ಸಬ್ಕಾ ಸುನನಾ, ದಿಲ್‌ಕಾ ಕರನ್ ತತ್ವ ಅನುಸರಿಸಿ: ಡಾ ಪಿ ವಿ. ಭಂಡಾರಿ

Upayuktha
0


 

ಆಳ್ವಾಸ್ ಆಗಮನ 2021-22ರ ಸರಣಿ ಕಾರ್ಯಕ್ರಮ


ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಡೆಯುತ್ತಿರುವ ಆಳ್ವಾಸ್ ಆಗಮನ 2021-22ರ ಸರಣಿ ಕಾರ್ಯಕ್ರಮದ ಭಾಗವಾಗಿ, ಐದನೇ ದಿನ ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಯ ನಿರ್ದೇಶಕ ಹಾಗೂ ಮನೋವೈದ್ಯ ಡಾ. ಪಿ. ವಿ. ಭಂಡಾರಿ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.


ಜೀವನದಲ್ಲಿ ಒಳ್ಳೆಯ ಅಂಶಗಳನ್ನು ರೂಢಿಸಿಕೊಳ್ಳಲು ಬಾಹ್ಯವಾಗಿ ಹಾಗೂ ಆಂತರಿಕವಾಗಿ ಹೆಚ್ಚಿನ ಶ್ರಮದ ಅಗತ್ಯವಿದೆ. ನಮ್ಮ ಸ್ನೇಹಿತರ ಬಳಗದಿಂದ ನಾವು ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದು, ಹಾಗೂ ಅವನತಿಯ ದಾರಿಯನ್ನು ಹಿಡಿಯಲು ಸಾಧ್ಯ. ಆದ್ದರಿಂದ ನಮ್ಮ ಸಮೃದ್ಧಿಗಾಗಿ ‘’ಸಬ್ಕಾ ಸುನನಾ, ದಿಲ್‌ಕಾ ಕರನ್’’ ತತ್ವವನ್ನು ಅನುಸರಿಸಿದರೆ ಜೀವನ ಸುಖಕರವಾಗಿರಲು ಸಾಧ್ಯ ಎಂದರು.  


ಉಪನ್ಯಾಸದಲ್ಲಿ ಪರೀಕ್ಷಾ ಭಯ, ಸಾಮಾಜಿಕ ಆತಂಕ, ಖಿನ್ನತೆ, ಹೊಂದಾಣಿಕೆಯ ಸಮಸ್ಯೆ, ಕಾಲೇಜುಗಳು ಎದುರಿಸುತ್ತಿರುವ ಸವಾಲುಗಳು, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಮಾನಸಿಕ ಒತ್ತಡಗಳು, ಈ ವಿಷಯದ ಅಗತ್ಯತೆ, ಅದನ್ನು ನಿರ್ವಹಿಸುವ ವಿಧಾನಗಳು, ಸವಾಲಿನ ಪರಿಹಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.


ಮಾದಕ ವಸ್ತುಗಳ ದಾಸರಾಗುವುದು ಚಕ್ರವ್ಯೂಹದಲ್ಲಿ ಸಿಲುಕಿಕೊಂಡಂತೆ. ಒಮ್ಮೆ ಆ ಪಾಶದಲ್ಲಿ ಸಿಲುಕಿದರೆ, ಮತ್ತೆ ಹಿಂತಿರುಗಿ ಬರಲು ಅಸಾಧ್ಯ. ಆದ್ದರಿಂದ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ನೆಮ್ಮದಿ ಹಾಗೂ ಸುಂದರ ಜೀವನ ನಡೆಸಲು ಸಾಧ್ಯ ಎಂದು ಯುವಜನತೆ ಅರಿಯಬೇಕು ಎಂದರು.


ನಂತರ ಆಳ್ವಾಸ್ ಕಾಲೇಜಿನ ಪ್ರಾಚಾರ‍್ಯ ಡಾ ಕುರಿಯನ್, ಸ್ಚಚ್ಛ ಮನಸ್ಸ ಕಾರ್ಯಕ್ರಮದ ಸಂಯೋಜಕ ರಂಜನ್ ಬೆಲ್ಲರ್ಪಾಡಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.


ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ , ಎಐಇಟಿ ಪ್ರಾಚಾರ್ಯ ಡಾ ಪೀಟರ್ ಫೆರ್ನಾಂಡೀಸ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮೋನಿಕಾ ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top