ಅರ್ಧ ಶತಕವು ಕೂಡ ತಲುಪಿಲ್ಲ ನೋಡಿ
ವಿಧಿಯ ಆಟವು ಕೂಡ ನಿಲಲಿಲ್ಲ ನೋಡಿ
ಪ್ರತಿಭೆಗಳು ಹುಟ್ಟಿನಲೆ ಇರುವವರು ವಿರಳ
ಆ ವಿಧಿಯ ನಿರ್ಣಯವು ಸರಿಯಿಲ್ಲ ನೋಡಿ
ಮರೆಯಲ್ಲಿಯೇ ಸೇವೆ ಮಾಡುವವರಪರೂಪ
ಬರಲೆ ಬಾರದು ಮರಣ ಹೀಗೆಲ್ಲ ನೋಡಿ
ಸಿಟ್ಟಿರದೆ ಬಾಳುವನು ಸಂಸ್ಕಾರವಂತ ಪ್ರತಿನಿತ್ಯ
ಯಾರಿಗೂ ಬೇಡಾಗಿ ಪುನೀತ ಇರಲಿಲ್ಲ ನೋಡಿ
ಅಪರಾಧಗಳ ಮಾಡಿ ಮೆರೆಯುವವರಿಹರು
ಪ್ರಕರಣದಿ ಲೋಹಿತನು ಸಿಲುಕಿಲ್ಲ ನೋಡಿ
ಹಣವಿರಲು ಮದತುಂಬಿ ಕೊಬ್ಬುವವರೇ ಅಧಿಕ
ಸರಳತೆಯ ರಾಜಪುತ್ರನು ಮರೆತಿಲ್ಲ ನೋಡಿ
ಬೆಟ್ಟದಾ ಹೂವನ್ನು ಬಾಲ್ಯದಲೆ ತಂದವನು ಅಪ್ಪು
ಅಟ್ಟಿದನು ನಾಕದೆಡೆ ದೇವನವ ತರವಲ್ಲ ನೋಡಿ
-ಡಾ ಸುರೇಶ ನೆಗಳಗುಳಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ