ಗೃಹರಕ್ಷಕ ದಳ ಉಳ್ಳಾಲ ಘಟಕದಿಂದ ಶಕ್ತಿನಗರದ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಛತಾ ಅಭಿಯಾನ

Upayuktha
0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಉಳ್ಳಾಲ ಘಟಕದ ವತಿಯಿಂದ ಶಕ್ತಿನಗರದ ಹಿಂದೂ ರುದ್ರಭೂಮಿಯಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.


ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಮಾತನಾಡಿ, ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ನಾವು ಆಸಕ್ತಿ ವಹಿಸಿ ಶುಚಿಯಾಗಿಟ್ಟುಕೊಳ್ಳಬೇಕು. ನಮ್ಮ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡುವ ಹಾಗೆ ಪರಿಸರದ ಸ್ವಚ್ಛತೆಗೂ ನಾವು ಮೊದಲ ಆದ್ಯತೆ ನೀಡಬೇಕು ಎಂದು ನುಡಿದರು.


ಈ ಕಾರ್ಯಕ್ರಮದಲ್ಲಿ ಹಿಂದೂ ರುದ್ರಭೂಮಿಯ ಉಸ್ತುವಾರಿ ಪದ್ಮನಾಭ ಮತ್ತು ಉಳ್ಳಾಲ ಘಟಕದ ಗೃಹರಕ್ಷಕರಾದ ಸುನೀಲ್, ಧನಂಜಯ್, ಅಬ್ದುಲ್ ಸಮದ್, ರಂಜಿತ್, ಹಾಗೂ ಮಂಗಳೂರು ಘಟಕದ ಗೃಹರಕ್ಷಕರಾದ ಸುನೀಲ್ ಕುಮಾರ್, ದಿವಕರ್, ಕನಕಪ್ಪ, ರೇವತಿ ಮುಂತಾದವರು ಭಾಗವಹಿಸಿದ್ದರು.

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top