಹಯೋಗದಿಂದ ಬುಧವಾರ (ನ.3) ಸುರತ್ಕಲ್ಲಿನ ಪತಂಜಲಿ ಉತ್ಪನ್ನಗಳ ಮಳಿಗೆಯಲ್ಲಿ ಸಕ್ಷಮದಿಂದ ಗುರುತಿಸಲ್ಪಟ್ಟ ವಿಶೇಷ ಚೇತನರಾದ ವಿಕ್ರಮ್‌ ಅವರಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ನೆರವೇರಿತು.


ಪತಂಜಲಿ ಮಳಿಗೆಯ ಮಾಲಕರಾದ ಶ್ರೀಯುತ ರಮೇಶ್ ಅಂಚನ್ ಜಿ ಅವರು ಸುಮಾರು 12,000 ರೂಪಾಯಿ ಮೊತ್ತದ ಹೊಲಿಗೆ ಯಂತ್ರದ ಧನಸಹಾಯವನ್ನು ನೀಡಿ ಹೊಲಿಗೆ ಯಂತ್ರವನ್ನು ವಿಶೇಷಚೇತನರಾಗಿರುವ ವಿಕ್ರಮ್ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುರತ್ಕಲ್‌ನ ಸಂಘ ಚಾಲಕರಾದ ಕೃಷ್ಣಮೂರ್ತಿಯವರು ಭಾಗವಹಿಸಿ ಶುಭ ಹಾರೈಸಿದರು.


ಸಕ್ಷಮ ಕರ್ನಾಟಕದ ಕೋಶಾಧಿಕಾರಿ ಜಯದೇವ ಕಾಮತ್, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಕೃಷ್ಣ ಪೂಜಾರಿ, ಕಾರ್ಯದರ್ಶಿ ಹರೀಶ್ ಪ್ರಭು, ಪದಾಧಿಕಾರಿಗಳಾದ ರಾಜಶೇಖರ್ ಭಟ್ ಕಾಕುಂಜೆ, ಮತ್ತು ಅನುಷ ಭಟ್ ಉಪಸ್ಥಿತರಿದ್ದರು. ಸಕ್ಷಮ ಕರ್ನಾಟಕದ ಜಯದೇವ ಕಾಮತ್ ಅವರು ಸಕ್ಷಮದ ಧ್ಯೇಯ ಮತ್ತು ಉದ್ದೇಶಗಳ ಬಗ್ಗೆ ವಿವರಿಸಿ ಧನ್ಯವಾದಗಳನ್ನು ಸಮರ್ಪಿಸಿದರು.

Upayuktha


0 Comments

Post a Comment

Post a Comment (0)

Previous Post Next Post