|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹನುಮನ ನೆಲದಿಂದ ರಾಮಮಂದಿರಕ್ಕೆ ಶಿಲೆಗಳು: ಶಿಲೆ ಹೊತ್ತ ಲಾರಿಗಳ ಬೀಳ್ಕೊಡುಗೆ

ಹನುಮನ ನೆಲದಿಂದ ರಾಮಮಂದಿರಕ್ಕೆ ಶಿಲೆಗಳು: ಶಿಲೆ ಹೊತ್ತ ಲಾರಿಗಳ ಬೀಳ್ಕೊಡುಗೆ

ಅಂದು ಶಿಲೆಹೊತ್ತು ರಾಮಸೇತು ನಿರ್ಮಿಸಿತ್ತು  ಹನುಮಸೇನೆ 

ಅಯೋಧ್ಯೆ ಮಂದಿರದ ತಳಪಾಯಕ್ಕೆ ಕರ್ನಾಟಕದ ಶಿಲೆಗಳು




ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಭವ್ಯ ರಾಮಮಂದಿರದ ತಳಪಾಯಕ್ಕೆ ಹನುಮನ ನಾಡು ಕರ್ನಾಟಕದಿಂದ ಶಿಲೆಗಳು ರವಾನೆಯಾಗುತ್ತಿವೆ.


ಬೆಂಗಳೂರಿನ ಸಾದರಹಳ್ಳಿ ಗೇಟ್ (ಏರ್ ಪೋರ್ಟ್ ರಸ್ತೆ) ಶಿಲೆಗಳ ಪೂಜೆ ಮತ್ತು ಅವುಗಳನ್ನು ಹೊತ್ತ ಲಾರಿಗಳ ಬೀಳ್ಕೊಡುಗೆ ಕಾರ್ಯಕ್ರಮವು ಶ್ರೀ ವಿವೇಕಾನಂದ ಸೇವಾ ಸಮಿತಿ, ಶ್ರೀ ಹನುಮಾನ್ ಗ್ರಾನೈಟ್ ಇವುಗಳ ಸಂಯೋಜನೆಯಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಅಯೋಧ್ಯೆ ಟ್ರಸ್ಟ್ ಸದಸ್ಯರೂ, ಆಗಿರುವ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಸಾನ್ನಿಧ್ಯ ವಹಿಸಿ ಶಿಲಾಪೂಜೆ ನೆರವೇರಿಸಿ ಲಾರಿಗಳಿಗೆ ಹಸಿರು ನಿಶಾನೆ ತೋರಿ ಸಂದೇಶ ನೀಡಿದರು. ರಾ ಸ್ವ ಸಂಘದ ಪ್ರಮುಖರಾದ ತಿಪ್ಪೇಸ್ವಾಮಿ‌, ಬಿ ಎನ್ ಮೂರ್ತಿ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಮಂತ್ರಿ ಶೋಭಾ ಕರಂದ್ಲಾಜೆ, ಕೇಂದ್ರದ ಮಾಜಿ ಮಂತ್ರಿ ಡಿ ವಿ ಸದಾನಂದ ಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶ ಬಿ ಎಲ್ ಸಂತೋಷ್, ವಿಹಿಂಪ ಮುಖಂಡರಾದ ಗೋಪಾಲ್ ಜೀ, ಕೇಶವ ಹೆಗಡೆ, ಆನಂದ ಗುರೂಜಿ, ಸ್ಥಳೀಯ ಶಾಸಕ ನಿಸರ್ಗ ನಾರಾಯಣ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.‌


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post