||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂತರ್ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಪ್ರಬಂಧ ಆಯ್ಕೆ

ಅಂತರ್ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಪ್ರಬಂಧ ಆಯ್ಕೆಕಾಸರಗೋಡು: ಗ್ರೀಸ್ ದೇಶದ ಅಥೆನ್ಸ್ ನಲ್ಲಿ 2021 ನವೆಂಬರ್ 6-7ರಂದು ನಡೆಯಲಿರುವ ಅಂತರ್ ರಾಷ್ಟ್ರೀಯ ಮಟ್ಟದ ರಂಗಭೂಮಿ ಸಮಾವೇಶದ ವಿಚಾರ ಸಂಕಿರಣಕ್ಕೆ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಬಿ. ಎಂ. ಹೊಸಂಗಡಿ ಅವರ 'ಚಾಲೆಂಜಸ್ ಆಫ್ ಅಡಾಪ್ಟೇಷನ್: ಅಜಾಕ್ಸ್ ಅಸ್ ಅಶ್ವತ್ಥಾಮನ್' (ಅಶ್ವತ್ಥಾಮನ್ ಆಗಿ ಅಜಾಕ್ಸ್: ರೂಪಾಂತರದ ಸವಾಲುಗಳು) ಎಂಬ ಸಂಶೋಧನಾ ಪ್ರಬಂಧ ಆಯ್ಕೆಯಾಗಿದೆ.


ಅಥೆನ್ಸ್ ಅಪಿಥೆರಸ್ ಫೆಸ್ಟಿವಲ್‌ನ ಭಾಗವಾಗಿ ಇರುವ ವ್ಯಾಲ್ಯೂಸ್ ಅಕ್ರಾಸ್ ಸ್ಪೇಸ್ ಅಂಡ್ ಟೈಮ್ (ವಿ.ಎ.ಎಸ್. ಟಿ.) ಎಂಬ ಯೋಜನೆಯಡಿಯ ಈ ವಿಚಾರಸಂಕಿರಣವು ಅಥೆನ್ಸ್ ನ ಮರೆಸಲೆಯೋ ವಿದ್ಯಾಲಯದಲ್ಲಿ ನಡೆಯಲಿದೆ.


ನ್ಯಾಷನಲ್ ಅಂಡ್ ಕಪೋಡಿಸ್ಟ್ರಿಯನ್ ಯೂನಿವರ್ಸಿಟಿ ಆಫ್ ಅಥೆನ್ಸ್, ಅರಿಸ್ಟಾಟಲ್ ಯೂನಿವರ್ಸಿಟಿ ಆಫ್ ಥೆಸ್ಸಲೊನಿಕಿ- ಇವು ಆಯೋಜಿಸುತ್ತಿರುವ ವಿಚಾರ ಸಂಕಿರಣವನ್ನು ಗ್ರೀಸ್ ದೇಶದ ಸಂಸ್ಕೃತಿ ಮತ್ತು ಕ್ರೀಡಾ ಸಚಿವಾಲಯ, ಗ್ರೀಸ್ ನ ರಾಷ್ಟ್ರೀಯ ಬ್ಯಾಂಕ್ ಇಯಾನಿಕ್ ಪನೇಜಗಳು ಪ್ರಾಯೋಜಿಸುತ್ತಿವೆ. ಯುರೋಪಿಯನ್ ಯೂನಿಯನ್ ನ ಸಹ ಪ್ರಾಯೋಜಕತ್ವವೂ ಇದೆ.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post