1. ಪ್ರಕೃತಿಯ ಮೊದಲ ನಿಯಮ:
ಹೇಗೆ ಗದ್ದೆಯಲ್ಲಿ ಬೀಜ ಹಾಕಿಲ್ಲವೆಂದರೆ ಅಲ್ಲಿ ಹುಲ್ಲು ಕಡ್ಡಿ ಬೆಳೆಯುತ್ತದೆಯೋ ಹಾಗೆ ಬುದ್ದಿಯಲ್ಲಿ ಸಕಾರಾತ್ಮಕ ವಿಚಾರಗಳು ತುಂಬಿಲ್ಲವೆಂದರೆ ನಕಾರಾತ್ಮಕ ವಿಚಾರಗಳು ಆ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ.
2. ಪ್ರಕೃತಿಯ ಎರಡನೇ ನಿಯಮ:
ಯಾರ ಬಳಿ ಏನಿರುತ್ತದೆಯೋ ಅದನ್ನೇ ಇತರರಿಗೆ ನೀಡುತ್ತಾರೆ.
ಸುಖೀ ಸುಖವನ್ನು ಹಂಚುತ್ತಾನೆ.
ದುಃಖೀ ದುಃಖವನ್ನು ಹಂಚುತ್ತಾನೆ.
ಜ್ಞಾನಿ ಜ್ಞಾನವನ್ನು ಹಂಚುತ್ತಾನೆ.
ಭ್ರಮಿತ ಭ್ರಮೆಯನ್ನು ಹಂಚುತ್ತಾನೆ.
ಭಯಭೀತ ಭಯವನ್ನು ಹಂಚುತ್ತಾನೆ.
3. ಪ್ರಕೃತಿಯ ಮೂರನೇ ನಿಯಮ:
ಜೀವನದಿಂದ ಏನೆಲ್ಲಾ ಸಿಕ್ಕಿದೆಯೋ ಅದನ್ನು ಜೀರ್ಣಿಸಿಕೊಳ್ಳಲು ಕಲಿಯಬೇಕು. ಏಕೆಂದರೆ
ಭೋಜನ ಜೀರ್ಣವಾಗದೇ ಇದ್ದರೆ ರೋಗ ಹೆಚ್ಚುತ್ತದೆ!
ಪ್ರಶಂಸೆ ಜೀರ್ಣವಾಗದ್ದಿದ್ದರೆ ಅಹಂಕಾರ ಹೆಚ್ಚುತ್ತದೆ.
ನಿಂದನೆ ಜೀರ್ಣವಾಗದ್ದಿದ್ದರೆ ಶತ್ರುತ್ವ ಹೆಚ್ಚುತ್ತದೆ.
ದುಃಖ ಜೀರ್ಣವಾಗದ್ದಿದ್ದರೆ ನಿರಾಸೆ ಹೆಚ್ಚುತ್ತದೆ.
ಮಾತು ಬಹಳ ಕಹಿ ಇದೆ; ಆದರೆ ಸತ್ಯವಾಗಿದೆ ಅಲ್ಲವೇ?
(ವಾಟ್ಸಪ್‌ನಲ್ಲಿ ಬಂದಿದ್ದು- ಮೂಲ ಲೇಖಕರಿಗೆ ಕೃತಜ್ಞತೆಗಳು)
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ