||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸೇವೆಯೇ ಪರಮ ಗುರಿಯಾಗಿರಲಿ: ಬೆಳ್ಳಾಲ ಗೋಪಿನಾಥ ರಾವ್

ಸೇವೆಯೇ ಪರಮ ಗುರಿಯಾಗಿರಲಿ: ಬೆಳ್ಳಾಲ ಗೋಪಿನಾಥ ರಾವ್

ಉಜಿರೆ ಎಸ್‌ಡಿಎಂ ಕಾಲೇಜಿ‌ನಲ್ಲಿ ಎನ್‌ಎಸ್‌ಎಸ್‌ ದಿನಾಚರಣೆ: ವಿಶೇಷ ಉಪನ್ಯಾಸ ಕಾರ್ಯಕ್ರಮ ಉಜಿರೆ: ವಿದ್ಯಾರ್ಥಿಗಳಲ್ಲಿ ಹೃದಯವಂತಿಕೆ, ಯೋಚನಾ ಶಕ್ತಿ ಹಾಗೂ ಕಾರ್ಯತತ್ಪರತೆ  ಅತ್ಯಗತ್ಯ. ಅವರ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಗೌರವ, ನಿರಂತರ ಕಲಿಕೆ, ಗುರಿ, ಆತ್ಮವಿಶ್ವಾಸಗಳನ್ನು ರೂಢಿಸಿಕೊಳ್ಳಬೇಕು. ಸೇವೆಯೇ ಪರಮ ಗುರಿಯಾಗಿರಬೇಕು ಹಾಗೂ ಭವ್ಯ ಭಾರತದ ದಿವ್ಯ ಪ್ರಜೆಯಾಗಿ, ಭಾರತವನ್ನು ಗೆಲ್ಲಿಸುವಂತಾಗಬೇಕು." ಎಂದು ಭಾರತೀಯ ಸೇನೆಯ ನಿವೃತ್ತ ಯೋಧ  ಹಾಗೂ ಮಂಗಳೂರಿನ ರಾಮಕೃಷ್ಣ ಆಶ್ರಮದ 'ಸ್ವಚ್ಛ ಮನಸ್' ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಬೆಳ್ಳಾಲ ಗೋಪಿನಾಥ್ ರಾವ್ ಹೇಳಿದರು.


ರಾಷ್ಟ್ರೀಯ ಸೇವಾ ಯೋಜನಾ ದಿನದ ಅಂಗವಾಗಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಆಯೋಜಿಸಿದ್ದ "ವ್ಯಕ್ತಿತ್ವ ವಿಕಸನ ಮತ್ತು ಸೈನಿಕರು" ಎಂಬ ವಿಷಯದ ಕುರಿತಾದ ಆನ್‌ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.  


"ವಿದ್ಯಾರ್ಥಿಗಳು ಸಮಾಜ ಸೇವೆಯಲ್ಲಿ ತೊಡಗಿರುವ ಪರಿ ಅದ್ಭುತ, ಎನ್ಎಸ್ಎಸ್ ದೇಶ ಕಟ್ಟುವ ಕೆಲಸ ಮಾಡುತ್ತಿದೆ, ಉತ್ತಮ ನಾಗರಿಕ ಸಮಾಜವನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ಮಂಗಳೂರು ವಿಶ್ವವಿದ್ಯಾಲಯದ ಎನ್ ಎಸ್‌ಎಸ್ ನ ಸಂಯೋಜಕಿ ಡಾ. ನಾಗರತ್ನ ಕೆ. ಎ ಹೇಳಿದರು.


"ಸಮುದಾಯದ ಉಪಸ್ಥಿತಿ ಮತ್ತು ಅನುಭವದ ಮೂಲಕ ವಿದ್ಯಾರ್ಥಿ ಪ್ರಾಯೋಗಿಕ ಜ್ಞಾನ ಪಡೆಯಬಲ್ಲ. ಎನ್ಎಸ್ಎಸ್ ಆ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಶಿಕ್ಷಣವೆಂಬುದನ್ನು ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿಸದೆ ಬಾಹ್ಯ ಪ್ರಪಂಚವನ್ನು ಪರಿಚಯಿಸುವುದರ ಜೊತೆಗೆ, ವ್ಯಕ್ತಿತ್ವ ವಿಕಸನ, ಜ್ಞಾನ ಮತ್ತು ಕೌಶಲ್ಯವನ್ನು ತಿಳಿಸುವಂತಾಗಬೇಕು. ಇದು ಎನ್‌ಎಸ್‌ಎಸ್‌ನಲ್ಲಿ ಸಾಧ್ಯವಿದೆ." ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ಚಂದ್ರ ಎಸ್. ನುಡಿದರು.


ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಡಾ. ಕೆ.ಎಸ್ ಲಕ್ಷ್ಮಿನಾರಾಯಣ ಸ್ವಾಗತಿಸಿ, ದೀಪಾ ಆರ್.ಪಿ ವಂದಿಸಿದರು. ಸ್ವಯಂಸೇವಕಿಯರಾದ ಜಯಶ್ರೀ ಅತಿಥಿ ಉಪನ್ಯಾಸಕರನ್ನು ಪರಿಚಯಿಸಿ ವಸುಮತಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಎನ್‌ಎಸ್‌ಎಸ್ ಹಿರಿಯ ಯೋಜನಾಧಿಕಾರಿಗಳು, ಸ್ವಯಂಸೇವಕರು, ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post