ಗವ್ವುಲು ಆಂಧ್ರದ ಸಾಂಪ್ರದಾಯಿಕ ಸಿಹಿತಿಂಡಿ
ಪಾಕ: ಡಾ.ಹೆಚ್. ಶಿಲ್ಪಾ, ಗೃಹ ವಿಜ್ಞಾನಿ, ಕೇವೀಕೆ ಬಳ್ಳಾರಿ
ಬೇಕಾಗುವ ಸಾಮಗ್ರಿ: ಬಾಳೆಕಾಯಿ ಹುಡಿ / ಪುಡಿ (ಬಾಕಾಹು)– ಒಂದು ಲೋಟ, ಗೋಧಿ ಹಿಟ್ಟು– ಕಾಲು ಲೋಟ, ಬೆಲ್ಲದ ಪುಡಿ (ಅಚ್ಚು ಬೆಲ್ಲ ಕುಟ್ಟಿ ಪುಡಿ ಮಾಡಿದ್ದು)– ಒಂದೂವರೆ ಲೋಟ, ಚಿರೋಟಿ ರವೆ– ಎರಡು ಟೀ ಚಮಚ, ಎಣ್ಣೆ– ಕರಿಯಲು ಬೇಕಾದಷ್ಟು ಮತ್ತು ಗವ್ವುಲು ಮಾಡುವ ಅಚ್ಚು. ಇಲ್ಲವಾದರೆ, ತಂತಿಯಿಂದ ಮಾಡಿದ ಜಾಲಿ ಸೌಟು.
ಮಾಡುವ ವಿಧಾನ:
ಬಾಳೆಕಾಯಿ ಪುಡಿ, ಗೋಧಿ ಹಿಟ್ಟು, ಚಿರೋಟಿ ರವೆ- ಎಲ್ಲವನ್ನೂ ಮಿಶ್ರ ಮಾಡಿ ನೀರು ಬೆರೆಸಿ ಪೂರಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ.
ಗವ್ವುಲು ಅಚ್ಚಿಗೆ ಎಣ್ಣೆ ಸವರಿ ಹಿಟ್ಟಿನಿಂದ ಚಿಕ್ಕಚಿಕ್ಕ ಉಂಡೆ ಮಾಡಿ ಅಚ್ಚಿನ ಮೇಲೆ ಒತ್ತಿ ಶಂಖುವಿನ ಆಕಾರಕ್ಕೆ ಸುತ್ತಿರಿ.
ಈ ರೀತಿ ತಯಾರಿಸಿಟ್ಟ ಗವ್ವುಲುಗಳನ್ನು ಕಾಯ್ದ ಎಣ್ಣೆಯಲ್ಲಿ ಹಾಕಿ ಕುರುಕಲಾಗುವ ವರೆಗೂ ಕರಿಯಿರಿ.
ಇನ್ನೊಂದು ಪಾತ್ರೆಯಲ್ಲಿ ಪುಡಿ ಮಾಡಿಟ್ಟ ಬೆಲ್ಲ ಹಾಕಿ ಸ್ವಲ್ಪವೇ ನೀರು ಹಾಕಿ ಮೃದುವಾದ ಮುದ್ದೆ ಪಾಕ ಬರುವ ವರೆಗೆ ಕುದಿಸಿ. ಕರೆದಿಟ್ಟ ಗವ್ವುಲುಗಳನ್ನು ಪಾಕಕ್ಕೆ ಬೆರೆಸಿರಿ.
ಸಿಹಿ ಇಷ್ಟ ಪಡದವರು ಹಿಟ್ಟಿಗೆ ಉಪ್ಪು, ಖಾರ, ಮಸಾಲೆಗಳನ್ನು ಬೆರೆಸಿ ಕರಿದರೆ ಆಯ್ತು.
ಗವ್ವುಲುನಲ್ಲಿರುವ ಪೋಷಕಾಂಶಗಳು- ಗವ್ವುಲು ಶಕ್ತಿ (ಕ್ಯಾಲೋರೀಸ್), ನಾರು, ಕಬ್ಬಿಣಾಂಶ, ಕ್ಯಾಲ್ಸಿಯಂ, ಪೊಟ್ಯಾಶಿಯಂ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು