ಪುತ್ತೂರಿನ ಯೋಗಗುರು ರಾಜೇಂದ್ರ ಎಂಕಮೂಲೆ ನೇತೃತ್ವ
ವಿಶ್ವಯೋಗ ದಿನಾಚರಣೆಯ ಅಂಗವಾಗಿ ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಭಾರತೀಯ ಯೋಗ ವೈಭವ ನಡೆದಿದೆ .
ದ ಕ ಜಿಲ್ಲೆಯ ಯೋಗ ಗುರು ವಾಸುದೇವ ಕ್ರಿಯಾ ಯೋಗದ ಸ್ಥಾಪಕ ರಾಜೇಂದ್ರ ಎಂಕಮೂಲೆಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಮಂತ್ರಿಗಳಾದ ಜೇಸನ್ ವುಡ್ ಎಂಪಿ, ಮೈಕಲ್ ಸಕ್ಕರ್ ಹಾಗೂ ಸಂಸದರು ಮತ್ತು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಭಾಗವಹಿಸಿ ಯೋಗಾಸನಗೈದರು.
ಈ ಸಂದರ್ಭ ಮಾತನಾಡಿದ ರಾಜೇಂದ್ರ ಎಂಕಮೂಲೆ ಜಗತ್ತಿನ ಸ್ವಾಸ್ಥ್ಯ ಮತ್ತು ಶಾಂತಿಗೆ ಯೋಗ ಪ್ರಮುಖ ಸಾಧನವಾಗಿದೆ .ಓರ್ವ ಆರೋಗ್ಯವಂತ ವ್ಯಕ್ತಿ ಮಾತ್ರ ಒಂದು ಸಮಾಜದ ಶಕ್ತಿಯಾಗಬಲ್ಲ . ಆದ್ದರಿಂದ ಪ್ರತಿಯೊಬ್ಬರೂ ಯೋಗದ ಮೂಲಕ ನಿರೋಗಿಗಳಾಗಿ ಸಮಾಜದ ಶಕ್ತಿಗಳಾಗಬೇಕು. ವೈಯಕ್ತಿಕ ಸ್ವಾಸ್ಥ್ಯ ವಿಶ್ವ ಆರೋಗ್ಯ ಸಂಸ್ಥೆಯ ಅಥವಾ ಆರೋಗ್ಯ ಮಂತ್ರಿಯ ಕೆಲಸ ಅಲ್ಲ ಎಲ್ಲರೂ ಅವರವರ ಉತ್ತಮ ಆರೋಗ್ಯಕ್ಕಾಗಿ ಜವಾಬ್ದಾರಿ ನಿರ್ವಹಿಸಬೇಕು ಎಂದರು .
ಸಾಮಾಜಿಕ ಧುರೀಣ ರಾಮ್ ಪಾಲ್ ಮುತ್ಯಾಳ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು . ಆಸ್ಟ್ರೇಲಿಯಾದ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗವನ್ನು ಅಳವಡಿಸುವಂತೆ ಮನವಿ ಅರ್ಪಿಸಲಾಯಿತು.
ರಾಜೇಂದ್ರ ಅವರು ಕಳೆದ ಅನೇಕ ವರ್ಷಗಳಿಂದ ಆಸ್ಟ್ರೇಲಿಯಾ ದಲ್ಲಿ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Key Words: Yoga Day, Yoga day in Asuratlian Parliament, ಯೋಗ ದಿನಾಚರಣೆ, ಆಸ್ಟ್ರೇಲಿಯಾ ಸಂಸತ್ತಿನ ಯೋಗ ದಿನ,
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ