ವಿದ್ಯಾಗಿರಿ: ವಿದ್ಯಾರ್ಥಿಗಳು ಬರೀ ಓದು ಮಾತ್ರವಲ್ಲ ಅದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ವಿದ್ಯಾರ್ಥಿ ದೆಸೆಯಿಂದಲೇ ಹೊಸ ಪ್ರಯೋಗದೊಂದಿಗೆ ಕಲಿಯಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು.
ಇವರು ಆಳ್ವಾಸ್ ಕಾಲೇಜಿನ ಪದವಿ ಪತ್ರಿಕೋದ್ಯಮ ವಿಭಾಗದ ಆಳ್ವಾಸ್ ಮೃದಮ್‍ನ ನೂತನ ಸಾಧಕರ ಸರಣಿ ಕಾರ್ಯಕ್ರಮ ಆಳ್ವಾಸ್ ಡೈನಮೋಸ್ ಹಾಗೂ ಪಿನಾಕಲ್ ಪರ್ಫಾರ್ಮರ್ಸ್ ನ ಮೊದಲ ಸಂಚಿಕೆಯನ್ನು ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಮಾತನಾಡಿದರು.
ಆಳ್ವಾಸ್ ಮುೃದಮ್- ಪಾಡ್‍ಕಾಸ್ಟ್ ಪದವಿ ಪತ್ರಿಕೋದ್ಯಮ ವಿಭಾಗದ ನೂತನ ಪ್ರಯತ್ನವಾಗಿದ್ದು, ವಿಭಾಗದ ಅಫಿಶಿಯಲ್ ಸಾಮಾಜಿಕಜಾಲತಾಣದ ಪೇಜ್‍ಗಳಲ್ಲಿ ಲಭ್ಯವಿರಲಿದೆ.
ಈ ಸಂದರ್ಭದಲ್ಲಿ ಮಾನವಿಕ ವಿಭಾಗದ ಡೀನ್ ಪ್ರೊ. ಸಂಧ್ಯಾ ಕೆ.ಎಸ್, ಪದವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ರೇಷ್ಮಾ ಉದಯ್ ಕುಮಾರ್, ಪತ್ರಿಕೋದ್ಯಮ ಉಪನ್ಯಾಸಕಿ ರಕ್ಷಿತಾ ಕುಮಾರಿ ತೋಡಾರು, ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ವೈಶಾಕ್ ಮಿಜಾರು, ಕಿಶನ್, ಯತೀಶ್, ಮರಿಯಮ್ ಹಾಗೂ ಚರಣ್ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ