ನಿಟ್ಟೆ: ಕೆಬಿಎಲ್‌ ಕೌನ್‌ ಬನೇಗಾ ಉದ್ಯಮಪತಿ ರಿಯಾಲಿಟಿ ಶೋ

Upayuktha
0

 


ನಿಟ್ಟೆ: ಕೆಬಿಎಲ್ ಕೌನ್ ಬನೇಗಾ ಉದ್ಯಮಪತಿ (ಕೆಬಿಯು) ಸ್ಪರ್ಧೆಯು ರಿಯಾಲಿಟಿ ಟಿವಿ ಶೋ ಆಗಿದ್ದು ಭವಿಷ್ಯದ ಯುವ ಉದ್ಯಮಿಗಳಿಗೆ ಒಂದು ಅತ್ಯುತ್ತಮ ವೇದಿಕೆಯನ್ನು ಕಲ್ಪಿಸುತದೆ ಹಾಗು ಅವರ ಆಲೋಚನೆ ಮತ್ತು ಪ್ರತಿಭೆಯನ್ನು ಗುರುತಿಸುವ ಮೂಲಕ ಉದ್ಯಮಶೀಲತೆಯನ್ನು ಉತ್ತೇಜಿಸುವುದೇ ಈ ಕಾರ್ಯಕ್ರಮದ ಆದ್ಯತೆಯಾಗಿದೆ.


ಆರಂಭಿಕ ಹಂತದ ಸ್ಟಾರ್ಟ್‌ಪ್‌ಗಳನ್ನು ಸಶಕ್ತಗೊಳಿಸಲು ಮತ್ತು ಅಗತ್ಯ ಮಾರ್ಗದರ್ಶನ ನೀಡಲು ಹಾಗು ಬಂಡವಾಳ ಹೂಡಿಕೆಯ ಅವಕಾಶಗಳನ್ನು ಕಲ್ಪಿಸಲು ಹಾಗು ಎಲ್ಲ ರೀತಿಯ ಸಹಾಯ ಮಾಡುವ ನಿಟ್ಟಿನಲ್ಲಿ ಈ ಪರಿಕಲ್ಪನೆಯನ್ನು ರಚಿಸಲಾಗಿದೆ.


500ಕ್ಕೂ ಅಧಿಕ ಸ್ಟಾರ್ಟಪ್‌ಗಳು ಈಗಾಗಲೇ ತಮ್ಮ ಹೆಸರು ನೋಂದಣಿ ಮಾಡಿದ್ದು, ಅತೀ ಒಳ್ಳೆಯ 20 ಸ್ಟಾರ್ಟ್‌ಪ್‌ಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ. ಸ್ಟಾರ್ಟಪ್‌ಗಳು ತಮ್ಮ ಹೊಸ ಪರಿಕಲ್ಪನೆಯ ಆಲೋಚನೆ, ಅಭಿಪ್ರಾಯಗಳನ್ನು 2021ರ ನವೆಂಬರ್‌ 28ರಿಂದ ನಮ್ಮ ಕುಡ್ಲ 24X7ನ ವಾಹಿನಿಯಲ್ಲಿ ನಡೆಯುವ ನೇರಪ್ರಸಾರದಲ್ಲಿ ಪಾಲ್ಗೊಂಡು ತಮ್ಮ ಅನ್ವೇಷಣಗಳ ಮಂಡನೆ ಮಾಡಲಿದ್ದಾರೆ. ಪ್ರತಿ ಸಂಚಿಕೆಯಲ್ಲಿ 5 ಮಂದಿ ಆಯ್ದ ಯುವ ಉದ್ಯಮಿಗಳು ಪಾಲ್ಗೊಳ್ಳಲಿದ್ದು ಅದರಲ್ಲಿ ಒಬ್ಬರನ್ನು ವಿಜೇತರಾಗಿ ಆಯ್ಕೆ ಮಾಡಲಾಗುವುದು.


ನವೆಂಬರ್‌ 28ರಂದು ಸಂಜೆ 6 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ನಿಟ್ಟೆ–ಕೆಬಿಎಲ್ ಕೌನ್ ಬನೇಗಾ ಉದ್ಯಮಪತಿ (ಕೆಬಿಯು) ಸ್ಪರ್ಧೆಯನ್ನು ನಿಟ್ಟೆ ಡೀಮ್ಡ್‌ ವಿಶ್ವವಿದ್ಯಾನಿಲಯದ ಉಪಕುಲಪತಿ ಶ್ರೀ ಡಾ. ಸತೀಶ್ ಕುಮಾರ್ ಭಂಡಾರಿ ಉದ್ಘಾಟಿಸಿದರು.


ಕರ್ಣಾಟಕ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ವಿನಯ ಭಟ್ ಮತ್ತು ರೈತ ಉತ್ಪಾದಕ ಸಂಸ್ಥೆಗಳ ಶ್ರೇಷ್ಠತಾ ಕೇಂದ್ರದ ನಿರ್ದೇಶಕರಾದ ಶ್ರೀ ಡಾ. ಅಶೋಕ್ ಆಲೂರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.


ಕೌನ್ ಬನೇಗಾ ಉದ್ಯಮಪತಿ ಕಾರ್ಯಕ್ರಮದ ಹಿನ್ನಲೆಯ ಕುರಿತು ವಿಚಾರ ನೀಡಿದ ಎ.ಐ.ಸಿ ನಿಟ್ಟೆಯ ಮುಖ್ಯ ಕಾರ್ಯ ನಿರ್ವಾಹಣ ಅಧಿಕಾರಿ ಡಾ. ಎ. ಪಿ ಆಚಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಅತಿಥಿಗಳನ್ನು ಸ್ವಾಗತಿಸಿದರು.


ಕಾರ್ಯಕ್ರಮ ಉದ್ಘಾಟಿಸಿದ ಡಾ. ಸತೀಶ್ ಕುಮಾರ್ ಭಂಡಾರಿ ಕೌನ್‌ ಬನೇಗಾ ಉದ್ಯಮಪತಿ ಕಾರ್ಯಕ್ರಮವು ಭವಿಷ್ಯದ ಉದ್ಯಮಿಗಳನ್ನು ರೂಪಿಸುವ ಉದ್ದೇಶ ಹೊಂದಿದೆ. ಸರಕಾರದ ಹಲವಾರು ಕಾರ್ಯಕ್ರಮಗಳ ಮೂಲಕ ಉದ್ಯಮಶೀಲತೆಯನ್ನು ಬೆಂಬಲಿಸುತ್ತದೆ . ಈ ದಿಸೆಯಲ್ಲಿ ನಿಟ್ಟೆ ವಿಶ್ವವಿದ್ಯಾಲಯವು ಎ.ಐ.ಸಿ- ನಿಟ್ಟೆಯ ಮುಖಾಂತರ ವಿನೂತನ ಕಾರ್ಯಕ್ರಮ ರೂಪಿಸಿದೆ ಎಂದರು.


ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಶ್ರೀ ವಿನಯ ಭಟ್ ಪ್ರದಾನ ವ್ಯವಸ್ಥಾಪಕರು ಕರ್ನಾಟಕ ಬ್ಯಾಂಕ್, ಮಾತನಾಡಿ ಉದ್ಯಮ ಶೀಲತೆಯನ್ನು ಅರ್ಥಪೂರ್ಣವಾಗಿ ಮಾಡುವಲ್ಲಿ ಕರ್ನಾಟಕ ಬ್ಯಾಂಕ್ ಸದಾ ಸಹಕಾರ ನೀಡುವುದಲ್ಲದೆ ಮುಂದೆಯೂ ಈ ನಿಟ್ಟಿನಲ್ಲಿ ರಾಜ್ಯದ ಉದ್ಯಮಶೀಲರಿಗೆ ಎಲ್ಲ ಸಹಕಾರ ಸವಲತ್ತು ಕಲ್ಪಿಸುವ ಮೂಲಕ ಉದ್ಯಮಿಗಳನ್ನು ರೂಪಿಸುವಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.


ಕಾರ್ಯಕ್ರಮದ ಇನ್ನೊಬ್ಬ ಮುಖ್ಯ ಅತಿಥಿ ಡಾ. ಅಶೋಕ್ ಆಲೂರ್ ಉತ್ಪಾದಕ ಸಂಸ್ಥೆಗಳ ಶ್ರೇಷ್ಠತಾ ಕೇಂದ್ರದ ನಿರ್ದೇಶಕರು ಮಾತನಾಡಿದರು. ಕರ್ನಾಟಕದಲ್ಲಿ ಉದ್ಯಮಶೀಲತೆಯನ್ನು ಬೆಂಬಲಿಸುವಲ್ಲಿ ಎ.ಐ.ಸಿ- ನಿಟ್ಟೆ ಒಂದು ಹೊಸ ಇತಿಹಾಸ ನಿರ್ಮಿಸಿದೆ. ಕರ್ನಾಟಕ ಸರಕಾರದ ಸ್ಟಾರ್ಟಪ್‌ ನೀತಿಯೂ ಕೂಡ ಕರ್ನಾಟಕದಲ್ಲಿ ಉದ್ಯಮಶೀಲತೆಯನ್ನು ಬೆಂಬಲಿಸುತ್ತದೆ.


ಕರ್ನಾಟಕ ಸರಕಾರದ ಸಹಕಾರದೊಂದಿಗೆ ರಾಜ್ಯಮಟ್ಟದಲ್ಲಿ ಕೌನ್ ಬನೇಗಾ ಉದ್ಯಮಪತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಕರ್ನಾಟಕ ಸರಕಾರದ ಮಾನ್ಯ ಕೈಗಾರಿಕಾ ಸಚಿವರಾದ ಶ್ರೀ ಮುರುಗೇಶ್ ನಿರಾಣಿಯವರು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ನಮ್ಮ ಕುಡ್ಲದ ಮುಖ್ಯಸ್ಥರಾದ ಶ್ರೀ ಲೀಲಾಕ್ಷ ಕರ್ಕೇರ, ವಿಗ್ನಾರ್ತ ಹಿಂದೂಸ್ತಾನ್ ಆಗ್ರೋ ಟೆಕ್ನಾಲಾಜಿನ ನಿರ್ದೇಶಕ ತಿಲಕ್ ಭಾಗವಹಿಸಿದ್ದರು. ಎ.ಐ.ಸಿ ನಿಟ್ಟೆಯ ಪುನೀತ್ ರೈ ಕಾರ್ಯಕ್ರಮವನ್ನು ನಿರ್ವಹಿಸಿದರು ಹಾಗೂ ದೀಕ್ಷಾ ರೈ ವಂದನಾರ್ಪಣೆಯನ್ನು ಸಲ್ಲಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top