|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದೇಶಾದ್ಯಂತ ಮೊದಲು ಡಿಟಿಟಿ ನೆಟ್‌ವರ್ಕ್‌ ಹಾಕಿ; ನಂತರ ಈಗಿರುವ ಅನಲಾಗ್ ಕೇಂದ್ರಗಳನ್ನು ಮುಚ್ಚಿ

ದೇಶಾದ್ಯಂತ ಮೊದಲು ಡಿಟಿಟಿ ನೆಟ್‌ವರ್ಕ್‌ ಹಾಕಿ; ನಂತರ ಈಗಿರುವ ಅನಲಾಗ್ ಕೇಂದ್ರಗಳನ್ನು ಮುಚ್ಚಿ

ಪ್ರಸಾರ ಭಾರತಿಗೆ AADEE ಆಗ್ರಹ, ಕೇಂದ್ರ ಸಚಿವ ಎಲ್ ಮುರುಗನ್‌ ಅವರಿಗೆ ಮನವಿ


ಮಂಗಳೂರು: ಅಖಿಲ ಭಾರತ ಆಕಾಶವಾಣಿ ಮತ್ತು ದೂರದರ್ಶನ ಎಂಜಿನಿಯರಿಂಗ್ ಉದ್ಯೋಗಿಗಳ ಸಂಘಟನೆಯು (AADEE) ರಾಷ್ಟ್ರೀಯ ಪ್ರಸಾರ ಸಂಸ್ಥೆಗಳನ್ನು ಅತ್ಯಂತ ಲಾಭದಾಯಕ ಎಲೆಕ್ಟ್ರಾನಿಕ್ ಮಾಧ್ಯಮವಾಗಿ ಪರಿವರ್ತಿಸುವ ಬಗ್ಗೆ ಕೆಲವು ಸಲಹೆಗಳನ್ನು ಕೇಂದ್ರ ಸಚಿವ ಡಾ.  ಎಲ್. ಮುರುಗನ್ ಅವರಿಗೆ ಸಲ್ಲಿಸಿದೆ.


AADEE ರಾಷ್ಟ್ರೀಯ ವಕ್ತಾರ ಮತ್ತು ಪ್ರಚಾರ ಕಾರ್ಯದರ್ಶಿಯಾಗಿರುವ ಎಂ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಚಿವರಿಗೆ ಈ ಮನವಿ ಸಲ್ಲಿಸಲಾಗಿದೆ. ದೇಶಾದ್ಯಂತ ಡಿಜಿಟಲ್‌ ಪ್ರಾದೇಶಿಕ ಪ್ರದಾರಸ ನೆಟ್‌ವರ್ಕ್‌ ಸ್ಥಾಪನೆ ಪೂರ್ಣಗೊಳ್ಳುವ ವರೆಗೂ ಈಗ ಚಾಲ್ತಿಯಲ್ಲಿರುವ ಅನಲಾಗ್‌ ಪ್ರಸಾರದ ಕೇಂದ್ರಗಳನ್ನು ಮುಚ್ಚದಂತೆ ಪ್ರಸಾರ ಭಾರತಿ ಮಂಡಳಿಗೆ ಸೂಚಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಮನವಿಯ ಪೂರ್ಣಪಾಠ ಇಂತಿದೆ:

ಗೌರವಾನ್ವಿತ ಪ್ರಧಾನಮಂತ್ರಿಯವರ "ಡಿಜಿಟಲ್ ಇಂಡಿಯಾ" ಮಂತ್ರದೊಂದಿಗೆ ಹೊಂದಿಕೆಯಾಗುವ ಅತ್ಯಂತ ಲಾಭದಾಯಕ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಒಂದಾದ ದೇಶದ ರಾಷ್ಟ್ರೀಯ ಮತ್ತು ಸಾರ್ವಜನಿಕ ಸೇವಾ ಪ್ರಸಾರಕರಾದ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊದ ಪ್ರಾದೇಶಿಕ ಪ್ರಸಾರವನ್ನು ರಕ್ಷಿಸಲು ವಿನಮ್ರ ವಿನಂತಿ.  


ಆಕಾಶವಾಣಿ ಮತ್ತು ದೂರದರ್ಶನ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಅತಿ ದೊಡ್ಡದಾದ ಈ ಸಂಘದ ಸದಸ್ಯರ ಪರವಾಗಿ ಹಾಗೂ ದೇಶಾದ್ಯಂತ 1000 ಪ್ರಸಾರ ಕೇಂದ್ರಗಳು ಮತ್ತು 3573 ಉದ್ಯೋಗಿಗಳ ಪ್ರತಿನಿಧಿಯಾಗಿ ಮಂಗಳೂರಿಗೆ ತಮ್ಮನ್ನು ಪ್ರೀತಿಪೂರ್ವಕವಾಗಿ  ಸ್ವಾಗತಿಸುತ್ತಿದ್ದೇವೆ.


ಎಐಆರ್ ಮತ್ತು ದೂರದರ್ಶನವು ಒಂದು ಅನನ್ಯ ಸಂಸ್ಥೆಯಾಗಿದೆ, ಇದು ರಾಷ್ಟ್ರೀಯ ಮತ್ತು ಸಾರ್ವಜನಿಕ ಸೇವಾ ಬ್ರಾಡ್‌ಕಾಸ್ಟರ್‌ನ ಉಭಯ ಜವಾಬ್ದಾರಿಗಳನ್ನು ಹೊಂದಿದೆ, ಇದನ್ನು ಪಿಬಿ ಆಕ್ಟ್ 1990 ರ ಸೆಕ್ಷನ್ 12 ರಲ್ಲೂ ವಿವರಿಸಲಾಗಿದೆ.


ಮೂಲತಃ ಆಕಾಶವಾಣಿ ಮತ್ತು ದೂರದರ್ಶನವನ್ನು ಲಾಭ ಗಳಿಸುವ ಪರಿಕಲ್ಪನೆಯೊಂದಿಗೆ ಸ್ಥಾಪಿಸಲಾಗಿಲ್ಲ. ಆದರೂ, ಅದರ ಪ್ರಮುಖ ಪಾತ್ರವಾದ ರಕ್ಷಣಾ ಪಡೆಗಳು, ಸಾರ್ವಜನಿಕ ಆರೋಗ್ಯ ಮತ್ತು ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಬಲವರ್ಧನೆಯಂತಹ ರಾಷ್ಟ್ರೀಯ ಹಿತಕ್ಕಾಗಿ ಈ ಎರಡು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ನಾವು ಜವಾಬ್ದಾರಿಯುತ ಸಂಘಟನೆಯಾಗಿರುವುದರಿಂದ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ನಾವು ಬೆಂಬಲಸಿಉತ್ತೇವೆ. ಅದೇ ವೇಳೆಗೆ ರಾಷ್ಟ್ರೀಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಆದಾಯವನ್ನು ಗಳಿಸುವ ವ್ಯವಸ್ಥೆಗಳನ್ನೂಅಳವಡಿಸಿಕೊಳ್ಳಲು ಪ್ರಸಾರ ಭಾರತಿ ಮಂಡಳಿಗೆ ವಿನಂತಿಸುತ್ತಿದ್ದೇವೆ.


ಸ್ಥಳೀಯ ಜಾಹೀರಾತುಗಳ ಮೂಲಕ ಉತ್ತಮ ಆದಾಯಕ್ಕೆ ಕಾರಣವಾಗುವ ನ್ಯಾರೋಕಾಸ್ಟಿಂಗ್ ಪರಿಕಲ್ಪನೆಯನ್ನು 2000 ನೇ ಇಸವಿಯಲ್ಲಿ ಸ್ವೀಕರಿಸಿದ್ದಕ್ಕಾಗಿ ಗೌರವಾನ್ವಿತ ಸಚಿವರಾಗಿದ್ದ ದಿವಂಗತ ಶ್ರೀಮತಿ ಸುಷ್ಮಾ ಸ್ವರಾಜ್ ಅವರಿಗೆ ನಾವು ಕೃತಜ್ಞರಾಗಿರುತ್ತೇವೆ.


ದೂರದರ್ಶನವು ತನ್ನ 630 ಅನಲಾಗ್ ಸಿಸ್ಟಮ್‌ಗಳನ್ನು ಹೈ ಪವರ್ ಡಿಜಿಟಲ್ ಟ್ರಾನ್ಸ್‌ಮಿಟರ್‌ಗಳಾಗಿ ಬದಲಿಸಿ ಡಿಡಿ ಡಿಜಿಟಲ್ ಟೆರೆಸ್ಟ್ರಿಯಲ್ ಟೆಕ್ನಾಲಜಿಗೆ ಪರಿವರ್ತಿಸುವ ಯೋಜನೆ ಹಾಕಿಕೊಂಡಿತ್ತು. ನಂತರ ಪ್ರಸಾರ ಭಾರತಿಯು 228 ಟ್ರಾನ್ಸ್‌ಮಿಟರ್‌ಗಳನ್ನು ಡಿಟಿಟಿಗೆ ಪರಿವರ್ತಿಸಲು ನಿರ್ಧರಿಸಿತು. ಆದರೆ ಅದೂ ಸಹ ಪೂರ್ಣಗೊಂಡಿಲ್ಲ.


ಆದರೆ ಈಗ ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದೆ,  ಅಸ್ತಿತ್ವದಲ್ಲಿರುವ ಕೇಂದ್ರಗಳನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾರೆ. ಆ ಮೂಲಕ ರಾಷ್ಟ್ರೀಯ ಹಿತಾಸಕ್ತಿಯ ವಿಚಾರದಲ್ಲಿ ನಿರ್ವಾತ ಉಂಟಾಗುವ ಅಪಾಯವಿದೆ. ಮಾನ್ಯ ಪ್ರಧಾನ ಮಂತ್ರಿಗಳ ಆಶಯದಂತೆ ದೇಶದಲ್ಲಿ ವಿಶೇಷವಾಗಿ "ಅಜಾದಿ ಕಿ ಅಮೃತ್ ಮಹೋತ್ಸವ' ಅಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ಆಕಾಶವಾಣಿ ಮತ್ತು ದೂರದರ್ಶನ ಮರುಪ್ರಸಾರ ಕೇಂದ್ರಗಳ ವಿಷಯದಲ್ಲಿ ಪ್ರಸಾರ ಭಾರತಿ ತಳೆದಿರುವ ನಿಲುವು ಸರ್ವಥಾ ಅಪೇಕ್ಷಣೀಯವಲ್ಲ.


ಪ್ರಸಾರ ಭಾರತಿಯನ್ನು ಆರ್ಥಿಕವಾಗಿ ಲಾಭದಾಯಕವಾಗಿ ಮಾಡಲು ಮತ್ತು ಎಐಆರ್ ಮತ್ತು ಡಿಡಿ ಗಳನ್ನು ಡಿಜಿಟಲ್‌ ಟೆರೆಸ್ಟ್ರಿಯಲ್ ಪ್ಲಾಟ್‌ಫಾರ್ಮ್‌ ಆಗಿ ಪವರಿವರ್ತಿಸಲು ಮತ್ತು ದೂರದರ್ಶನವನ್ನು ಏಕೈಕ ಡಿಜಿಟಲ್‌ ವಿತರಣಾ ವೇದಿಕೆಯಾಗಿ ಅಭಿವೃದ್ಧಿಪಡಿಸಲು (ಇಂಟರ್‌ನೆಟ್‌ ಸೇವಾದಾರರ ಮಾದರಿಯಲ್ಲಿ) ಹಲವಾರು ಸಲಹೆಗಳನ್ನು 2017ರಲ್ಲೇ ಈ ಸಂಘಟನೆಯು ಪ್ರಸ್ತಾಪಿಸಿತ್ತು. ಅವುಗಳನ್ನು ಅನುಷ್ಠಾನಗೊಳಿಸಿದಲ್ಲಿ ದೇಶದ ಎಲ್ಲ ಖಾಸಗಿ ಟಿವಿ ಚಾನೆಲ್‌ಗಳನ್ನು ದೂರದರ್ಶನದ ಡಿಟಿಟಿ ಪ್ಲಾಟ್‌ಫಾರ್ಮ್ ಮೂಲಕವೇ ಪ್ರಸಾರ ಮಾಡುವ ಮೂಲಕ ಕೋಟ್ಯಂತರ ರೂ.ಗಳ ಆದಾಯ ಪಡೆಯುವ ವಿಧಾನವನ್ನು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮತ್ತು ಹ್ಯಾಂಡ್‌ ಔಟ್‌ಗಳ ಮೂಲಕ ವಿವರಿಸಲಾಗಿತ್ತು. ಇದು ದೇಶದ ಖಾಸಗಿ ಟಿವಿ ನೆಟ್‌ವರ್ಕ್‌ಗಳ ಭೌಗೋಳಿಕ ಪ್ರಸರಣದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಚಿವಾಲಯಕ್ಕೆ ನೀಡುತ್ತದೆ. ಅಂದು ಸಲ್ಲಿಸಿದ ಕರಪತ್ರದ ನಕಲನ್ನು ಈ ಮನವಿಯ ಜತೆಗೆ ಲಗತ್ತಿಸಲಾಗಿದೆ.



ಎಲೆಕ್ಟ್ರಾನಿಕ್ ಮಾಧ್ಯಮವು ಸಾಮಾನ್ಯವಾಗಿ ಸಾರ್ವಜನಿಕರ ಮತ್ತು ನಿರ್ದಿಷ್ಟವಾಗಿ ದೇಶದ ಯುವಕರ ಮನಸ್ಥಿತಿಯನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ ಮತ್ತು ಆ ಮೂಲಕ ಸರ್ಕಾರದ ಜೊತೆ ವ್ಯವಸ್ಥೆಯ ನಿಯಂತ್ರಣವನ್ನು ಹೊಂದಿರುವುದು ಅತ್ಯಂತ ಅಗತ್ಯವಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿಯವರ "ಡಿಜಿಟಲ್ ಇಂಡಿಯಾ" ಕನಸಿನ ಯೋಜನೆಯೊಂದಿಗೆ ಹೊಂದಿಕೊಳ್ಳುವಂತೆ  ಡಿಡಿಯ ಡಿಟಿಟಿ ನೆಟ್ವರ್ಕ್ ಮೂಲಕ ಎಲ್ಲಾ ಚಾನೆಲ್‌ಗಳ ಪ್ರಸರಣವನ್ನು ಪ್ರಾದೇಶಿಕ ನೆಟ್‌ವರ್ಕ್‌ ಮೂಲಕ ಬಿತ್ತರಿಸಲು ಇದರಿಂದ ಸಾಧ್ಯವಿದೆ.


ಡಿಜಿಟಲ್ ಟೆರೆಸ್ಟ್ರಿಯಲ್ ಸಿಸ್ಟಮ್ ಒಂದು ಟ್ರಾನ್ಸ್‌ಮಿಟರ್‌ನಿಂದ ಗರಿಷ್ಠ 28 ಚಾನೆಲ್‌ಗಳನ್ನು ರವಾನಿಸಲು ಅನುವು ಮಾಡಿಕೊಡುತ್ತದೆ, ಆ ಸುತ್ತಮುತ್ತಲಿನ ಕನಿಷ್ಠ 20-25 ಅತ್ಯಂತ ಜನಪ್ರಿಯ ಚಾನೆಲ್‌ಗಳನ್ನು ಈ ವೇದಿಕೆಗೆ  ಆಹ್ವಾನಿಸಬಹುದು, ಆ ಚಾನೆಲ್‌ಗಳಿಗೆ ವ್ಯಾಪಕ ಪ್ರಾದೇಶಿಕ ನೆಟ್‌ವರ್ಕ್ ಒದಗಿಸಲು ಸಾಧ್ಯ. ಅದರಿಂದ ಪ್ರಸಾರ ಭಾರತಿಗೆ ಖಾಸಗಿ ಚಾನೆಲ್‌ಗಳಿಂದಲೂ ಕೋಟ್ಯಂತರ ರೂ.ಗಳ ಶುಲ್ಕ ಮತ್ತು ಜಾಹೀರಾತು ಆದಾಯ ಗಳಿಸಲು ಸಾಧ್ಯವಿದೆ.   ಪ್ರಮುಖ ನಗರಗಳಲ್ಲಿ 4 ಅಥವಾ 5  ಡಿಜಿಟಲ್‌ ಟ್ರಾನ್ಸ್‌ಮಿಟರ್‌ಗಳನ್ನು ಅಳವಡಿಸುವ ಮೂಲಕ 100 ಕ್ಕೂ ಹೆಚ್ಚು ಜನಪ್ರಿಯ ಖಾಸಗಿ ಚಾನೆಲ್‌ಗಳನ್ನು ಪ್ರಸಾರ ಮಾಡಬಹುದು.


ದೇಶಾದ್ಯಂತ ಇಂಟರ್ನೆಟ್ ಸಂಪರ್ಕವು ಇನ್ನೂ ಸ್ಥಿರವಾಗಿಲ್ಲ ಮತ್ತು ಒಂದೇ ರೀತಿಯಾಗಿ ದೇಶಾದ್ಯಂತ ಅನೇಕರಿಗೆ ಕೈಗೆಟುಕುವಂತಿಲ್ಲ ಎಂಬುದನ್ನು ನೀವು  ಗಮನಿಸಬಹುದು.


ದಾಖಲೆಗಳ ಪ್ರಕಾರ, ದೇಶದ 24.84 ಕೋಟಿ ಮನೆಗಳ ಪೈಕಿ 18.3 ಕೋಟಿ ಮನೆಗಳಿಗೆ ಟಿವಿ ಸೌಲಭ್ಯವಿದೆ. ಈ 18.3 ಕೋಟಿಗಳಲ್ಲಿ 70 ಲಕ್ಷ ಮನೆಗಳು ಡಿಟಿಎಚ್ ಅಥವಾ ಕೇಬಲ್ ಸಂಪರ್ಕವನ್ನು ಹೊಂದಿಲ್ಲ, ಇದರಿಂದಾಗಿ ಈ ಮನೆಗಳು ಸಂಪೂರ್ಣವಾಗಿ ಡಿಡಿಯ ಟೆರೆಸ್ಟ್ರಿಯಲ್ ಸೇವೆಗಳನ್ನು ಅವಲಂಬಿಸಿರುತ್ತವೆ.


AIR & DD ಯ ಪ್ರಾದೇಶಿಕ ಸೇವೆಗಳು ನೈಸರ್ಗಿಕ ವಿಪತ್ತುಗಳು ಮತ್ತು ರಾಷ್ಟ್ರೀಯ ವಿಪತ್ತುಗಳ ಸಮಯದಲ್ಲಿ  ಲಭ್ಯವಾಗುವ ಏಕಮಾತ್ರ ವಿಶ್ವಾಸಾರ್ಹ ಸಂವಹನ ವ್ಯವಸ್ಥೆಯಾಗಿದೆ.


ಟಿವಿ ಸೆಟ್ ನಲ್ಲಿ ಕೇಬಲ್ ಪಾಯಿಂಟ್ ತೆರೆದಿಟ್ಟುಕೊಂಡು ಅನಲಾಗ್ ಸೇವೆಗಳನ್ನು ನೋಡಬಹುದು ಮತ್ತು ಮನೆಗಳ ಮೇಲೆ 'ಯಾಗಿ' (ಆಡು ಭಾಷೆಯಲ್ಲಿ ಹೇಳುವುದಾದರೆ ಕಡ್ಡಿ ಆಂಟೆನಾ) ಆಂಟೆನಾ ಅಳವಡಿಸುವ ಅಗತ್ಯವಿಲ್ಲ.


ದೇಶದ ಹೊರಗಿನ ಮತ್ತು ಒಳಗಿನ ಶತ್ರುಗಳು ತಂತ್ರಜ್ಞಾನದ ಬೆಂಬಲದೊಂದಿಗೆ ಉಪಗ್ರಹ ಮತ್ತು ಅಂತರ್ಜಾಲ ವ್ಯವಸ್ಥೆಯನ್ನು ಅಡ್ಡಿಪಡಿಸಬಹುದು/ ನಿರ್ಬಂಧಿಸಬಹುದು, ಆದರೆ ಟೆರೆಸ್ಟ್ರಿಯಲ್ ಸೇವೆಗಳಲ್ಲಿ ಇದು ಸಾಧ್ಯವಿಲ್ಲ.



ನಮ್ಮದೇ ಆದ ಟೆರೆಸ್ಟ್ರಿಯಲ್‌ ಸೇವೆಗಳು ಇಲ್ಲದಿದ್ದ ಪಕ್ಷದಲ್ಲಿ ಗಡಿ ಪ್ರದೇಶಗಳಲ್ಲಿ  ಅನ್ಯ ದೇಶಗಳ ಪ್ರಾದೇಶಿಕ ಪ್ರಸಾರದ ಸಂಕೇತಗಳು ಮುನ್ನುಗ್ಗಿ ಬಂದು ಅಲ್ಲಿನ ಜನರ ಮೇಲೆ ಪ್ರಭಾವ ಬೀರಬಹುದು.



ಪ್ರಪಂಚದಾದ್ಯಂತದ ಬಹುತೇಕ ಎಲ್ಲಾ ದೇಶಗಳು ಇನ್ನೂ ದೇಶದ ಸಮಗ್ರತೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಪ್ರಾದೇಶಿಕ ಪ್ರಸಾರ ಸೇವೆಗಳನ್ನು ಮುಂದುವರಿಸುತ್ತಿವೆ. ಹೆಚ್ಚುವರಿ ಪ್ರಸಾರ ವ್ಯವಸ್ಥೆಗಳನ್ನು ಅಳವಡಿಸಿಕೊಂಡರೂ ಇದು ಸಾಂಪ್ರದಾಯಿಕ ವ್ಯವಸ್ಥೆಗೆ ಪೂರಕವಾಗಿದೆ. ಆದರೆ ಪ್ರಸಾರ ಭಾರತಿ ಮಾತ್ರ ಚಾಲ್ತಿಯಲ್ಲಿರುವ ಪ್ರಾದೇಶಿಕ ಮರುಪ್ರಸಾರ ಕೇಂದ್ರಗಳನ್ನು ಮುಚ್ಚುತ್ತಿದೆ. ಮತ್ತು ಬದಲಿ ವ್ಯವಸ್ಥೆಯನ್ನು ಕಲ್ಪಿಸುತ್ತಿಲ್ಲ.


ರಾಷ್ಟ್ರೀಯ ಮತ್ತು ಸಾರ್ವಜನಿಕ ಸೇವಾ ಬ್ರಾಡ್‌ಕಾಸ್ಟರ್ ಎಐಆರ್ ಮತ್ತು ಡಿಡಿಯನ್ನು ರಕ್ಷಿಸಲು  ಗೌರವಾನ್ವಿತ ವಾರ್ತಾ ಮತ್ತು ಪ್ರಸಾರ ಸಚಿವರಿಗೆ ನಾವು ಮನವಿ ಮಾಡುತ್ತಿದ್ದು, ಪ್ರಸಾರ ಭಾರತಿಯ ಸ್ವಯಂ ಹಾನಿಕಾರಕ ನಿರ್ಧಾರಗಳಲ್ಲಿ ದಯವಿಟ್ಟು ಮಧ್ಯಪ್ರವೇಶ ಮಾಡಿ ಎಂದು ಕೋರುತ್ತಿದ್ದೇವೆ. ನಿಮ್ಮ ಅವಗಾಹನೆಗಾಗಿ ಎಲ್ಲ ಪತ್ರಗಳ ನಕಲು ಪ್ರತಿಗಳನ್ನು ಲಗತ್ತಿಸಲಾಗಿದೆ.


ಸರ್, ಎಐಆರ್ ಮತ್ತು ಡಿಡಿಯ ಡಿಜಿಟಲ್ ಟೆರೆಸ್ಟ್ರಿಯಲ್ ಟ್ರಾನ್ಸ್‌ಮಿಷನ್ ದೇಶದ ಎಲ್ಲೆಡೆ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳುವವರೆಗೆ ಮತ್ತು ನಮ್ಮ ದೇಶದಲ್ಲಿ ನೆಲೆಸಿರುವ ಎಲ್ಲ ನಾಗರಿಕರಿಗೆ ತಲುಪುವ ವರೆಗೆ ಈಗ ಇರುವ ಎಐಆರ್ ಮತ್ತು ಡಿಡಿ ಕೇಂದ್ರಗಳನ್ನು ಮುಚ್ಚದೆ ರಕ್ಷಿಸುವ ಸಾಧ್ಯತೆಗಳನ್ನು ಪರಿಗಣಿಸುವಂತೆ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.


ಸರ್, ನಿಮ್ಮ ಹಸ್ತಕ್ಷೇಪವು ಎಐಆರ್ ಮತ್ತು ದೂರದರ್ಶನ, ರಾಷ್ಟ್ರದ ಧ್ವನಿ ಮತ್ತು ಕಣ್ಣುಗಳಿಗೆ ಹಳೆಯ ಸುವರ್ಣ ದಿನಗಳನ್ನು ಮರಳಿ ತರುತ್ತದೆ ಎಂದು ನಾವು ನಂಬುತ್ತೇವೆ.


ದೆಹಲಿಯಲ್ಲಿರುವ ನಮ್ಮ ಕೇಂದ್ರ ಕಛೇರಿಗೆ ನಿಮ್ಮ ಜತೆ ಸಭೆ ನಡೆಸಲು ಅನುವು ಮಾಡಿಕೊಟ್ಟಲ್ಲಿ ನಾವು ಇನ್ನಷ್ಟು ವಿವರಗಳನ್ನು ತಮಗೆ ಮನವರಿಕೆ ಮಾಡಲು ಸಾಧ್ಯವಾಗಬಹುದು. ಅದಕ್ಕೆ ಅವಕಾಶ ನೀಡಿದಲ್ಲಿ ನಿಮ್ಮ ಸೌಜನ್ಯದ ನಡೆಗೆ  ನಾವು ಕೃತಜ್ಞರಾಗಿರುತ್ತೇವೆ.


ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,


(ಎಂ. ಚಂದ್ರಶೇಖರ್)

ರಾಷ್ಟ್ರೀಯ ವಕ್ತಾರ ಮತ್ತು ಪ್ರಚಾರ ಕಾರ್ಯದರ್ಶಿ

ಕೇಂದ್ರ ಕಚೇರಿ, AADEE, ಕ್ಯಾಂಪ್: ಮಂಗಳೂರು

Ph: 9449110746 / 8867568966

Email: chandrudd@gmail.com


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post