ಗಾಂಧೀ ಸೇವಾ ಪ್ರಶಸ್ತಿಗಳಿಗಾಗಿ ಆಯ್ಕೆ ಪ್ರಕ್ರಿಯೆ ಆರಂಭ ಯಾವಾಗ?

Upayuktha
0


ಕರ್ನಾಟಕ ಸರಕಾರ 2014ರಲ್ಲಿ ಸ್ಥಾಪಿಸಿ ಪ್ರತಿ ಗಾಂಧಿ ಜಯಂತಿಯಂದು ನೀಡುತ್ತಿರುವ ಈ ಪ್ರಶಸ್ತಿಗೆ ಗಾಂಧೀ ಚಿಂತಕರಾದ ಎಸ್.ಎನ್.ಸುಬ್ಬರಾವ್, ಹೋ. ಶ್ರೀನಿವಾಸಯ್ಯ, ಚನ್ನಮ್ಮಾ ಹಳ್ಳಿಕೇರಿ, ಹೆಚ್ .ಎಸ್ .ದೊರೆಸ್ವಾಮಿ, ರಂಗಕರ್ಮಿ ಪ್ರಸನ್ನ, ಜಿ.ಎಸ್. ಜಯದೇವ ಈಗಾಗಲೇ ಭಾಜನರಾಗಿರುವುದು ತೃಪ್ತಿದಾಯಕ.


ರಾಜ್ಯ ಸರಕಾರ ನೀಡುತ್ತಿರುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಅರವತ್ತು ಮೀರಿದ ವ್ಯಕ್ತಿಗಳಿಂದ ಮತ್ತು ಇಪ್ಪತೈದು ವರ್ಷಕ್ಕೂ ಹೆಚ್ಚು ಕಾಲ ಗಾಂಧೀ ವಿಚಾರಧಾರೆಯಲ್ಲಿ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳಿಂದ ಅರ್ಜಿ ಹಾಗೂ ನಾಮ ನಿರ್ದೇಶನಗಳನ್ನು ಕಳೆದ ಸೆಪ್ಟೆಂಬರ್‌ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಹ್ವಾನಿಸಿತ್ತು.


ಸರಕಾರಕ್ಕೆ ಅರ್ಹ ವ್ಯಕ್ತಿ ಅಥವಾ ಸಂಸ್ಥೆಯನ್ನು ಶಿಫಾರಸು ಮಾಡುವ ಸಲುವಾಗಿ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತ್ರಿಸದಸ್ಯ ಸಮಿತಿಯೊಂದನ್ನು ನೇಮಿಸಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಈ ಸಮಿತಿಯ ಅವಧಿಯನ್ನು 2020 ಹಾಗೂ 2021 ಈ ಎರಡೂ ವರ್ಷಗಳ ಪ್ರಶಸ್ತಿಗಳಿಗೆ ಆಯ್ಕೆ ಮಾಡುವ ಹೊಣೆ ವಹಿಸಲಾಗಿತ್ತು.


ವಿವಿಧ ಅಕಾಡೆಮಿ ಮತ್ತು ಇಲಾಖೆಗಳು ಇದೀಗ ಪ್ರಶಸ್ತಿ ವಿತರಣೆ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ 2020 ಮತ್ತು 21ಸಾಲಿನ ಗಾಂಧೀ ಸೇವಾ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಬಹುದೇ?


-ಡಾ. ಹೊಸ್ಕೆರೆ.ಎಸ್.ಸುರೇಶ್ (9448027400)

G 4 ಅಕ್ಷಯ ಅಪಾರ್ಟ್ ಮೆಂಟ್ಸ್

ಅಕ್ಷಯನಗರ ಬೇಗೂರು ಪೋಸ್ಟ್

ಬೆಂಗಳೂರು 560114


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top