ಮಾನಸಿಕ ಸ್ವಾಸ್ಥ್ಯ ಆರೇೂಗ್ಯ ಪ್ರಾಧಿಕಾರಕ್ಕೆ ಮುಂದಾದ ರಾಜ್ಯ ಸರ್ಕಾರ ಅನ್ನುವ ಬೇಳೂರು ರಾಘವ ಶೆಟ್ಟಿ ಅವರ ಅಭಿಪ್ರಾಯಾತ್ಮಕ ಲೇಖನ ಓದಿದ ಮೇಲೆ ಈ ಪ್ರಾಧಿಕಾರದ ಅಗತ್ಯತೆ ತುತಾ೯ಗಿ ಕರ್ನಾಟಕಕ್ಕೆ ಅನಿವಾರ್ಯ ಅನ್ನುವುದು ಇತ್ತೀಚಿನ ನಮ್ಮ ವಿದ್ಯಮಾನಗಳಿಂದ ಹಾಗೂ ರಾಜಕಾರಣಿಗಳ ಮಾತು-ಕತೆಗಳಿಂದ ಸ್ವಷ್ಟವಾಗಿ ಗೇೂಚರಿಸುತ್ತಿದೆ. ಇದರ ಮೊದಲ ಫಲಾನುಭವಿಗಳೇ ನಮ್ಮ ರಾಜಕಾರಣಿಗಳು ಅನ್ನುವುದಕ್ಕೆ ಇನ್ನಷ್ಟು ಪುರಾವೆಗಳು ಮಾನಸಿಕ ಅಸತೇೂಲನದ ಘಟನೆಗಳು ಪ್ರತಿ ನಿತ್ಯ ವರದಿಯಾಗುತ್ತಿರುವುದು ಅತ್ಯಂತ ಬೇಸರದ ಸುದ್ದಿಗಳು.
ರಾಷ್ಟ್ರೀಯ ಪಕ್ಷದ ನಾಯಕರೊಬ್ಬರು ತಮ್ಮ ಪಕ್ಷದ ಜೀವಂತ ನಾಯಕರನ್ನೇ "ಹುತಾತ್ಮ" ರಾಗಿದ್ದಾರೆ ಅಂದು ಘೇೂಷಿಸುವುದು; 75ರ ಸ್ವಾತಂತ್ರ್ಯವನ್ನು 25 ಅನ್ನುವುದು; ಸ್ವಾತಂತ್ರ್ಯಕ್ಕೆ ಗಣರಾಜ್ಯೋತ್ಸವ ಅನ್ನುವುದು ತಮಗೆ ಅನ್ನ ನೀರು ನೀಡಿದ ಪಕ್ಷವನ್ನೇ ಸೇೂಲಿಸಿ ಅನ್ನುವುದು; ತಮ್ಮ ಪಕ್ಷದ ಪ್ರಧಾನಿಯೊಬ್ಬರು ತಂದ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯನ್ನು ತಮ್ಮ ಪಕ್ಷದ ಕಿರಿಯ ನಾಯಕರು ಸಂವಿಧಾನದ ತಿದ್ದುಪಡಿ ತಂದಿದ್ದಾರೆ ಅನ್ನುವುದು. ಆಡಳಿತ ಪಕ್ಷದ ಸಚಿವರೇ ನಾಡ ಕೇೂವಿಯಲ್ಲಿ ಸಾವ೯ಜನಿಕ ಸಭೆಯಲ್ಲಿ ಗುಂಡು ಹಾರಿಸುವುದು ಸಂಪ್ರದಾಯ ಅನ್ನುವುದು. ಜೀವಿತರ ಮನೆಗೆ ಹೇೂಗಿ ನೀವು ಸತ್ತಿದ್ದೀರಿ ಅನ್ನುವುದು, ಒಂದು ದಿನ ಈ ಪಕ್ಷ ಮಾರನೇ ದಿನ ಆ ಪಕ್ಷ; ಈ ಎಲ್ಲಾ ಪ್ರಕರಣಗಳನ್ನು ನೇೂಡುವಾಗ ಕನಾ೯ಟಕ ರಾಜ್ಯದಲ್ಲಿ ಮಾನಸಿಕ ಅಧ್ಯಯನದ ಪ್ರಾಧಿಕಾರದ ತುತು೯ ಅಗತ್ಯವಿದೆ ಅನ್ನುವುದಕ್ಕೆ ಇನ್ನೇನು ಸಾಕ್ಷಿ ಬೇಕು?
ಆದರೆ ಮಾನಸಿಕವಾಗಿ ಸ್ವಸ್ಥರಾಗಿರುವ ನಮ್ಮೆಲ್ಲರ ಬೇಡಿಕೆ ಒಂದೇ ಈ ಮಾನಸಿಕ ಆರೇೂಗ್ಯದ ಪ್ರಾಧಿಕಾರಕ್ಕೆ ಮತ್ತೆ ಇದೇ ರಾಜಕಾರಣಿಗಳನ್ನು ನೇಮಿಸ ಬೇಡಿ. ರಾಜಕೀಯದಿಂದ ಹೊರಗೆ ಇದ್ದು ಮಾನಸಿಕವಾಗಿ ಸ್ವಸ್ಥರಾಗಿರುವವರು ಸಾಕಷ್ಟು ಮಂದಿ ಇದ್ದಾರೆ. ಅವರನ್ನೆ ಈ ಮಾನಸಿಕ ಸ್ವಾಸ್ಥ್ಯ ಪ್ರಾಧಿಕಾರಕ್ಕೆ ಅಧ್ಯಕ್ಷರು, ಸದಸ್ಯರಾಗಿ ನೇಮಿಸಿ. ಮಾತ್ರವಲ್ಲ ಇವರಿಗೆ ಸಚಿವ ಸ್ಥಾನಮಾನ ನೀಡುವ ಅಗತ್ಯವೂ ಇಲ್ಲ. ಇದೂ ಕುಾಡಾ ಮುಂದೆ ಇದೇ ಸಿಂಡ್ರೇೂಮ್‌ಗೇ ಎಳೆಯುವ ಸಾಧ್ಯತೆ ಇದೆ. ಮಾತ್ರವಲ್ಲ ಈ ಕುರಿತಾಗಿ ವಿಶೇಷ ಅಧ್ಯಯನವೂ ನಡೆಯ ಬೇಕಾಗಿದೆ. ಹಾಗಾಗಿ ಕೂಡಲೇ ಈ ಪ್ರಾಧಿಕಾರ ಜನ್ಮತಾಳಲಿ ಅನ್ನುವುದು ನಮ್ಮೆಲ್ಲರ ಒಕ್ಕೇೂಲರ ಮನವಿ ಕೂಡಾ.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ