||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೆಫೇನ್ ಎಂಬ ಮಿನಿ ಮಾದಕ ವಸ್ತು

ಕೆಫೇನ್ ಎಂಬ ಮಿನಿ ಮಾದಕ ವಸ್ತುಕೆಫೇನ್ ಎಂಬುದು ಕ್ಷಾರೀಯ ಗುಣವುಳ್ಳ ರಾಸಾಯನಿಕವಾಗಿದ್ದು, ಕಾಫಿ ಮತ್ತು ಟೀ ಗಿಡಗಳಲ್ಲಿ ಕಂಡು ಬರುತ್ತದೆ. ಕೇಂದ್ರೀಯ ನರಮಂಡಲವನ್ನು ಉತ್ತೇಜಿಸುವ ಗುಣ ಹೊಂದಿರುವ ಈ ರಾಸಾಯನಿಕಕ್ಕೆ ಜಗತ್ತಿನ ಬಹುತೇಕ ಮಂದಿ ದಾಸರಾಗಿದ್ದಾರೆ ಎಂದರೂ ಅತಿಶಯೋಕ್ತಿಯಾಗಲಾರದು. ಬೆಳಗಾಗೆದ್ದು ಒಂದು ಲೋಟ ಕಾಫಿ ಅಥವಾ ಟೀ ಕುಡಿಯದಿದ್ದಲ್ಲಿ ಏನೋ ಕಳೆದುಕೊಂಡ ಭಾವನೆ ಕೆಲವರಿಗಾದರೆ ಮತ್ತೆ ಕೆಲವರಿಗೆ ತಲೆನೋವೇ ಆರಂಭವಾಗಿ ಬಿಡುತ್ತದೆ. ಫ್ರೆಂಚ್ ಮೂಲ ಶಬ್ದ ಕೆಫೆ ಎಂಬ ಶಬ್ದಕ್ಕೆ ಕಾಫಿ ಎಂಬ ಅರ್ಥವಿದ್ದು ಮುಂದೇ ಕೆಫೇನ್ ಆಗಿ ಜಗತ್ ಪ್ರಸಿದ್ಧವಾಗಿದೆ. ಆಕ್ಸ್‌ಫರ್ಡ್ ನಿಘಂಟಿನಲ್ಲಿ ಕೆಫೇನ್ ಎಂಬ ಶಬ್ದಕ್ಕೆ ದೇಹವನ್ನು ಉತ್ತೇಜಿಸುವ ವಸ್ತು ಮತ್ತು ವ್ಯಕ್ತಿಗಳನ್ನು ಮತ್ತಷ್ಟು ಕ್ರಿಯಾಶೀಲವಾಗಿಸುವ ರಾಸಾಯನಿಕ ವಸ್ತು ಎಂದು ವಿವರಣೆ ನೀಡಲಾಗಿದೆ. 


ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಾಗುವ ಮಿನಿ ಮಾದಕ ವಸ್ತು ಎಂದರೆ ಕೆಫೇನ್ ಇತರ ಮಾದಕ ವಸ್ತುಗಳಿರುವ ನಿರ್ಬಂಧ ಈ ಕೆಫೇನ್‍ಗೆ ಇರುವುದಿಲ್ಲ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ. ಕೇಂದ್ರಿಯ ನರಮಂಡಲದಲ್ಲಿರುವ ರಾಸಾಯನಿಕ ಅಡೆನೋಸಿನ್ ಎಂಬ ವಸ್ತು ನಮ್ಮನ್ನು ಹೆಚ್ಚು ಮತ್ತು ಬರುವಂತೆ ಮಾಡುತ್ತದೆ. ಈ ಕೆಫೇನ್ ಅಡೆನೋಸಿನ್‍ನ ಕಾರ್ಯಕ್ಷಮತೆಗೆ ಅಡ್ಡಿಪಡಿಸಿ, ನರಮಂಡಲ ಮತ್ತಷ್ಟು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ. ಆದರೆ ಈ ಕೆಲಸ ತಾತ್ಕಾಲಿಕವಾಗಿದ್ದು ಕೆಲವೊಂದು ಗಂಟೆಗಳ ಕಾಲ ಮಾತ್ರ ಇರುತ್ತದೆ. ಈ ಕಾರಣದಿಂದಲೇ ನಮಗೆ ಆಯಾಸವಾಗಿ, ನಿದ್ರೆ ಬಂದಾಗ ಅಥವಾ ಮನಸ್ಸು ಉದಾಸೀನತೆಯಿಂದ ಅಥವಾ ಖಿನ್ನತೆ ಉಂಟಾದಾಗ ಕೆಫೇನ್‍ಯುಕ್ತ ಪಾನೀಯ ಸೇವಿಸಲು ಮನಸ್ಸು ಬಯಸುತ್ತದೆ. ಅಲ್ಲದೆ ಕೇಂದ್ರಿಯ ನರಮಂಡಲ ಹೊರತಾಗಿ, ಸ್ವಯಂ ನಿಯಂತ್ರಿತ ನರಮಂಡಲದ ಮೇಲೂ ಪರಿಣಾಮ ಬೀರಿ ವ್ಯಕ್ತಿ ಉಲ್ಲಸಿತರಾಗುವಂತೆ ಮಾಡುತ್ತದೆ.  


ಎಷ್ಟು ಕೆಫೇನ್ ಸುರಕ್ಷಿತ?

ಒಬ್ಬ ವ್ಯಕ್ತಿ ದಿನವೊಂದಕ್ಕೆ 500mgನಷ್ಟು ಕೆಫೇನ್‍ನ್ನು ಯಾವುದೇ ತೊಂದರೆ ಇಲ್ಲದೆ ಸೇವಿಸಬಹುದು. ಒಂದು ಕಪ್ ಕಾಫಿನಲ್ಲಿ ಸುಮಾರು 80ರಿಂದ 175mgನಷ್ಟು ಕೆಫೇನ್ ಇರುತ್ತದೆ. ಕಾಫಿಯ ಗುಣಮಟ್ಟ ಮತ್ತು ಕಾಫಿ ಮಾಡುವ ವಿಧಾನ, ಹಾಲಿನ ಬಳಕೆ, ಕಾಫಿಯನ್ನು ಮಾಡಲು ಬಳಸಿದ ಬೀಜಗಳ ಗುಣಮಟ್ಟವನ್ನು ಆಧರಿಸಿ ಒಂದು ಕಪ್‍ನಲ್ಲಿ ಕೆಫೇನ್ ಪ್ರಮಾಣವನ್ನು 80ರಿಂದ 175 mg ಎಂದು ವಿಂಗಡಿಸಲಾಗಿದೆ. ಈ ನಿಟ್ಟಿನಲ್ಲಿ ಒಬ್ಬ ವ್ಯಕ್ತಿ ದಿನವೊಂದಕ್ಕೆ 5 ರಿಂದ 10 ಕಪ್ ಕಾಫಿ ಅಥವಾ ಇನ್ನಾವುದೇ ಕೆಫೇನ್‍ಯುಕ್ತ ಪಾನೀಯ ಸೇವನೆ ಮಾಡಬಹುದು. ಅಮೇರಿಕಾದ ಆಹಾರ ಮತ್ತು ಔಷಧಿ ಇಲಾಖೆ ದಿನವೊಂದಕ್ಕೆ 10 ಗ್ರಾಂ ಕೆಫೇನ್ ಮಾರಾಣಾಂತಿಕ ಎಂದು ಶಿಫಾರಸು ಮಾಡಿದೆ. 100 ಗ್ರಾಂ ಎಂದರೆ ಸುಮಾರು 80ರಿಂದ 100 ಕಪ್‍ಗಳಷ್ಟು ಕಾಫಿ ದಿನವೊಂದಕ್ಕೆ ಸೇವನೆ ಮಾರಣಾಂತಿಕ ಎಂದರ್ಥ.


ಆದರೆ ಅಷ್ಟು ಕಾಫಿ ಅಥವಾ ಚಹಾ ಸೇವನೆ ದಿನವೊಂದಕ್ಕೆ ಮಾಡುವುದು ಕಷ್ಟ ಸಾಧ್ಯ. ಅದೇನೇ ಇರಲಿ ಅಗತ್ಯಕ್ಕನ್ನುಗುಣವಾಗಿ, ಸನ್ನಿವೇಶ ಮತ್ತು ವಾತಾವರಣಕ್ಕೆ ಅನುಗುಣವಾಗಿ 5ರಿಂದ 10 ಕಫ್ ಕಾಫಿ ಅಥವಾ ಟೀ ಆರೋಗ್ಯಕ್ಕೆ ಮಾರಕವಲ್ಲ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಆದರೆ ಗರ್ಭಿಣಿಯರು ದಿನವೊಂದರಲ್ಲಿ 200 ರಿಂದ 300 ಮಿಲಿ ಗ್ರಾಂ ಅಂದರೆ 2ರಿಂದ 3 ಕಫ್ ಕಾಫಿಗಿಂತ ಜಾಸ್ತಿ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ವಿಶ್ವ ಸಂಸ್ಥೆಯ ವೈಜ್ಞಾನಿಕ ವರದಿ ತಿಳಿಸಿದೆ. ಕೇಫೇನ್ ಕಾಫಿ, ಟೀ, ಕೋಲಾ ಪಾನೀಯಗಳಲ್ಲಿ ಹೇರಳವಾಗಿರುವುದರಿಂದ, ಗರ್ಭಿಣಿಯರು ಕೆಫೇನ್‍ಯುಕ್ತ ಪಾನೀಯಗಳ ಬಳಕೆ ದಿನವೊಂದಕ್ಕೆ 2ರಿಂದ 3 ಕಪ್‍ಗೆ ಸೀಮಿತಗೊಳಿಸಬೇಕು ಎಂದು ಎಚ್ಚರಿಕೆ ನೀಡಿದೆ.
ಕೆಫೇನ್‍ನ ಅಡ್ಡ ಪರಿಣಾಮಗಳು:

ಕೆಫೇನ್ ಸೇವನೆ ಮನಸ್ಸಿಗೆ ಮುದ ನೀಡುವುದೇನೋ ನಿಜ. ಕೆಫೇನ್‍ನ ಸ್ವಾದ, ಸುವಾಸನೆ ಕೂಡಾ ಮನಸ್ಸಿಗೆ ಆಹ್ಲಾದಕರ ಕೆಪೇನ್ ದೇಹಕ್ಕೆ ಸೇರಿದೊಡನೆಯೇ ಚೈತನ್ಯದಾಯಕ ಭಾವನೆ ನಮ್ಮಲ್ಲಿ ಮೂಡುವುದು ಸಹಜ. ಕೆಫೇನ್ ಸುಲಭವಾಗಿ ನೀರಿನಲ್ಲಿ ಕರಗುವುದರಿಂದ ನಾವು ಸೇವಿಸಿದ ಕೆಪೇನ್ ಹೊಟ್ಟೆಯ ಮೂಲಕ ನೇರವಾಗಿ ರಕ್ತಕ್ಕೆ ಸೇರಿ, ಮೆದುಳು ಲಿವರ್, (ಯಕೃತ್) ಜೀವಕೋಶಗಳಿಗೆ ಸರಾಗವಾಗಿ ತಲುಪುತ್ತದೆ. ಹೀಗೆ ದೇಹ ಸೇರಿದ ಕೆಫೇನ್ ದೇಹದೊಳಗೆ ಹಲವಾರು ದಿನಗಳ ವರೆಗೆ ರಕ್ತದಲ್ಲಿರುತ್ತದೆ. ಹಿತಮಿತವಾಗಿ ಕೆಪೇನ್‍ಯುಕ್ತ ಪಾನೀಯ ಸೇವನೆ ದೇಹದ ಆರೋಗ್ಯಕ್ಕೆ ಹಾನಿ ಮಾಡಲಾರದು. ಆದರೆ ಅತಿಯಾದ ಸೇವನೆ ಖಂಡಿತವಾಗಿಯೂ ಸಹ್ಯವಲ್ಲ. 


ಅತಿಯಾದ ಕೆಫೇನ್ ರಕ್ತದಲ್ಲಿ ಸೇರಿದರೆ, ಹೃದಯದ ಬಡಿತ ಜೋರಾಗಬಹುದು, ವಾಂತಿ, ವಾಕರಿಕೆ, ಅತಿಯಾದ ಮೂತ್ರ, ಉದ್ವೇಗ, ಒತ್ತಡ, ನಡುಕ, ನಿದ್ರಾಹೀನತೆ ಖಿನ್ನತೆ ಮತ್ತು ಚಡಪಡಿಕೆ ಕಾಣಿಸಿಕೊಳ್ಳುತ್ತದೆ. ಕೆಫೇನ್ ರಾಸಾಯನಿಕ ತನ್ನ ಜೊತೆ ನೀರನ್ನೂ ಸೆಳೆಯುವುದರಿಂದ ಅತಿಯಾದ ಮೂತ್ರ ಸೋರುವಂತೆ ಮಾಡಿ ದೇಹಕ್ಕೆ ನಿರ್ಜಲೀಕರಣವಾಗುವಂತೆ ಮಾಡುತ್ತದೆ. ಕೆಫೇನ್‍ಯುಕ್ತ ಪಾನೀಯ ಸೇವಿಸುವಾಗ ಜಾಸ್ತಿ ನೀರಿನ ಸೇವನೆ ಅತೀ ಅಗತ್ಯ. ಅತಿಯಾಗಿ ಕೆಫೇನ್‍ಯುಕ್ತ ಪಾನೀಯಗಳಾದ ಕೋಲಾ, ಎನರ್ಜಿ ಡ್ರಿಂಕ್, ಇತ್ಯಾದಿ ಸೇವಿಸಿ ಅತಿಯಾದ ದೈಹಿಕ ಚಟುವಟಿಕೆ ಮಾಡಿ ಕಡಮೆ ನೀರು ಸೇವಿಸಿದಲ್ಲಿ ನಿರ್ಜಲೀಕರಣ ಕಟ್ಟಿಟ್ಟ ಬುತ್ತಿ. ಈ ಕಾರಣಕ್ಕೆ ಬೇಸಗೆಯಲ್ಲಿ ಅತಿಯಾದ ಕೆಫೇನ್‍ಯುಕ್ತ ಸೇವನೆ ಒಳ್ಳೆಯದಲ್ಲ. ಒಂದು ಕ್ಷಣ ತಾತ್ಕಾಲಿಕವಾಗಿ ಬಾಯಾರಿಕೆ ನೀಗಿಸಿದರು ದೇಹದಲ್ಲಿನ ನೀರನ್ನು ಇಂಗಿಸಿ, ಮತ್ತಷ್ಟು ಬಾಯಾರಿಕೆಯಾಗುವಂತೆ ಮಾಡುವ ತಾಕತ್ತು ಕೆಫೇನ್‍ಗೆ ಇದೆ.  


ಕೆಫೇನ್‍ನ ಉಪಯೋಗ ಏನು?

1. ಮೈಗ್ರೇನ್ ತಲೆನೋವು ಇರುವವರಿಗೆ ನೋವು ನಿವಾರಕಗಳ ಜೊತೆ ಕೆಫೇನ್ ಸೇವನೆಯಿಂದ ನೋವು ಶಮನವಾಗುತ್ತದೆ.

2. ಮೆದುಳಿನ ಉತ್ತೇಜನಕ್ಕೆ ಮತ್ತು ದೇಹವನ್ನು ಯಾವಾಗಲೂ ಚುರುಕಾಗಿಡಲು ಕೆಫೇನ್ ಬಳಸುತ್ತಾರೆ. ಕೆಫೇನ್ ಮಾತ್ರ ಅಥವಾ ಗ್ಲೂಕೋಸ್ ಜೊತೆಗೆ ಕೆಫೇನ್ ಸೇರಿಸಿ ಎನರ್ಜಿ ಡ್ರಿಂಕ್‍ನ ರೂಪದಲ್ಲಿ ಬಳಸಲಾಗುತ್ತದೆ. 

3. ದಿನವೊಂದಕ್ಕೆ 400 ರಿಂದ 600 ಮಿಲಿಗ್ರಾಂ ಕೆಫೇನ್ ಸೇವನೆಯಿಂದ ಪಿತ್ತಕೋಶದಲ್ಲಿ ಕಲ್ಲಾಗುವುದನ್ನು ತಡೆಯುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

4. ಅಸ್ತಮಾ ರೋಗಿಗಳಲ್ಲಿ, ಕೆಫೇನ್‍ಯುಕ್ತ ಪಾನೀಯ ಸೇವನೆಯಿಂದ ಶ್ವಾಸಕೋಶಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.

5. ನಿಯಮಿತವಾಗಿ ಕೆಫೇನ್‍ಯುಕ್ತ ಪಾನೀಯ ಸೇವನೆಯಿಂದ ಮಧುಮೇಹ (Type-II) ರೋಗದ ಸಾಧ್ಯತೆ ಕಡಮೆಯಾಗುತ್ತದೆ ಎಂದು ತಿಳಿದು ಬಂದಿದೆ.  

6. ನಿಯಮಿತವಾಗಿ ನಿಗದಿತ ಪ್ರಮಾಣದ ಕೇಫೇನ್ ಸೇವನೆಯಿಂದ ನೆನಪು ಶಕ್ತಿ ಜಾಸ್ತಿಯಾಗುತ್ತದೆ. ಮೆದುಳಿನ ಕಾರ್ಯಕ್ಷಮತೆ ವೃದ್ಧಿಸುತ್ತದೆ, ನೋವು ನಿವಾರಣೆಯಾಗುತ್ತದೆ ಮತ್ತು ಪಾರ್ಕಿನ್‍ಸನ್ಸ್ ಖಾಯಿಲೆಯ ಸಾಧ್ಯತೆ ಕಡಮೆಯಾಗುತ್ತದೆ.

7. ವಯಸ್ಕರಲ್ಲಿ ಕಡಮೆ ಒತ್ತಡದ ತೊಂದರೆ ಇರುವವರಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುವ ಸಾಮರ್ಥ್ಯ ಕೇಫೇನ್ ಪಾನೀಯಗಳಿಗೆ ಇದೆ.

8. ಅರಿವಳಿಕೆ ನೀಡಿ ಸರ್ಜರಿ ಮಾಡಿದ ಬಳಿಕ, ತಲೆನೋವು ಬರದಂತೆ ಮಾಡಲು ಕೇಪೇನ್‍ಯುಕ್ತ ಪಾನೀಯ ಬಹಳ ಉಪಯುಕ್ತ ಎಂದು ತಿಳಿದು ಬಂದಿದೆ. 

9. ಅತ್ಲೀಟ್‍ಗಳ ದೈಹಿಕ ಕ್ಷಮತೆ ಹೆಚ್ಚಿಸಲು, ನಿಯಮಿತವಾಗಿ 500ರಿಂದ 600 mg ಕೆಫೇನ್ ದಿನವೊಂದಕ್ಕೆ ಸೇವಿಸುತ್ತಾರೆ.


ಕೊನೆಮಾತು: 

ಕೇಫೇನ್‍ಯುಕ್ತ ಪಾನೀಯ ಖಂಡಿತವಾಗಿಯೂ ದೇಹಕ್ಕೆ ಮನಸ್ಸಿಗೆ ಮುದ ನೀಡುವ ಮಾದಕತೆ ಹೊಂದಿದೆ. ದಿನವೊಂದರ 400 mg ಕೆಫೇನ್, ವಯಸ್ಕರಲ್ಲಿ ದೇಹದ ಮತ್ತು ಮನಸ್ಸಿನ ಆರೋಗ್ಯಕ್ಕೆ ಉಪಯುಕ್ತ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. 4 ಕಪ್ ಕಾಫಿ, ಟೀ ಅಥವಾ ಹತ್ತು ಕ್ಯಾನ್‍ಗಳಷ್ಟು ಕೋಲಾ ಅಥವಾ ಎರಡು ಎನರ್ಜಿ ಡ್ರಿಂಕ್ ದೇಹಕ್ಕೆ ಅವಶ್ಯವಾದ 400 ಮಿಲಿ ಗ್ರಾಂ ಕೆಫೇನ್ ನೀಡಬಲ್ಲುದು. ಮಕ್ಕಳಲ್ಲಿ ಅತಿಯಾದ ಕೆಫೇನ್ ಸೇವನೆ ಒಳ್ಳೆಯದಲ್ಲ. ಯಾವುದೇ ಪೌಷ್ಠಿಕಾಂಶ ಹೊಂದಿಲ್ಲದ ಕೆಫೇನ್ ನಮ್ಮ ಆಹಾರದಲ್ಲಿ ಅನಗತ್ಯ. ಆದರೆ ತಾತ್ಕಾಲಿಕವಾಗಿ ಮೆದುಳನ್ನು ಉತ್ತೇಜಿಸುವುದರಿಂದ ಸನ್ನಿವೇಶ ಮತ್ತು ವಾತಾವರಣ ಅನುಗುಣವಾಗಿ ಮಾನಸಿಕ ನೆಮ್ಮದಿಗೆ ಮತ್ತು ಉನ್ವಾದಕ್ಕೆ ಹಿತಮಿತವಾಗಿ ಕೆಫೇನ್ ಪಾನೀಯ ಸೇವನೆ ಉತ್ತಮ ಎಂದು ಸಾಬೀತಾಗಿರುವುದರಿಂದ ಸೇವಿಸಬಹುದು ಎಂದು ಎಲ್ಲರ ಸಮ್ಮತದ ಅನಿಸಿಕೆ. ಅತಿಯಾದರೆ ಅಮೃತವೂ ವಿಷವಾಗುವುದರಿಂದ ಹಿತಮಿತ ಸೇವನೆ ಖಂಡಿತವಾಗಿಯೂ ಉತ್ತಮ ಎಂಬುದೇ ತಜ್ಞರ ಅಭಿಮತ.


-ಡಾ|| ಮುರಲೀ ಮೋಹನ್ ಚೂಂತಾರು 

ಸುರಕ್ಷಾದಂತ ಚಿಕಿತ್ಸಾಲಯ

ಹೊಸಂಗಡಿ – 671 323

ಮೊ : 09845135787

(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post