ಒಂದಕ್ಕೇ ನಿಲ್ಲುವುದಿಲ್ಲ ಬಾಕಾಹು ತಿಂಡಿ ಪ್ರಯೋಗ

Upayuktha
0

 



ಬಾಕಾಹು (ಬಾಳೆಕಾಯಿ ಹುಡಿ/ ಹಿಟ್ಟು) ಜನಮನಸ್ಸನ್ನು ಎಷ್ಟು ಸೆಳೆದಿದೆ ನೋಡಿ.


ಒಂದು ಮನೆ/ ಸಂಸ್ಥೆಯಲ್ಲಿ ಹೊಸದಾಗಿ ಒಂದು ತಿಂಡಿ ಮಾಡಿದರೋ, ಮತ್ತೊಂದು ಮಾಡೋಣ ಎನಿಸುತ್ತದೆ. ಕಾರಣ ಇದು ಎಲ್ಲೆಲ್ಲೂ ಹೆಚ್ಚಿನ ಪ್ರಯೋಗಗಳಲ್ಲೂ ಒಳ್ಳೆಯ ಮಾರ್ಕು ಪಡೆದಿದೆ.


ಪೊನ್ನಂಪೇಟೆಯ ಅರಣ್ಯ ಕಾಲೇಜಿನಲ್ಲಿ ಈಚೆಗೆ ಅಕ್ಕಿ ರೊಟ್ಟಿ ಮತ್ತು ನೂಪುಟ್ಟು ಮಾಡಿದ್ದರು. ಇದು ರುಚಿಸಿದ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿ ಪೊನ್ನಂಪೇಟೆಯ ನಿರ್ಮಲ ತಯಾರಿಸಿದ ಮೈಸೂರ್ ಪಾಕು ಎಲ್ಲರಿಂದಲೂ ಶ್ಲಾಘನೆ ಪಡೆದಿದೆಯಂತೆ.


ಹಾವೇರಿ ಜಿಲ್ಲೆಯ ಮಾವಿನತೋಪು ಗೋಪಾಲ್ ಗೌಡರ ಶ್ರೀಮತಿ ಸೌಭಾಗ್ಯ ಕಳೆದ ವಾರ ಬಾಕಾಹು ಚಪಾತಿ, ಹೋಳಿಗೆ ಆಡಿದರು. ಅಷ್ಟಕ್ಕೇ ನಿಲ್ಲಿಸದೆ ಕಳೆದ ದಿನಗಳಲ್ಲಿ ಬರ್ಫಿ, ಕರ್ಜಿಕಾಯಿ ಮಾಡಿದ್ದಾರೆ. ಮನೆಮಂದಿಯೆಲ್ಲಾ ಖುಷ್!


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top