ಇತ್ತೀಚೆಗೆ ನಾದಬ್ರಹ್ಮ ಡಾ.ಹಂಸಲೇಖ ಅವರು ಪೇಜಾವರ ಶ್ರೀಗಳ ಬಗ್ಗೆ ಕಾರ್ಯಕ್ರಮ ಒಂದರಲ್ಲಿ ಹಗುರವಾಗಿ ಮಾತನಾಡಿದ್ದರು. ಇದರಿಂದ ಈ ವಿಚಾರ ಕರ್ನಾಟಕದ ಎಲ್ಲೆಡೆ ವ್ಯಾಪಕವಾಗಿ ಚರ್ಚೆಗೀಡಾಗಿತ್ತು. ಎಲ್ಲರೂ ಹಂಸಲೇಖ ಅವರನ್ನು ವಿರೋಧಿಸಲು ಆರಂಭಿಸಿದರು. ಇದೀಗ ಕನ್ನಡ ಚಲನಚಿತ್ರದ ನಟ ಜಗ್ಗೇಶ್ ಅವರು ಈ ಕುರಿತಾಗಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, 'ಮಾತು ಬಲ್ಲವನಿಗೆ ಚಪ್ಪಾಳೆ ಮೃಷ್ಟಾನ್ನದಂತೆ ಆದರೂ ಆ ಮಾತು ಹೊಟ್ಟೆ ತುಂಬಿಸದು. ಮಾತು ಕೆಟ್ಟರೆ ಆ ಮೃಷ್ಟಾನ್ನವೇ ವಿಷವಾಗಿ ಅಜೀರ್ಣ ಆಗುವುದು. ಸಾಮಾಜಿಕ ಕ್ಷೇತ್ರ ಹಗ್ಗದ ಮೇಲಿನ ನಡಿಗೆ! ಪಡೆಯುವುದು ಸುಲಭ ಕಳೆದುಕೊಳ್ಳಲು ಕ್ಷಣ ಸಾಕು' ಎಂದು ಬರೆಯುವ ಮೂಲಕ ಮಾರ್ಮಿಕವಾಗಿ ನಾದಬ್ರಹ್ಮ ಹಂಸಲೇಖ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಇದರೊಂದಿಗೆ ಬಸವಣ್ಣನವರ ವಚನದ ಮುಖಾಂತರ ಹಂಸಲೇಖರಿಗೆ ಕಿವಿಮಾತನ್ನು ಹೇಳಿರುವ ಜಗ್ಗೇಶ್ ಅವರು 'ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಖಃಕ್ಕೆ ಅಳುವವರ ಮೆಚ್ಚ ! ಕೂಡಲ ಸಂಗಮದೇವ ಎಂಬ ವಚನವನ್ನು ಕೂಡಾ ಪೋಸ್ಟ್ ಮಾಡಿದ್ದಾರೆ.