ಧರ್ಮತ್ತಡ್ಕ: ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಗಣಿತ ಶಿಕ್ಷಕಿಯಾಗಿದ್ದ ಶ್ರೀಮತಿ ಪ್ರಮೀಳಾ ಟೀಚರ್ ಅವರ ಬೀಳ್ಕೊಡುಗೆ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ ವಹಿಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಉನ್ನತ ಪ್ರೌಢಶಾಲೆಯ ಪ್ರಾಂಶುಪಾಲರಾದ ಎನ್. ರಾಮಚಂದ್ರ ಭಟ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಇ. ಎಚ್. ಗೋವಿಂದ ಭಟ್, ಧರ್ಮತ್ತಡ್ಕ ಎಯುಪಿ ಶಾಲೆಯ ಮುಖ್ಯೋಪಾಧ್ಯಾಯ ಎನ್. ಮಹಾಲಿಂಗ ಭಟ್, ಧರ್ಮತ್ತಡ್ಕ ಎಯುಪಿ ಶಾಲೆಯ ವ್ಯವಸ್ಥಾಪಕಿ ವಿಜಯಶ್ರೀ, ಅಧ್ಯಾಪಕ ರಾಮಕೃಷ್ಣ ಭಟ್ ಹಾಗೂ ಉಷಾ ಕೆ. ಆರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ನಿವೃತ್ತ ಅಧ್ಯಾಪಿಕೆಯಾದ ಪ್ರಮೀಳಾ ಟೀಚರ್ ಅವರಿಗೆ ಸ್ಮರಣಿಕೆ ಫಲ ಪುಷ್ಪಗಳನ್ನು ನೀಡಿ ಗೌರವಿಸಲಾಯಿತು.
ಸುಸಂದರ್ಭದಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಯ ಅಧ್ಯಾಪಕ ವೃಂದ ಸೇರಿದ್ದರು. ಕಾರ್ಯಕ್ರಮದ ಪ್ರಾರ್ಥನೆಯಲ್ಲಿ ಅಧ್ಯಾಪಕರಾದ ರಾಜಕುಮಾರ್ ಕೆ, ಪ್ರದೀಪ ಕೆ ಶಿವಪ್ರಸಾದ ಸಿ, ಪ್ರಶಾಂತ ಹೊಳ್ಳ ಎನ್, ಶಶಿಧರ ಕೆ, ಸೂರ್ಯನಾರಾಯಣ ಭಟ್ ಪಿ ಸಹಕರಿಸಿದರು.
ಶ್ರೀಮತಿ ಶಿಲ್ಪ ಬಿ. ಎನ್. ಸ್ವಾಗತಿಸಿ, ಶಿವಪ್ರಸಾದ್ ಸಿ ಹಾಗೂ ಪ್ರಶಾಂತ ಹೊಳ್ಳ ಎನ್ ನಿರೂಪಣೆಗೈದರು, ಶ್ರೀಮತಿ ಉಷಾ ಕೆ ಆರ್ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಧನ್ಯವಾದ
ReplyDelete