ಕಲಬುರಗಿ: ಮಾಧವ ಗೋಶಾಲೆಯಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಎಂಎಸ್ಸಿ ವಿದ್ಯಾರ್ಥಿಗಳಿಂದ ಇಂಟರ್ನ್‌ಶಿಪ್‌

Upayuktha
0


ಕಲಬುರಗಿ: ಕಲಬುರಗಿಯ ಶ್ರೀ ಶರಣಬಸವ ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ಎಂ.ಎಸ್ಸಿ ವಿದ್ಯಾರ್ಥಿಗಳು ತಮ್ಮ ಹದಿನೈದು ದಿನಗಳ ಇಂಟರ್ನಶಿಪ್ ಕಾರ್ಯಕ್ರಮವನ್ನು ಗೋ ಕೇಂದ್ರಿತ ವಿಷಯಗಳ ಮೇಲೆ ಮಾಡುತ್ತಿದ್ದು ಇಂದು ಶ್ರೀ ಮಾಧವ ಗೋಶಾಲೆಯಲ್ಲಿ ಈ ಕಾರ್ಯಕ್ರಮದ ಉದ್ಘಾಟನೆಯಾಯಿತು.

ಕಲಬುರಗಿ ಜಿಲ್ಲಾ ಏಡ್ಸ್ ಪ್ರಿವೆನ್ಶನ್ ಸೊಸೈಟಿಯ ಮೇಲ್ವಿಚಾರಕರಾದ ಸೋಮಶೇಖರ ಮಾಲಿಪಾಟೀಲ, ಶರಣಬಸವ ವಿಶ್ವವಿದ್ಯಾಲಯ ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ನಾಗಭೂಷಣ ರೆಡ್ಡಿ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಸಿದ್ಧರಾಮ ಪೂಜಾರಿಯವರು ಉಪಸ್ಥಿತರಿದ್ದರು.


ಇಂದಿನಿಂದ ಹದಿನೈದು ದಿನಗಳ ಕಾಲ ಎರಡು ತಂಡಗಳಲ್ಲಿ ವಿದ್ಯಾರ್ಥಿಗಳು ಶ್ರೀ ಮಾಧವ ಗೋಶಾಲೆಯಲ್ಲಿದ್ದು ಗೋ ಆಧಾರಿತ ಆರ್ಥಿಕತೆ, ಕೃಷಿ, ಆರೋಗ್ಯ, ದೇಸಿ ತಳಿ ಅಭಿವೃದ್ಧಿ ವಿಷಯಗಳ ಕುರಿತು ಅಧ್ಯಯನ ಮಾಡಿ ವಿಶ್ವವಿದ್ಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top