ಇವರು ನಿವೃತ್ತಿ ಒಪ್ಪದ ನಿವೃತ್ತರು! ಕಲ್ಲಡ್ಕದ ಬಳಿಯ ಹಿರಿಯ ಕೃಷಿಕ ಶ್ರೀನಿವಾಸ ಮಕ್ಕಾರ್ ದಂಪತಿಗಳು. (74) ಇವರದು ಕರಾವಳಿ ಕರ್ನಾಟಕದಲ್ಲಿ ಇಂಥ ಪ್ರಥಮ ಯತ್ನ.
ಈ ನಿವೃತ್ತ ನೀರಾವರಿ ಎಂಜಿನಿಯರರಿಗೆ ಆರೆಕ್ರೆ ತೋಟವಿದೆ. ಇಳಿವಯಸ್ಸಿನಲ್ಲೂ ಸುಮ್ಮನೆ ಕೂರಲು ಮನಸ್ಸಿಲ್ಲ. ಕಳೆದ ವರ್ಷ ಹಪ್ಪಳ ಮಾಡತೊಡಗಿದರು. ಇವರು ಮತ್ತು ಪತ್ನಿ ವೈದೇಹಿ ಅವರದೇ ಮುಖ್ಯ ಪಾತ್ರ. ಇದಕ್ಕಾಗಿಯೇ ಡ್ರೈಯರ್ ಮಾಡಿಸಿಕೊಂಡಿದ್ದಾರೆ. ಈ ಬಾರಿ ಹಲಸಿನ ಋತು ಮುಗಿದಾಗ ’ಬಾಕಾಹು’ ತಯಾರಿಯ ಸುದ್ದಿ ಬಿಸಿಯೇರಿತ್ತು. ಆ ಬಗ್ಗೆ ಮನಸ್ಸು ಹರಿಸಿದರು. ಅವರಿವರ ಹತ್ತಿರ ಕೇಳುತ್ತಾ ಕೂರಲಿಲ್ಲ. ಸದ್ದಿಲ್ಲದೆ ಬಾಕಾಹು ತಯಾರಿ ಮಾಡಿಯೇಬಿಟ್ಟರು.
ತೋಟದ ಕಾರ್ಮಿಕರು ಹತ್ತಿರದಲ್ಲೇ ವಾಸವಿದ್ದಾರೆ. "ನೀವು ಹೆಚ್ಚು ದುಡಿಯಬೇಡಿ" ಎಂದು ನಿಕಟವರ್ತಿಗಳು ಹೇಳುತ್ತಿದ್ದಾರೆ. ಹಾಗಾಗಿ ಕಾರ್ಮಿಕರನ್ನೇ ಮುಂದಿಟ್ಟು ಬಾಕಾಹು ಉತ್ಪಾದನೆ. ಡ್ರೈಯರಿನ ಸಾಮರ್ಥ್ಯ ಹೊಂದಿ ಇವರದು ಪರಿಮಿತ ಉತ್ಪಾದನಾ ಸಾಮರ್ಥ್ಯ. ದಿನಕ್ಕೆ ಐದು ಕಿಲೋ
ಬಾಳೆಕಾಯಿ ಹುಡಿ ( ಬಾಕಾಹು) - *ಕಿಲೋಗೆ ರೂ. 200* + ಅಂಚೆ ವೆಚ್ಚ. ವಿವರಗಳಿಗೆ ವಾಟ್ಸಪ್ - *94481 09666*
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key words: Banana Flour, Banana powder, Bakahu, ಬಾಕಾಹು, ಬಾಳೆಕಾಯಿ ಹುಡಿ