ಸವಿರುಚಿ: 'ಮುದ್ದೆ' ಪ್ರಿಯರೇ, ಬದಲಾವಣೆಗಿದೋ ಬಾಕಾಹು ಮುದ್ದೆ

Upayuktha
0

 'ಮುದ್ದೆ' ಪ್ರಿಯರೇ, ಬದಲಾವಣೆಗಾಗಿ ಒಮ್ಮೆ ಸವಿದು ನೋಡಿ ಬಾಕಾಹು ಮುದ್ದೆ

ಪಾಕ: ಜಯಲಕ್ಷ್ಮಿ ಗಣಪತಿ ಹೆಗಡೆ ತುಂಬೆಮನೆ


ಒಂದು ಅಳತೆ ನೀರನ್ನು- ಒಂದು ಲೋಟ ಅಂತ ಇಟ್ಟುಕೊಳ್ಳಿ- ಒಲೆಯ ಮೇಲೆ ಇಡಿ. ಒಂದು ಚಿಟಿಕೆ ಉಪ್ಪು ಸೇರಿಸಿ. ನೀರು ಬಿಸಿ ಬರುತ್ತಿರುವಾಗ ಅದೇ ಅಳತೆಯ (ಒಂದು ಲೋಟ) ಬಾಕಾ ಹುಡಿಯನ್ನು ನಿಧಾನವಾಗಿ ಸೇರಿಸುತ್ತಾ ಸೌಟಿನಿಂದ ಕಲಕುತ್ತಿರಿ.


ನೀರು ಬಿಸಿಯಾದಂತೆ ಹಿಟ್ಟು ಗಟ್ಟಿಯಾಗಿ ಮುದ್ದೆಯಾಗುತ್ತದೆ. ಆಗ ಸ್ವಲ್ಪ ತುಪ್ಪ ಸೇರಿಸಿ ಗಟ್ಟಿಯಾಗಿ ತಿರುವಿ. ಒಲೆಯಿಂದ ಇಳಿಸಿ. ಹಿಟ್ಟು ಕೈಗೆ ಅಂಟಿಕೊಳ್ಳಬಾರದು. ಈಗ ಉಂಡೆ ಮಾಡಿ ಉಗಿಯಲ್ಲಿ ಹತ್ತು ನಿಮಿಷ ಬೇಯಿಸಿ. ರುಚಿಯಾದ ಬಾಕಾಹು ಮುದ್ದೆ ರೆಡಿ. ಬಸ್ಸಾರಿನೊಂದಿಗೆ ಸವಿಯಿರಿ.

(ಪ್ರಯೋಗಕ್ಕೆ ಪ್ರೇರಣೆಯಾದವರು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)


Key Words: Banana Flour, Banana Powder, Banana Flour balls, ಬಾಕಾಹು ಮುದ್ದೆ, ಬಾಳೆಕಾಯಿ ಹುಡಿಯ ಮುದ್ದೆ, ಬಾಕಾಹು ಅಭಿಯಾನ, ಬಾಕಾಹು ತಿನಿಸು,

(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top