‘ಸಮತೋಲನ ಮನಸ್ಥಿತಿಯಿಂದ ವ್ಯಕ್ತಿತ್ವಕ್ಕೆ ಸಮಗ್ರತೆ’

Upayuktha
0

ಉಜಿರೆ: ವೈಯಕ್ತಿಕ ಮತ್ತು ವೃತ್ತಿಪರ ಬದುಕಿನ ವಿವಿಧ ಸಂದರ್ಭಗಳನ್ನು ಸಮತೋಲನ ಮನಸ್ಥಿತಿಯೊಂದಿಗೆ ನಿರ್ವಹಿಸುವ ಪ್ರಜ್ಞೆಯಿದ್ದಾಗ ವಿನೂತನ ಸಾಧನೆ ಸಾಧ್ಯವಾಗುತ್ತದೆ ಎಂದು ಕಾವೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಲೂಯಿಸ್ ಮನೋಜ್ ಅಂಬ್ರೋಸಿ ಅಭಿಪ್ರಾಯಪಟ್ಟರು.


ಉಜಿರೆ ಎಸ್.ಡಿ.ಎಂ ಕಾಲೇಜಿನ ರಸಾಯನಶಾಸ್ತ್ರ ವಿಭಾಗವು ಗೂಗಲ್ ಮೀಟ್ ಮೂಲಕ ಆಯೋಜಿಸಿದ್ದ ವೃತ್ತಿಪರ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ‘ಸ್ಪಷ್ಟತೆ, ನಿರ್ದಿಷ್ಟ ಗುರಿಕೇಂದ್ರಿತ ಮುನ್ನಡೆ ಮತ್ತು ಯಶಸ್ಸು’ ಕುರಿತು ಅವರು ಮಾತನಾಡಿದರು.


ಮಾನಸಿಕ ಸಮತೋಲನವು ಎಲ್ಲ ಬಗೆಯ ಸಂದಿಗ್ಧ ಪರಿಸ್ಥಿತಿಗಳನ್ನು ನಿರ್ವಹಿಸುವ ಸಂಯಮವನ್ನು ರೂಢಿಸುತ್ತದೆ. ವೈಫಲ್ಯದ ಸಂದರ್ಭವನ್ನು ಎದುರುಗೊಳ್ಳುವ ಅಪಾಯದಿಂದ ಪಾರು ಮಾಡುತ್ತದೆ. ಸಕಾರಾತ್ಮಕ ಆಲೋಚನೆಗೆ ಸಹಾಯಕವಾಗುತ್ತದೆ ಎಂದರು.


ವೈಯಕ್ತಿಕ ಅಥವಾ ವೃತ್ತಿಪರ ಉದ್ದೇಶದ ಯಾವುದೇ ಹಂತದಲ್ಲಿ ಶಾಂತ, ಸಮಯೋಚಿತ ಮತ್ತು ಸಮತೋಲನದ ಮನಸ್ಸನ್ನು ಸಾಧ್ಯವಗಿಸಿಕೊಳ್ಳಬೇಕು. ಇಲ್ಲದಿದ್ದರೆ ಗಂಭೀರ ಸಮಸ್ಯೆಗಳು ಎದುರುಗೊಳ್ಳುತ್ತವೆ. ಅವುಗಳನ್ನು ಎದುರಿಸುವುದು ದುಸ್ತರವೆನ್ನಿಸಿಬಿಡುತ್ತದೆ. ಮಾನಸಿಕ ಸಮತೋಲನ ಮತ್ತು ಸಕಾರಾತ್ಮಕ ಆಲೋಚನೆ ಇವೆರಡೂ ವ್ಯಕ್ತಿತ್ವದ ಯಶಸ್ವಿಗೆ ಸಮಗ್ರತೆಯನ್ನು ತಂದುಕೊಡುತ್ತವೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ 65 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಮಹತ್ವದ ಪ್ರೇರಣಾತ್ಮಕ ವೀಡಿಯೋಗಳನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top