ಡೌನ್ಲೋಡ್‌ ಜೊತೆಗೆ ಅಪ್ಲೋಡ್ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ : ಡಾ. ವಿಶ್ವನಾಥ ಬದಿನಾಕ

Upayuktha
0


ಉಜಿರೆ ಎಸ್.ಡಿ. ಎಂ. ಕಾಲೇಜಿನಲ್ಲಿಅತಿಥಿ ಉಪನ್ಯಾಸ ಕಾರ್ಯಕ್ರಮ


ಉಜಿರೆ: "ಆಧುನಿಕ ತಂತ್ರಜ್ಞಾನಗಳು ಮುಂಚೂಣಿಯಲ್ಲಿದೆ. ಈಗ ನಾವು ಪುಸ್ತಕಗಳಿಗಾಗಿ ಪರದಾಡುವಂತಿಲ್ಲ. ಡಿಜಿಟಲ್ ಗ್ರಂಥಾಲಯಗಳು ನಮ್ಮ ಬಳಿಯೇ ಲಭ್ಯವಿವೆ. ಹಾಗಾಗಿ ಜ್ಞಾನ ಪ್ರಸರಣೆ ಅನ್ನುವುದು ಸುಲಭವಾಗಿದೆ. ನಾವು ನಮ್ಮ ಕನ್ನಡ ಭಾಷೆಯನ್ನು ಪ್ರಪಂಚದ ಜ್ಞಾನಕ್ಕೆ ಪಸರಿಸಬೇಕು". ಎಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ವಿಶ್ವನಾಥ ಬದಿನಾಕ ಅಭಿಪ್ರಾಯಪಟ್ಟರು.


ಇವರು ಉಜಿರೆಯ ಶ್ರೀ ಧ.ಮಂ. ಪದವಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಪತ್ರಿಕೋದ್ಯಮ ವಿಭಾಗದ ಸಹ ಭಾಗಿತ್ವದಲ್ಲಿ ನಡೆದ "ಕನ್ನಡವನ್ನು ತಂತ್ರಜ್ಞಾನದೊಂದಿಗೆ ಬಳಸುವುದು ಹೇಗೆ? " ಎಂಬ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. "ಕಾಲ ಬದಲಾದ ಹಾಗೆ ಮಾಹಿತಿಗಳ ಸ್ವೀಕಾರವು ಬದಲಾಗುತ್ತಿದೆ. ನಾವುಗಳು ಡೌನ್ಲೋಡ್ ಸಂಸ್ಕೃತಿಯ ಬದಲು ಅಪ್ಲೋಡ್ ಸಂಸ್ಕೃತಿಯನ್ನು ಬೆಳೆಸಿಕೊಳ್ಳೋಣ" ಎಂದು ಅವರು ನುಡಿದರು.


ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರ್ ಮಾತನಾಡಿ, ಕನ್ನಡ ಲಿಪಿಯ ಕೆಲವೊಂದು ಕುತೂಹಲಕಾರಿ ವಿಷಯಗಳನ್ನು ತಿಳಿಸಿಕೊಟ್ಟರು. 


ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗ್ಡೆ ಉಪಸ್ಥಿತರಿದ್ದರು. ಜೊತೆಗೆ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾಲೇಜಿನ ಕನ್ನಡ ಪ್ರಾಧ್ಯಾಪಕ ರವಿಶಂಕರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಡಾ. ಬಿ.ಪಿ ಸಂಪತ್‌ ಕುಮಾರ್ ವಂದಿಸಿದರು.


ವರದಿ: ಅರವಿಂದ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top