|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸವಿರುಚಿ: ಬಾಕಾಹು ಹಾಲೊಬ್ಬಟ್ಟು

ಸವಿರುಚಿ: ಬಾಕಾಹು ಹಾಲೊಬ್ಬಟ್ಟು



ಪಾಕ: ರಘು ಆರ್.ಎಸ್, ಕುಲಂಬಿ- 95352 82617


ಬೇಕಾಗುವ ಸಾಮಗ್ರಿ: ಬಾಕಾಹು (ಬಾಳೆಕಾಯಿ ಹುಡಿ / ಹಿಟ್ಟು)- 200 ಗ್ರಾಮ್, ಸಕ್ಕರೆ - 150 ಗ್ರಾಮ್, ಬಿಸಿ ಹಾಲು- 50 ಮಿ.ಲೀ., ಒಣ ಕೊಬ್ಬರಿ ತುರಿ- 50 ಗ್ರಾಮ್, ಬೆಣ್ಣೆ- 25 ಗ್ರಾಮ್, ಗಸಗಸೆ- 25 ಗ್ರಾಮ್, ಏಲಕ್ಕಿ - ಏಳೆಂಟು, ಪಾಕ ಮಾಡಲು ಕಾಲು ಲೀಟರ್ ನೀರು, ಕಾಯಿಸಿದ ಎಣ್ಣೆ- 2- 3 ಚಮಚೆ, ಉಪ್ಪು- ಒಂದು ಚಿಟಿಕೆ, ಕರಿಯಲು ಎಣ್ಣೆ


ಮಾಡುವ ವಿಧಾನ: ಬಾಕಾಹುವನ್ನು ಬಾಣಲೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಸ್ವಲ್ಪ ಬಿಸಿ ಮಾಡಿ. ಅದಕ್ಕೆ ಒಂದು ಚಿಟಿಕೆ ಉಪ್ಪು, ಬೆಣ್ಣೆ, ಬಿಸಿ ಹಾಲು ಹಾಕಿ ಮೆದುವಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಅದನ್ನು 2- 3 ಗಂಟೆ ಹಾಗೆಯೇ ಬಿಟ್ಟು ಸಕ್ಕರೆ ಪಾಕ ಮಾಡಿಕೊಳ್ಳಿ.


ಬಾಣಲೆಯಲ್ಲಿ ಏಲಕ್ಕಿ, ಗಸಗಸೆ ಒಣ ಕೊಬ್ಬರಿ ತುರಿ ಹಾಕಿ ಕನಿಷ್ಠ ಉರಿಯಲ್ಲಿ ಹುರಿದು ಮಿಕ್ಸಿಯಲ್ಲಿ ಹುಡಿ ಮಾಡಿ ಇಡಿ. ಪಾತ್ರೆಗೆ ಕಾಲು ಲೀಟರ್ ನೀರು ಮತ್ತು ಸಕ್ಕರೆ ಹಾಕಿ ಕುದಿಯಲು ಇಡಿ. ಗುಳ್ಳೆ ಬರುವಾಗ ಏಲಕ್ಕಿ ಇತ್ಯಾದಿಗಳ ಹುಡಿ ಹಾಕಿ ಮತ್ತೂ ಐದು ನಿಮಿಷ ಸಣ್ಣ ಉರಿಯಲ್ಲಿರಿಸಿ. ನಂತರ ಇಳಿಸಿ ತಣಿಯಲು ಬಿಡಿ.


ಬಾಕಾಹು ಹಿಟ್ಟನ್ನು ಪೂರಿಯಂತೆ ಲಟ್ಟಿಸಿ ಎಣ್ಣೆಯಲ್ಲಿ ಹದವಾಗಿ ಕೆಂಪಗೆ ಕರಿಯಿರಿ.ಆರಿದ ನಂತರ ಸಕ್ಕರೆ ಪಾಕದಲ್ಲಿ ಅದ್ದಿ ನೆನೆಸಿ. ಅನಂತರ ಬೇರೆ ಪ್ಲೇಟಿಗೆ ವರ್ಗಾಯಿಸಿ ಡ್ರೈ ಫ್ರುಟ್ಸ್ ಹಾಕಿ ಅಲಂಕರಿಸಿ.

ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post