ರಾಷ್ಟ್ರೀಯ ತ್ರೋಬಾಲ್ ಪಂದ್ಯಾಟ: ಕರ್ನಾಟಕ ತಂಡಕ್ಕೆ ವಿವೇಕಾನಂದ ಕಾಲೇಜಿನ ಮೂವರು ವಿದ್ಯಾರ್ಥಿಗಳು ಆಯ್ಕೆ

Upayuktha
0

ಪುತ್ತೂರು: ಹರಿಯಾಣದ ರೋಹ್ಟಕ್ ನ ಎಂಡಿ ವಿಶ್ವವಿದ್ಯಾನಿಲಯದಲ್ಲಿ ಅಕ್ಟೋಬರ್ 29 ರಿಂದ ಅಕ್ಟೋಬರ್ 31 ರವರೆಗೆ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ವಿವೇಕಾನಂದ ಪದವಿ ಕಾಲೇಜಿನ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.


ಮಹಿಳಾ ತಂಡಕ್ಕೆ ತೃತೀಯ ಬಿಕಾಂ ವಿದ್ಯಾರ್ಥಿನಿಯರಾದ, ಪುತ್ತೂರಿನ ಬಡಗನ್ನೂರು ನಿವಾಸಿ ಸೀತಾರಾಮ ಗೌಡ ಮತ್ತು ರೋಹಿಣಿ ದಂಪತಿ ಪುತ್ರಿ ಅನುಶ್ರೀ ಯು ಎಸ್ ಹಾಗೂ ಬೆಳ್ತಂಗಡಿಯ ಮುಗೆರಡ್ಕ ನಿವಾಸಿ ಸೀತಾರಾಮ ಗೌಡ ಮತ್ತು ವಾರಿಜಾ ದಂಪತಿ ಪುತ್ರಿ ಅಶಿಕಾ ಹಾಗೂ ಪುರುಷ ವಿಭಾಗಕ್ಕೆ ತೃತೀಯ ಬಿಕಾಂ ವಿದ್ಯಾರ್ಥಿ, ಬೆಳ್ತಂಗಡಿ ಬಂದಾರು ನಿವಾಸಿ ಬೊಮ್ಮೆ ಗೌಡ ಹಾಗು ಚೆಲುವಮ್ಮ ದಂಪತಿ ಪುತ್ರ ಭರತೇಶ್ ಆಯ್ಕೆಯಾಗಿರುತ್ತಾರೆ. 


ಇವರಿಗೆ ವಿವೇಕಾನಂದ ಪದವಿ ಕಾಲೇಜಿನ ಪ್ರಾಚಾರ್ಯ, ಕಾಲೇಜಿನ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top