ಸವಿರುಚಿ: ಬಾಕಾಹು ಬಟ್ಟಲ ಕಡುಬು

Upayuktha
0


ಪಾಕ: ಲತಾ ನರೂರು


ಬೇಕಾದ ಸಾಮಗ್ರಿ: ಬಾಕಾಹು ಎರಡು ಲೋಟ, ಮುಕ್ಕಾಲು ಲೋಟ ಬೆಲ್ಲ, ತೆಂಗಿನ ತುರಿ ಅರ್ಧ ಕಪ್, ಬಿಳಿ ಎಳ್ಳು ಎರಡು ಚಮಚ, ಚಿಟಿಕೆ ಏಲಕ್ಕಿ ಪುಡಿ, ಚಿಟಿಕೆ ಉಪ್ಪು, ಮತ್ತು ನೀರು


ಮಾಡುವ ವಿಧಾನ: ಬಾಕಾಹುಗೆ ನೀರು ಬೆಲ್ಲ ಸೇರಿಸಿ ಗಂಟಿಲ್ಲದಂತೆ ಕದಡಿ. ಈ ಮಿಶ್ರಣ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಇರಬೇಕು. ಏಲಕ್ಕಿ ಪುಡಿ, ಚಿಟಿಕೆ ಉಪ್ಪು ಹುರಿದ ಎಳ್ಳು ಸೇರಿಸಿ.


ಒಂದು ಪಾತ್ರೆಯಲ್ಲಿ ಮುಕ್ಕಾಲು ಭಾಗದಷ್ಟು ನೀರು ಹಾಕಿ ಕುದಿಯಲು ಬಿಡಿ. ಒಂದು ಬಟ್ಟಲಿಗೆ ತುಪ್ಪ ಸವರಿ ಕುದಿಯುವ ನೀರಿನ ಪಾತ್ರೆಯ ಮೇಲೆ ಇಟ್ಟು ಒಂದೂವರೆ ಸೌಟು ಬಾಕಾಹು ಮಿಶ್ರಣ ಹಾಕಿ ಸ್ವಲ್ಪ ತೆಂಗಿನ ತುರಿ ಉದುರಿಸಿ ದೋಸೆ ಮುಚ್ಚಳ ಮುಚ್ಚಿ 4 ರಿಂದ 5 ನಿಮಿಷ ಬೇಯಿಸಿದರೆ ಬಟ್ಟಲ ಕಡುಬು ರೆಡಿ. ಇದನ್ನು ಬೇಯಿಸಲು ಎರಡು ಬಟ್ಟಲಿಗೆ ತುಪ್ಪ ಸವರಿ ಇಟ್ಟು ಕೊಂಡರೆ ಒಂದು ಬಟ್ಟಲ ಕಡುಬು ತಣಿಯುವಷ್ಟರಲ್ಲಿ ಇನ್ನೊಂದು ಬೆಂದಿರುತ್ತೆ. 


ವಿ.ಸೂ. ಉಪ್ಪು ಮಾತ್ರ ಚಿಟಿಕೆ ಸಾಕು. ಒಂದು ಲೋಟ ಬಾಕಾಹುಗೆ ಒಂದೂಕಾಲು ಲೋಟ ನೀರು ಅವಶ್ಯ. ತೆಂಗಿನ ತುರಿ ಹಾಕಲು ಇಷ್ಟ ಆಗದೆ ಇದ್ದಲ್ಲಿ ತುರಿ ರುಬ್ಬಿ ಸೋಸಿದ ಹಾಲು ಸೇರಿಸಬಹುದು. ಎರಡು ಲೋಟ ಬಾಕಾಹುಗೆ ಅಂದಾಜು ಎಂಟು ಕಡುಬು ಆಗುತ್ತದೆ.


- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top