ಸವಿರುಚಿ: ಬಾಕಾಹು ಚಪ್ಪೆ ಹೋಳಿಗೆ, ಬಾಕಾಹು ಜೇನು ಕೋಲು

Upayuktha
0



ಬಾಕಾಹು ಚಪ್ಪೆ ಹೋಳಿಗೆ

ಪಾಕ: ನಯನಾ ಹೆಗಡೆ ಉಮ್ಮಚಗಿ


ಬೇಕಾಗುವ ಸಾಮಗ್ರಿಗಳು: ಬಾಕಾಹು- 1 ಕಪ್, ಅಕ್ಕಿ ಹಿಟ್ಟು 3 ಚಮಚ (ಬೇಕಾದರೆ), ಮೊಸರು 1/2 ಕಪ್, ಹಸಿಮೆಣಸು- 2- 3, ಅರಿಶಿನ- ಕಾಲು ಚಮಚ, ಶುಂಠಿ- 1, ಎಣ್ಣೆ, ಕೊತ್ತಂಬರಿ ಸೊಪ್ಪು ಸ್ವಲ್ಪ, ಇಂಗು- ಚಿಟಿಕೆ, ಉಪ್ಪು- ರುಚಿಗೆ, ನೀರು


ಮಾಡುವ ವಿಧಾನ: ಬಾಕಾಹು, ಅಕ್ಕಿ ಹಿಟ್ಟು, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಶುಂಠಿ ಪೇಸ್ಟ್, ಎಣ್ಣೆ, ಉಪ್ಪು, ಇಂಗು, ಮೊಸರು, ಅರಿಶಿನ, ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಮಿಶ್ರಮಾಡಿ. ಬಾಳೆ ಎಲೆಗೆ ಎಣ್ಣೆ ಸವರಿ ಹಿಟ್ಟು ಹಾಕಿ ಹರಡಿ ಮೇಲೆ ಮತ್ತೊಂದು ಬಾಳೆ ಮುಚ್ಚಿ. ಕೆಂಡದ ಮೇಲೆ ಅಥವಾ ಕಾವಲಿ ಮೇಲೆ ಎರಡು ಕಡೆಗೆ ಬೇಯಿಸಿ. ಎಣ್ಣೆ, ಉಪ್ಪಿನಕಾಯಿಯೊಂದಿಗೆ ಸವಿಯಿರಿ.



ಬಾಕಾಹು ಜೇನು ಕೋಲು

ಬೇಕಾಗುವ ಸಾಮಗ್ರಿಗಳು: ಬಾಕಾಹು- 1 ಕಪ್, ನೆನೆದ ಅಕ್ಕಿ- 2 ಚಮಚ, ಬೆಲ್ಲ- 2 ಕಪ್, ಕಾಯಿತುರಿ- 1 ಕಪ್, ಸಕ್ಕರೆ- 2 ಚಮಚ, ಎಣ್ಣೆ- ಕರಿಯಲು, ರುಚಿಗೆ ಉಪ್ಪು.


ಮಾಡುವ ವಿಧಾನ:

• ಕಾಯಿತುರಿಯನ್ನು ಬೆಲ್ಲ ಹಾಕಿ ಜಿಗುಟು ಬರುವ ಹಾಗೆ ಕಾಯಿಸಿ.

• ಬೆಲ್ಲ, ಸಕ್ಕರೆ, ಸ್ವಲ್ಪ ನೀರು ಹಾಕಿ ಒಂದು ಎಳೆ ಪಾಕ ಮಾಡಿಕೊಳ್ಳಿ.


• ಬಾಕಾಹು ಹಿಟ್ಟು, ನೆನೆದ ಅಕ್ಕಿ ಹಾಕಿ ನುಣುಪಾಗಿ ರುಬ್ಬಿಕೊಳ್ಳಿ. ನಂತರ ತೆಳ್ಳಗಿನ ದೋಸೆ ಮಾಡಿ ಮೆದುವಾಗಿ ತೆಗೆದು ರಿಬ್ಬನ್ ತರ ಕಟ್ ಮಾಡಿ. ಅದರಲ್ಲಿ ಮೊದಲ ಮಾಡಿದ ಕಾಯಿತುರಿ ಮಿಶ್ರಣ ಹಾಕಿ ಸುರುಳಿ ಸುತ್ತಿ. ಸಣ್ಣ ಉರಿಯಲ್ಲಿ ಕರಿಯಿರಿ.ಅದನ್ನು ಬೆಲ್ಲದ ಪಾಕದಲ್ಲಿ ಅದ್ದಿ ತೆಗೆದು ತುಪ್ಪದ ಜೊತೆ ತಿನ್ನಿ.


- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top