|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಚಾರವಂತರಾದವರು, ಆಚಾರವಂತರೂ ಆಗಬೇಕು: ಡಿ. ಹರ್ಷೇಂದ್ರ ಕುಮಾರ್

ವಿಚಾರವಂತರಾದವರು, ಆಚಾರವಂತರೂ ಆಗಬೇಕು: ಡಿ. ಹರ್ಷೇಂದ್ರ ಕುಮಾರ್

ಭಜನಾ ತರಬೇತಿ ಕಮ್ಮಟ



ಧರ್ಮಸ್ಥಳ: ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳಧಲ್ಲಿ ನಡೆಯುತ್ತಿರುವ 23 ನೇ ವರ್ಷದ ಭಜನಾ ತರಬೇತಿ ಕಮ್ಮಟಕ್ಕೆ ಆಗಮಿಸಿದ ಶ್ರೀ ಡಿ. ಹರ್ಷೇಂದ್ರ ಕುಮಾರ್ ರವರು, ಮಾತನಾಡಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.


ಕ್ಷೇತ್ರದಲ್ಲಿ ನಡೆಯುವ ಶಿಬಿರದಲ್ಲಿ ಕಲಿಕೆ ಪ್ರಧಾನವಾಗಿರಬೇಕು. ವಿಚಾರವಂತರಾದ ನಾವು ಆಚಾರವಂತರೂ ಆಗಬೇಕು. ಪ್ರತಿ ಮನೆಯಲ್ಲಿಯೂ ಭಜನೆ ಪಾರಂಭ ಮಾಡಬೇಕು. ಭಜನಾ ಸಂಸ್ಕಾರ ಬೆಳೆಸಿಕೊಳ್ಳಬೇಕು. ಹಣ ಶಾಶ್ವತವಲ್ಲ ಸಂಸ್ಕಾರವೇ ಶಾಶ್ವತ ಸಂಪತ್ತು ಆಗಿದೆ. ಇಲ್ಲಿಂದ ಒಳ್ಳೆಯ ವಿಷಯವನ್ನು ಕಲಿತು ಮುಂದಿನ ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು. ಪ್ರತಿ ರಾತ್ರಿ 10 ನಿಮಿಷ ನಮ್ಮನ್ನು ನಾವು ಅರಿತುಕೊಳ್ಳುವ ಮೂಲಕ ಯುವಕರು ಸ್ನೇಹಿತರಿಗೆ ಕೊಡುವ ಬೆಲೆಯನ್ನು  ಮನೆಯವರಿಗೂ ಕೊಡಬೇಕು ಎಂದು ಸಲಹೆ ನೀಡಿದರು.


ಪೂಜ್ಯರು ನಡೆಸುತ್ತಿರುವ ಭಜನಾ ತರಬೇತಿ ಕಾರ್ಯಕ್ರಮವು ವೈಶಿಷ್ಯ ಪೂರ್ಣವಾದದ್ದು, ಗ್ರಾಮೀಣ ಭಾಗಗಳಲ್ಲಿ ತಾವೆಲ್ಲರೂ ಸಂಪನ್ಮೂಲ ವ್ಯಕ್ತಿಗಳಾಗಿ ತಯಾರಾಗಬೇಕು. ತಮ್ಮ ಸಂಘಟನೆಯನ್ನು ಭದ್ರಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿರಿ ನಾವೆಲ್ಲರೂ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ದೇವರ ಸೃಷ್ಠಿಯಲ್ಲಿ ಮಾನವರು, ದಾನವರು ಎಂದು ಎರಡು ವಿಧ. ನಾವು ಮಾನವರಾಗಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ನಾವು ನಡೆದಾಗ ಉತ್ತಮ ಸಮಾಜದ ನಿರ್ಮಾಣವಾಗುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಸಂಪನ್ಮೂಲ ವ್ಯಕಿಗಳಾಗಿ ಆಗಮಿಸಿದ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಹಾಗೂ ಶ್ರೀ ವಿವೇಕ್ ವಿನ್ಸೆಂಟ್ ಪಾ0iÀiï್ಸ ಆರೋಗ್ಯಕರ ಅಭ್ಯಾಸಗಳ ಬಗ್ಗೆ ಮಾಹಿತಿ ನೀಡಿದರು.


ಮಾಣಿಲ ಶ್ರೀ ಧಾಮ ಪ್ರತಿಷ್ಠಾನದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯವರು ಕಮ್ಮಟದ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಶ್ರೀಮತಿ ಮಮತಾ ರಾವ್, ಭಜನಾ ಪರಿಷತ್‍ನ ಕಾರ್ಯದರ್ಶಿ ಶ್ರೀ ಬಿ. ಜಯರಾಮ ನೆಲ್ಲಿತ್ತಾಯ. ಕೋಶಾಧಿಕಾರಿಗಳಾದ ಶ್ರೀ ಡಿ. ಧರ್ಣಪ್ಪ, ಸದಸ್ಯರಾದ ಶ್ರೀ ಭುಜಬಲಿ ಬಿ, ಶ್ರೀ ರತ್ನವರ್ಮ ಜೈನ್, ಶ್ರೀ ಶ್ರೀನಿವಾಸ್ ರಾವ್, ಶ್ರೀಮತಿ ಸುನಿತಾ ಅವರು ಉಪಸ್ಥಿತರಿದ್ದು ಸಹಕರಿಸಿದರು. 


0 Comments

Post a Comment

Post a Comment (0)

Previous Post Next Post