||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೊಸ ಶಿಕ್ಷಣ ನೀತಿಯಲ್ಲಿ ಹೊಸತೇನು ಇದೆ?

ಹೊಸ ಶಿಕ್ಷಣ ನೀತಿಯಲ್ಲಿ ಹೊಸತೇನು ಇದೆ?


2020ರ ಹೊಸ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಆವಲೇೂಕಿಸಿದಾಗ ಹೆಚ್ಚೇನೂ ಹೊಸತೇನು ಕಾಣುವುದಿಲ್ಲ. ಕೆಲವೊಂದು ಸಣ್ಣಪುಟ್ಟ ಮಾಪಾ೯ಡುಗಳು ಮಾಡಿರುವುದು ಎದ್ದು ಕಾಣುತ್ತದೆ ಅಷ್ಟೇ. ಹೊಸ ಶಿಕ್ಷಣ ನೀತಿಯನ್ನು "ಹಳೆತು ಹೊಸತರ ಸಂಮಿಶ್ರಣ" ಅಥವಾ "old wine in a new bottle" ಅಂತ ಕರೆದರೂ ಅತಿಶಯೋಕ್ತಿ ಆಗಲಾರದು. ಅದು ಹೇಗೆ? ಯಾಕೆ? ಏನು? ಅನ್ನುವುದನ್ನು ಸ್ವಲ್ಪ ಒಳ ಹೊಕ್ಕು ನೇೂಡಬೇಕಾದದ್ದು ಅನಿವಾರ್ಯ.


1. ಹೊಸ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಿರುವ ಧ್ಯೇಯ ಉದ್ದೇಶಗಳು ಹಿಂದಿನ ಶಿಕ್ಷಣ ನೀತಿಯಲ್ಲೂ ಇತ್ತು. ರಾಷ್ಟೀಯತೆ, ಭಾತೃತ್ವ, ಮಾನವ ಹಕ್ಕು, ವಿಶ್ವ ದೃಷ್ಟಿಕೇೂನ, ಇತ್ಯಾದಿ. ಆದರೆ ಜನರಿಗೆ ತಿಳಿಸುವಲ್ಲಿ ಅನುಷ್ಠಾನಗೊಳಿಸುವುದರಲ್ಲಿ ಸೇೂತಿರ ಬಹುದು ಅಷ್ಟೇ?


2. ನಮ್ಯತೆ ಅನ್ಯಮತೆ ಇದೇನು ಹೊಸ ಪದಗಳಲ್ಲ. ಯಾಕೆಂದರೆ ಈಗ ನಾವು ಹೇಳುವ ಹೊಸ ಶಿಕ್ಷಣ ನೀತಿ ತುಂಬಾ ನಮ್ಯತೆಯಿಂದ ಕೂಡಿದೆ ಅನ್ನುವುದನ್ನು ಪೂತಿ೯ಯಾಗಿ ಒಪ್ಪಲು ಸಾಧ್ಯವಿಲ್ಲ. ಇಂದಿನ ಡಿಜಿಟಲ್ ಕಂಪ್ಯೂಟರ್ ಯುಗಕ್ಕೆ ಹತ್ತಿರವಾಗಿ ಶೆೈಕ್ಷಣಿಕ ಸವಲತ್ತುಗಳನ್ನು ಹೇಗೆ ಬಳಸಿಕೊಳ್ಳಬಹುದು ಅನ್ನುವುದನ್ನು ಹೊಸ ಶಿಕ್ಷಣ ನೀತಿಯಲ್ಲಿ  ಹೆಚ್ಚು ಒತ್ತು ನೀಡಲಾಗಿದೆ. ಆನ್‌ಲೈನ್ ಶಿಕ್ಷಣ ಎಂಬ ಪರಿಭಾಷೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಮುಕ್ತತೆಯ ಭಾವ ತುಂಬಿಸಲಾಗಿದೆ.


ಇದು ಹಿಂದೇ ಕೂಡಾ ಇತ್ತು. ಅದನ್ನೇ ನಾವು ದೂರ ಶಿಕ್ಷಣ ಅನ್ನುವ ಪದ ಬಳಸಿದ ಕಾರಣ ಅದು ಸ್ವಲ್ಪ ದೂರವಾಗಿ ಕಂಡಿರ ಬಹುದು ಅಷ್ಟೇ. ಅದನ್ನು ಈಗ ಹೆಚ್ಚು ಹತ್ತಿರ ತಂದಿರುವುದು ಡಿಜಿಟಲ್ ಆಧರಿತ ಆನ್‌ಲೈನ್ ಶಿಕ್ಷಣ.


3. ಹೊಸ ಶಿಕ್ಷಣ ನೀತಿಯಲ್ಲಿ ಹೇಳುವ ಒಂದು ಪ್ರಮುಖ ಅಂಶವೆಂದರೆ ಒಬ್ಬ ವಿದ್ಯಾರ್ಥಿ ಪದವಿ ಮುಗಿಸುವ ಮಧ್ಯದಲ್ಲಿ ಕಾರಣಾಂತರಗಳಿಂದ ಪದವಿ ಮಂದುವರಿಸಲು ಸಾಧ್ಯವಾಗದೇ ಹೇೂದಲ್ಲಿ ಅವನಿಗೆ ಮತ್ತೆ ಮಧ್ಯದಲ್ಲಿ ಶಿಕ್ಷಣ ಮುಂದುವರಿಸಲು ಇಲ್ಲಿ ಅವಕಾಶವಿದೆ. ಹಾಗಾಗಿ ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ನಮ್ಯತೆಯ ಶಿಕ್ಷಣ ನೀತಿ ಅನ್ನುವ ಅಂಶ ಒತ್ತಿ ಹೇಳಲಾಗಿದೆ.


ಇದು ಹೊಸತೇನು ಅಲ್ಲ. ಕಾರಣ ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೂಡಾ ಇದಕ್ಕೆ ಪೂರಕವಾದ ಅಂಶ ಚೆನ್ನಾಗಿಯೇ ಇತ್ತು. ಉದಾ: ನನ್ನ ಓವ೯ ವಿದ್ಯಾರ್ಥಿ 1998ರಲ್ಲಿ ಬಿ.ಎ.ಯಲ್ಲಿ ಎರಡು ವಿಷಯಗಳನ್ನು ಪಾಸು ಮಾಡಲಾರದೆ ಮಧ್ಯದಲ್ಲಿ ಗಲ್ಫ್ ಗೆ ಉದ್ಯೋಗಕ್ಕಾಗಿ ಹೇೂಗಿದ್ದ. ಆದರೆ 15 ವರುಷಗಳ ಅನಂತರ ಅವನಿಗೆ ಪದವಿ ಪ್ರಮಾಣ ಪತ್ರದ ಅಗತ್ಯ ಬಿದ್ದಾಗ ಮತ್ತೆ ಊರಿಗೆ ಬಂದು ಮಂಗಳೂರು ವಿ.ವಿ.ಅಡಿಯಲ್ಲಿ ಈ ಎರಡು ವಿಷಯಗಳಿಗೆ ಪರೀಕ್ಷೆಗೆ ಕೂತು ತೇಗ೯ಡೆ ಹೊಂದಿ ಡಿಗ್ರಿ ಪದವಿ ಸಂಪಾದಿಸಿದ್ದಾನೆ. ಅವನಿಗೆ  ಮಂಗಳೂರು ವಿ.ವಿ. ಎಷ್ಟು ಅನುಕೂಲ ಮಾಡಿಕೊಟ್ಟಿತ್ತು ಅಂದರೆ ಸುಮಾರು ಈ ಹದಿನೆೈದು ವರುಷಗಳಲ್ಲಿ ವಿಷಯ; ಕ್ರೆಡಿಟ್ (ಅಂಕ) ಗಳಲ್ಲಿ ಸಾಕಷ್ಟು ಬದಲಾವಣೆ ಆಗಿದ್ದರೂ ಕೂಡಾ ಆ ಒಬ್ಬ ವಿದ್ಯಾರ್ಥಿಗಾಗಿಯೆ 1998ರ ಮಾದರಿ ಪ್ರಶ್ನೆ ಪತ್ರಿಕೆ ಅಂಕಗಳ ವ್ಯವಸ್ಥೆಯಲ್ಲಿಯೆ ಪರೀಕ್ಷೆ ನಡೆಸಿರುವುದು ನಮ್ಯತೆಯ ಶಿಕ್ಷಣ ಅನ್ನಿಸುವುದಿಲ್ಲವೇ?


4. ಒಂದು ವಿ.ವಿ.ಯಲ್ಲಿ ಎರಡು ವರುಷ ಅಧ್ಯಯನಮಾಡಿ ಇನ್ನೊಂದು ವಿ.ವಿ. ವ್ಯಾಪ್ತಿಯಲ್ಲಿ ಅಧ್ಯಯನ ಮಾಡುವ ಅವಕಾಶ ಹಿಂದೆಯೂ ಇತ್ತು. ಆದರೆ ಆ ವಿಷಯದ ಜೇೂಡಣೆ ಅಲ್ಲಿ ಇರ ಬೇಕಿತ್ತು. ಅಷ್ಟೇ.
5. ಹೊಸ ಶಿಕ್ಷಣ ನೀತಿಯಲ್ಲಿ ಮೂರು ಮೇಜರ್ ಹೇೂಗಿ ಎರಡು ಮೇಜರ್‌ಗೆ ಬಂದಿದೆ ಅನ್ನುವುದು. ಇದು ಹಿಂದೆಯೂ ಇತ್ತು. ಆದರೆ ತೀರ ಹಿಂದೆ ವಿ.ವಿ.ಗಳಿಂದ ವಿಷಯಗಳನ್ನು ಮಾನ್ಯತೆ ಪಡೆದು ಕೊಳ್ಳುವಾಗ ಮೂರು ಮೇಜರ್ ವಿಷಯಗಳ ಜೇೂಡಣೆಯಲ್ಲಿ ಮಾನ್ಯತೆ ಪಡೆದುಕೊಂಡಿದ್ದಾವೆ. ಉದಾ: ಇತಿಹಾಸ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ. ಆದರೆ ಅನಂತರದಲ್ಲಿ ಅದೆಷ್ಟೊ ಕಾಲೇಜುಗಳು ಸಿಂಗಲ್ ಮೇಜರ್‌ ಆಯ್ಕೆಯಲ್ಲಿಯೇ ಮಾನ್ಯತೆ ಪಡೆದುಕೊಂಡಿವೆ. ಅಲ್ಲಿ ಕೂಡಾ ವಿಷಯಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಳಿಗೆ ಮುಕ್ತತೆ ಇತ್ತು.


6. ಹೊಸ ಶಿಕ್ಷಣ ನೀತಿಯಲ್ಲಿ ಸೇರಿಕೆುಾಂಡ ಇನ್ನೊಂದು ಪ್ರಮುಖ ಅಂಶವೆಂದರೆ ವೃತ್ತಿ ಪರ (vocational )ಹಾಗಾದರೆ ಇದು ಹೊಸ ಪರಿಕಲ್ಪನೆಯೇ ಖಂಡಿತವಾಗಿಯೂ ಅಲ್ಲ.ಕಾಮಸ೯ನಂತಹ ವಿಷಯಗಳಲ್ಲಿ ಇದಾಗಲೇ ಈ ಪರಿಭಾಷೆಯಲ್ಲಿಯೆ ವಿಷಯಗಳ ಅಧ್ಯಯನಕ್ಕೆ ಅವಕಾಶವಿತ್ತು.ಆದರೆ ಬೇರೆ ವಿಷಯಗಳಲ್ಲಿ ಅಂದ್ರೆ ಕಲೆ ಮತ್ತು ವಿಜ್ಞಾನವಿಷಯಗಳಲ್ಲಿ ಹೆಚ್ಚೇನೂ ಈ ಪದ ಬಳಕೆಯಾಗುತ್ತಿರಲಿಲ್ಲ. ಆದರೆ ಅಲ್ಲಿ ಕೂಡಾ ಪ್ರಾಯೇೂಗಿಕವಾಗಿ ಸ್ಥಳ ಅಧ್ಯಯನ ವಸ್ತು ಅಧ್ಯಯನ ಮಾಡ ಬೇಕೆಂಬ ಸೂಚನೆಗಳು ಇತ್ತು ಆದರೆ ಇದಕ್ಕೆಲ್ಲ ಸಮಯದ ಕೊರತೆ ಮಾತ್ರವಲ್ಲ ಸಿಲೆಬಸ್ ಕಂಪ್ಲೀಟ್‌ ಮಾಡುವ ಒತ್ತಡದಲ್ಲಿ ಇದಕ್ಕೆಲ್ಲ ಮಹತ್ವ ಕಡಿಮೆಯಾಗುತ್ತಾ ಬಂತು. ಆದರೂ ಇಂದಿನ ಹೊಸ ಶಿಕ್ಷಣ ನೀತಿಯಲ್ಲಿ ಸಾಧ್ಯವಾಗುತ್ತದೆ ಅನ್ನುವುದು ಕೂಡಾ ಸಂಶಯ.ಯಾಕೆಂದರೆ ಹೊಸ ಶಿಕ್ಷಣ ನೀತಿಯಲ್ಲಿ ತಿಂಗಳಿಗೊಂದು ಪರೀಕ್ಷೆ ಮೌಲ್ಯ ಮಾಪನ ಈ ಒತ್ತಡದಲ್ಲಿ ಈ ಕ್ಷೇತ್ರ ಅಧ್ಯಯನ ವೃತ್ತಿ ಪರತೆ ಅಧ್ಯಯನ ಎಷ್ಟರ ಮಟ್ಟಿಗೆ ಯಶಸ್ವಿ ಆಗಬಹುದು? ಅನ್ನುವುದು ಕೂಡಾ ನಮ್ಮ ಮುಂದಿರುವ ಪ್ರಶ್ನೆ.  


7. ಸಂವಿಧಾನ; ಪರಿಸರ :ಲಿಂಗ ಸಮಾತೆ ರಾಷ್ಟೀಯತೆಯ ಅರಿವು..ಇದೆಲ್ಲವೂ ಈ ಹಿಂದೆಯುಾ ಇತ್ತು.ಹಾಗಾಗಿ ಇದೇನು ಹೊಸತಲ್ಲ.


8. ಪಠ್ಯದ ಜೊತೆಗೆ ಬದುಕಿಗೆ ಬೇಕಾಗುವ ಕೌಶಲ್ಯ ಅಭಿವೃದ್ಧಿಗಾಗಿಯೆ ವಿದ್ಯಾರ್ಥಿಗಳನ್ನು ವಿವಿಧ ಚಟುವಟಿಕೆಳಲ್ಲಿ ತೊಡಗಿಸಿಕೆುಾಳ್ಳ ಬೇಕು ಅನ್ನುವ ಸಲುವಾಗಿಯೇ 50ಅಂಕಗಳನ್ನು ಇದಕ್ಕೆ ಮೀಸಲಾಗಿ ಇಡಲಾಗಿತ್ತು. ಆದರೆ ಇದರಲ್ಲಿ ಎಷ್ಟು ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುತ್ತಿದ್ದರು? ಯಾವ ರೀತಿಯಲ್ಲಿ ಮೌಲ್ಯ ಮಾಪನ ನಡೆಯತ್ತಿತ್ತು ಅನ್ನುವುದು ಅಷ್ಟೇ ಮುಖ್ಯ.


9. ಅಂತೂ ಹೊಸ ಶಿಕ್ಷಣ ನೀತಿಯಲ್ಲಿ ಸ್ವಲ್ಪ ಬದಲಾವಣೆ ಕಂಡಿದ್ದು ಪದವಿ ಹಂತದಲ್ಲಿ ಮಾಡಿರುವ ವರುಷಗಳ ವಿಭಜನೆ. ಅಂದರೆ ಒಂದು ವರುಷಕ್ಕೆ ಸಟಿ೯ಫಿಕೇಟ್ ಎರಡನೇಯ ವರುಷಕ್ಕೆ ಡಿಪ್ಲೊಮಾ ಮೂರನೆ ವರುಷಕ್ಕೆ ಪದವಿ. ಅದೇ ನಾಲ್ಕನೆಯ ವರುಷ ಬೇಕಿದ್ದರೆ ಆನರ್ಸ್‌. ಇದು ಹಿಂದಿನ ವ್ಯವಸ್ಥೆಯಲ್ಲಿ ಇರಲಿಲ್ಲ.


10. ಹೊಸ ಶಿಕ್ಷಣ ನೀತಿಯಲ್ಲಿ ಸ್ನಾತಕೋತ್ತರ ಪದವಿಯ ಹಂತ ಹೆಚ್ಚು ಗೊಂದಲ ಸೃಷ್ಟಿಸಿದ ಹಾಗೆ ಕಾಣುತ್ತದೆ. ಆನರ್ಸ್‌ ಪದವಿ ಗಳಿಸಿದವ ನೇರವಾಗಿ ಸಂಶೋಧನಾ ಕಾಯ೯ದಲ್ಲಿ ತೊಡಗಿಸಿ ಕೊಳ್ಳಬಹುದು. ಅನಂತರದಲ್ಲಿ ಉಪನ್ಯಾಸಕ ಹುದ್ದೆಗೂ ಆಹ೯ತೆ ಪಡೆಯುತ್ತಾನೆ ಅನ್ನುವುದು. ಅಥವಾ ಆನಸ್೯ ಪದವಿ ನಂತರ ಮತ್ತೆ ಒಂದು ವರುಷ ಅಧ್ಯಯನ ಮಾಡಿದರೆ ಸ್ನಾತಕೋತ್ತರ ಪದವಿಗಳಿಕೆ ಸಾಧ್ಯ ಅನ್ನುವುದು.


11. ಹಾಗಾದರೆ ಇಲ್ಲಿ ಬರುವ ಬಹುಮುಖ್ಯ ಪ್ರಶ್ನೆ ಅಂದರೆ ವಿಶ್ವ ವಿದ್ಯಾಲಯಗಳ ವಿದ್ಯಾ ಪೀಠದಲ್ಲಿ ಕೂತು ಸ್ನಾತಕೋತ್ತರ ಅಧ್ಯಯನ ಮಾಡುವ ಅವಕಾಶ ಕಡಿಮೆಯಾಗಬಹುದು ಮಾತ್ರವಲ್ಲ ವಿ.ವಿ. ಕೇಂದ್ರಗಳು ಕೇವಲ ಸಂಶೋಧನಾ ಕೇಂದ್ರಗಳಾಗಿ ಮಾಪಾ೯ಡಾಗುವ ಸಾಧ್ಯತೆ ಜಾಸ್ತಿ ಕಾಣುತ್ತಿದೆ.


12. ಅಂತರರಾಷ್ಟ್ರೀಯ ಗುಣ ಮಟ್ಟದ ಶಿಕ್ಷಣ ನಮ್ಮ ವಿದ್ಯಾರ್ಥಿಗಳಿಗೂ ಸಿಗಬೇಕು ಹಾಗಾಗಿ ಜಾಗತಿಕ ವಿ.ವಿ.ಪೀಠಗಳು ನಮ್ಮಲ್ಲಿ ಪ್ರಾರಂಭಿಸಲು ಅವಕಾವಿದೆ ಅನ್ನುವ ಮಾತು ಹೊಸ ಶಿಕ್ಷಣ ನೀತಿಯಲ್ಲಿ ಕೇಳಿ ಬಂದಿದೆ. ಅದಕ್ಕೆ ತಜ್ಞರು ಕೊಡುವ ಅಭಿಪ್ರಾಯವೆಂದರೆ ಇದರಿಂದಾಗಿ ನಮ್ಮ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಅಮೆರಿಕಾ,   ಲಂಡನ್‌ನಂತಹ ದೇಶಗಳಿಗೆ ಓಡಬೇಕಾಗಿಲ್ಲ. ಇದರಿಂದಾಗಿ ಮೆದುಳಿನ ಪಲಾಯನ ತಪ್ಪಿಸಬಹುದು ಅನ್ನುವುದು. ಆದರೆ ನಾವು ಇಲ್ಲಿ ಒಂದು ಸತ್ಯ ತಿಳಿದುಕೊಳ್ಳಬೇಕು ನಮ್ಮ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ಹಾರಿ ಹೇೂಗುವುದು ಬರೇ ಗುಣಮಟ್ಟದ ಶಿಕ್ಷಣಕ್ಕಾಗಿಯೇ ಅಲ್ಲ; ಬಹುಮುಖ್ಯವಾಗಿ ಅಲ್ಲಿನ ಶಿಕ್ಷಣ ಅನಂತರ ಅವರಿಗೆ ಸಿಗುವ ಉತ್ತಮ ಉದ್ಯೋಗ, ಸಂಬಳ, ಬೆಳೆಯುವ ಅವಕಾಶ, ಪ್ರತಿಭೆಗೆ ಮಾನ್ಯತೆ, ಇದನ್ನೆಲ್ಲಾ ನಾವು ನಮ್ಮ ದೇಶದಲ್ಲಿ ಕಲಿಸಲು ಸಾಧ್ಯವಾಗದೇ ಹೇೂದರೆ ನಮ್ಮ ನೆಲದಲ್ಲಿ ಸ್ಥಾಪಿಸಿದ ವಿದೇಶಿ ಶಿಕ್ಷಣ ಸಂಸ್ಥೆಯ ಜೊತೆಗೇನೆ ನಮ್ಮ ಟಾಪ್ ಬ್ರೆೈನ್‌ಗಳು ಪಲಾಯನ ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ.


ಇದನ್ನೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಹೊಸ ಶಿಕ್ಷಣ ನೀತಿಯನ್ನು ಪ್ರಾಮಾಣಿಕವಾಗಿ ಸ್ವೀಕರಿಸಿ ಅನುಷ್ಠಾನಗೊಳಿಸುವ ಸಂಕಲ್ಪ ಸರಕಾರ ಮತ್ತು ಜನರಿಂದ ಆಗಬೇಕಾಗಿದೆ ಅನ್ನುವುದು ನಮ್ಮೆಲ್ಲರ ಆಶಯ.


-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post