|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬತ್ತದ ಗದ್ದೆಗೆ ಡ್ರೋನ್ ಚಾಲಿತ ಕೀಟನಾಶಕ ಸಿಂಪರಣೆ: ಧಾರವಾಡ ಕೃಷಿ ವಿವಿ ವಿಜ್ಞಾನಿಗಳಿಂದ ಸಂಶೋಧನೆಗೆ ಚಾಲನೆ

ಬತ್ತದ ಗದ್ದೆಗೆ ಡ್ರೋನ್ ಚಾಲಿತ ಕೀಟನಾಶಕ ಸಿಂಪರಣೆ: ಧಾರವಾಡ ಕೃಷಿ ವಿವಿ ವಿಜ್ಞಾನಿಗಳಿಂದ ಸಂಶೋಧನೆಗೆ ಚಾಲನೆ


ಗಂಗಾವತಿ: ಪ್ರಸ್ತುತ ಆಧುನಿಕ ಕೃಷಿಯಲ್ಲಿ ವಿವಿಧ ಕೃಷಿ ಚಟುವಟಿಕೆಗಳಿಗೆ ಚಾಲಕ ರಹಿತ ವಾಹನ (ಡ್ರೋನ್) ಹಾಗೂ ಯಂತ್ರಗಳನ್ನು ವಿವಿಧ ದೇಶಗಳಲ್ಲಿ ಯಥೇಚ್ಛವಾಗಿ ಬಳಸಲಾಗುತ್ತ್ತಿದೆ. ಬೆಳೆ ಬಿತ್ತುವುದರಿಂದ ಪ್ರಾರಂಭವಾಗಿ ಉಳುಮೆ ಮಾಡುವುದು, ರಸಗೊಬ್ಬರಗಳ ನಿಗದಿತ ಪ್ರಮಾಣದಲ್ಲಿ ಬೇಡಿಕೆಗನುಸಾರವಾಗಿ ಹಾಕುವುದು ಹಾಗೂ ಪೀಡೆಗಳ ಬಾಧೆಯನ್ನು ಗುರುತಿಸಿ ಕೇವಲ ಬಾಧಿತ ಕ್ಷೇತ್ರದಲ್ಲಿ ಮಾತ್ರ ಪೀಡೆನಾಶಕಗಳ ಸಿಂಪರಣೆಯನ್ನು ನಿಖರ ಕೃಷಿ (ಪ್ರಿಶಿಜನ್ ಫಾರ್ಮಿಂಗ್) ಅಡಿಯಲ್ಲಿ ಬಳಸಲಾಗುತ್ತಿದೆ.


ಕೃಷಿ ವಿಶ್ವವಿದ್ಯಾಲಯ, ಧಾರವಾಡದ ವಿಜ್ಞಾನಿಗಳಿಂದ ಸೆ.21 ರಂದು ಬತ್ತದಲ್ಲಿ ಡ್ರೋನ್ ಚಾಲಿತ ಕೀಟನಾಶಕ ಸಿಂಪರಣೆಯ ಸಂಶೋಧನೆಗೆ ಚಾಲನೆ ನೀಡಲಾಯಿತು.


ಡ್ರೋನ್ ಯೋಜನೆಯ ಪ್ರಧಾನ ಸಂಶೋಧಕರಾದ ಡಾ. ಡಿ.ಎನ್. ಕಂಬ್ರೇಕರ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯನ್ನು ಕೈಗೊಂಡಿದ್ದು, ಈ ಯೋಜನೆಯಡಿಯಲ್ಲಿ ವಿವಿಧ ಕೀಟನಾಶಕಗಳ ಕಾರ್ಯಕ್ಷಮತೆಯನ್ನು ಡ್ರೋನ್ ಮೂಲಕ ಹಾಗೂ ಪ್ರಚಲಿತ ನ್ಯಾಪಸ್ಯಾಕ್ ಸ್ಪ್ರೇಯರ್‍ಗಳ ಮುಖಾಂತರ ಕೈಗೊಂಡು ಎರಡು ವಿಧಾನಗಳಿಂದ ಆಗುವ ಲಾಭಗಳನ್ನು ಹಾಗೂ ನ್ಯೂನತೆಗಳನ್ನು ಸಾಬೀತು ಪಡಿಸಲಾಗುವುದು. ಕಾರ್ಯಕ್ಷಮತೆಯನ್ನು ಕೀಟ ಮತ್ತು ರೋಗ ನಿಯಂತ್ರಣದ ಪ್ರಮಾಣ, ಸಿಂಪರಣೆಗೆ ತೆಗೆದುಕೊಳ್ಳುವ ಸಮಯ, ಉಪಯೋಗಕಾರಿ ಕೀಟಗಳ ಮೇಲೆ ಪರಿಣಾಮ ಹಾಗೂ ಬೆಳೆಗೆ ಆಗುವ ದುಷ್ಪರಿಣಾಮಗಳನ್ನು ಪರಿಶೀಲಿಸುವುದಾಗಿದೆ ಎಂದು ತಿಳಿಸಿದರು.


ಪ್ರಸ್ತುತ ಹಂಗಾಮಿನಲ್ಲಿ ಬತ್ತ ಮತ್ತು ಸೋಯಾಬೀನ್ ಬೆಳೆಯಲ್ಲಿ ಯೋಜನೆಯ ಹಮ್ಮಿಕೊಂಡಿದ್ದು ಫಲಿತಾಂಶಗಳ ಆದರಿಸಿ ಮುಂದಿನ ಹಂಗಾಮಿನಲ್ಲಿ ಇನ್ನುಳಿದ ಇತರ ಪ್ರಮುಖ ಬೆಳೆಗಳ ಮೇಲೆ ಅನುಷ್ಠಾನಗೊಳಿಸಲಾಗುವುದು ಎಂದರು.¸ಬತ್ತದ ಪ್ರಮುಖ ಕೀಟಪೀಡೆಗಳು ಹಾಗೂ ರೋಗಗಳ ಸಮರ್ಪಕ ನಿಯಂತ್ರಣದ ಸಂಶೋಧನೆಯಡಿಯಲ್ಲಿ ಈ ಕಾರ್ಯಕ್ರಮವನ್ನು ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ಬತ್ತದ ಕ್ಷೇತ್ರದಲ್ಲಿ ಕೈಗೊಳ್ಳಲಾಗುವುದು.


ಪರಿಸರ ಪ್ರೇಮಿಗಳಾದ ಮಾಜಿ ತಾಲ್ಲೂಕು ಪಂಚಾಯತ ಅದ್ಯಕ್ಷ ರಫಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಪ್ರಾತ್ಯಕ್ಷಿಕೆಯಲ್ಲಿ ಕೃಷಿ ಮಹಾವಿದ್ಯಾಲಯ, ಗಂಗಾವತಿಯ ಕೀಟಶಾಸ್ತ್ರ ವಿಜ್ಞಾನಿ ಡಾ. ಪಿ. ಆರ್‌ ಬದರಿ ಪ್ರಸಾದ್‌ ಹಾಗೂ ಪ್ರಗತಿಪರ ರೈತರು ಯೋಜನೆಯ ಚಾಲನೆಯಲ್ಲಿ ಭಾಗವಹಿಸಿದ್ದು ಡ್ರೋನ್ ಚಾಲನೆಯ ಕ್ರಮ, ಸಿಂಪರಣಾ ವೇಗ, ವಿಧಾನ ಹಾಗೂ ಇನ್ನಿತರ ವಿಷಯಗಳ ಮೇಲೆ ತಜ್ಞರೊಂದಿಗೆ ಚರ್ಚಿಸಿದರು.


ಪುಣೆಯು ಸಿಂಝೇಂಟಾ ಇಂಡಿಯಾ ಲಿಮಿಟೆಡ್ ಕಂಪನಿಯ ಪ್ರಾಯೋಜಿತ ಈ ಯೋಜನೆಯಲ್ಲಿ ಬೆಂಗಳೂರು ಮೂಲದ ಜನರಲ್ ಏರೋನಾಟಿಕ್ಸ್ ಲಿಮಿಟೆಡ್‍ದವರು ಡ್ರೋನ್ ಹಾಗೂ ಡ್ರೋನ್ ಚಾಲನೆಯ ತಜ್ಞರೊಂದಿಗೆ ಪಾಲ್ಗೊಂಡಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post