ಉಜಿರೆ: ಯಾವುದೇ ಕಾರ್ಯಕ್ರಮವು ಯಶಸ್ವಿಯಾಗಬೇಕಾದರೆ ಕಾರ್ಯಕರ್ತರ ಕೈಗುಣಗಳ ಜೊತೆಗೆ ಅವರ ಉತ್ಸಾಹ ಮುಖ್ಯವಾಗಿರುತ್ತದೆ. ಅಂತಹ ಸಮಾರಂಭವು ಸದಾ ನೆನಪಿನಲ್ಲಿರುತ್ತದೆ. ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಕರ್ನಾಟಕದ ಮೂರನೇ ರಾಜ್ಯ ಅಧಿವೇಶನದ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಸಮ್ಮೇಳನವನ್ನು ರೂಪಿಸುವುದು ಮಹಾ ಸಂಗತಿಯಲ್ಲ ಆದರೆ ಅದನ್ನು ಉತ್ತಮ ರೀತಿಯಲ್ಲಿ ನೆರವೇರಿಸಿ ಕಾರ್ಯ ರೂಪಕ್ಕೆ ತರುವುದರ ಜೊತೆಗೆ ಅಚ್ಚು ಕಟ್ಟಾಗಿ ನಿಭಾಯಿಸುವುದು ಮುಖ್ಯವಾಗಿರುತ್ತದೆ.
ಉಜಿರೆಯು ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಹಾಗೂ ವೈಚಾರಿಕವಾಗಿ ಉನ್ನತ ಸ್ಥಾನದಲ್ಲಿದೆ. ಹಾಗಾಗಿ ಇಂತಹ ಸ್ಥಳದಲ್ಲಿ ಸಮ್ಮೇಳನ ನಡೆಸುತ್ತಿರುವುದು ನಮ್ಮಲ್ಲರ ಅದೃಷ್ಟ. ಇಲ್ಲಿಯ ಸ್ವಯಂ ಸೇವಕರಿಗೆ ಬೋಧನೆಯಿಲ್ಲದೆ ಸ್ವಂತವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯವಿದೆ. ಈ ಕಾರ್ಯಕ್ರಮಕ್ಕೆ ನಾವೆಲ್ಲರೂ ಕಂಕಣ ಬದ್ಧರಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗಬೇಕು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಷ್ಟ್ರೀಯ ಕಾರಣಿಯ ಸದಸ್ಯರಾದ ಗುರುರಾಜ್ ಗಂಟಿ ಹೊಳೆ ಹೇಳಿದರು.
ರಾಜ್ಯ ಮಟ್ಟದ ಸಮ್ಮೇಳನ ನಡೆಸುವುದು ಸಾವಲಿನ ಕೆಲಸ ವಿವಿಧ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ರಾಜ್ಯಕ್ಕೆ ಮಾದರಿಯಾಗುವ ಭರವಸೆಯಿದೆ. ಎಂದು ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿ ಆಡಳಿತ ಮುಕ್ತೇಸರಾದ ಶರತ್ ಕೃಷ್ಣ ಪಡ್ವೆಟ್ನಾಯ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಸಮಿತಿಯ ಅಧ್ಯಕ್ಷ, ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿ, ಅಖಿಲ ಭಾರತೀಯ ಸಮ್ಮೇಳನದ ಸದಸ್ಯರಾದ ಕೆ. ಪ್ರಕಾಶ್ ನಾರಾಯಣ ವಂದಿಸಿದರು.ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿ ಆಡಳಿತ ಮುಕ್ತೇಸರಾದ ಶರತ್ ಕೃಷ್ಣ ಪಡ್ವೆಟ್ನಾಯ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಸಮಿತಿಯ ಅಧ್ಯಕ್ಷ, ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿ, ಅಖಿಲ ಭಾರತೀಯ ಸಮ್ಮೇಳನದ ಸದಸ್ಯರಾದ ಕೆ. ಪ್ರಕಾಶ್ ನಾರಾಯಣ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ