ಮಂಗಳೂರು: ರಾಷ್ಟ್ರ ಹಾಗೂ ರಾಜ್ಯಾಧ್ಯಕ್ಷ ಡಾ| ವೇ|ಬ್ರ| ಶ್ರೀ ಅನಂತ ಮೂರ್ತಿ ಹಾಗೂ ಅಸಂಘಟಿತ ಕಾರ್ಮಿಕ ಪರಿಷತ್ ಅಧ್ಯಕ್ಷರಾದ ಕೆ.ವಿ. ಸುರೇಶ್ ಕುಮಾರ್, ಅಡುಗೆ ಸಂಘದ ಅಧ್ಯಕ್ಷರಾದ ನಾಗರಾಜ ರಾವ್, ರಮೇಶ್ ಬಾಬು ಮತ್ತು ಪದಾಧಿಕಾರಿಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಪ್ರಕಾಶ ವಿ ಹೊಳ್ಳ, ಕಾರ್ಯದರ್ಶಿ ಸುಬ್ರಮಣ್ಯ ಮಯ್ಯ, ಜೊತೆ ಕಾರ್ಯದರ್ಶಿ ಪ್ರಶಾಂತ್ ಬೈಪಡಿತ್ತಾಯ ಇವರ ಸಹಯೋಗದಲ್ಲಿ ತಾ 4.9.2021 ನೇ ಶನಿವಾರ ಕಾರ್ಮಿಕ ಸಚಿವರಾದ ಅರೆಬೈಲ್ ಶಿವರಾಮ್ ಹೆಬ್ಬಾರ್ ಇವರನ್ನು ಭೇಟಿಯಾಗಿ ಗೌರವಿಸಿದರು. ಸಚಿವರ ಹಸ್ತದಿಂದ ಕೇಂದ್ರ ಸರ್ಕಾರದ ಈ ಶ್ರಮ್ ಕಾರ್ಡ್ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಸಾಮಾಜಿಕ ಭದ್ರತಾ ಯೋಜನೆ, ಅಸಂಘಟಿತ ಹಿರಿಯ ಪುರೋಹಿತರಿಗೆ ಶ್ರಮಿಕ ಸಮ್ಮಾನ್ ಗೌರವ ಸಮರ್ಪಣೆ ಬ್ರಾಹ್ಮಣ ಸಮುದಾಯಭವನ ಆಗಮ ಜ್ಯೋತಿಷ್ಯ ಪರೀಕ್ಷಾ ಕೇಂದ್ರ, ಪಿಂಚಣಿ ಯೋಜನೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಬಗ್ಗೆ ಹಾಗೂ ಸಕಲ ಸರ್ಕಾರಿ ಸವಲತ್ತುಗಳನ್ನು ಒದಗಿಸುವಂತೆ ಸಲಹೆ ನೀಡಲಾಯಿತು.
ಮನವಿ ಅಂಗೀಕರಿಸಿದ ಸಚಿವರು ಅನುದಾನದ ಭರವಸೆ ನೀಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ಜಾರಿಗೆ ತೀರ್ಮಾನ ಕೈಗೊಳ್ಳಲಾಯಿತು. ಕರ್ನಾಟಕದಾದ್ಯಂತ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಕೇಂದ್ರ ಅಧ್ಯಕ್ಷರು ಭರವಸೆ ನೀಡಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ