ಉಡುಪಿ ಸಿಟಿ ಜೇಸಿಐ ಕುಟುಂಬೋತ್ಸವ, ನಾಯಕತ್ವ ತರಬೇತಿ

Upayuktha
0


ಉಡುಪಿ: ನಾಯಕತ್ವ ಎಂಬುದು ಜವಾಬ್ದಾರಿಯಾಗಿದೆ ಇದು ಅಧಿಕಾರ ಎಂದು ತಿಳಿಯದೆ, ಹೆಚ್ಚು ಕೆಲಸ ಶಿಸ್ತು ಬದ್ದ ಜೀವನ ನಾಯಕನ ಗುಣವಾಗಬೇಕು ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸಂದೀಪ್ ಕುಮಾರ್ ಮಂಜ ಹೇಳಿದರು.


ಅವರು ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಎ.30 ರಂದು ಸಿ.ಎಸ್.ಐ ಬಾಲಕರ ವಸತಿ ನಿಲಯದಲ್ಲಿ ನಡೆದ ಕುಟುಂಬೋತ್ಸವ ಮತ್ತು ಲೀಡರ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಯಕತ್ವದ ಗುಣಗಳನ್ನು ನಾವೆಲ್ಲರೂ ರೂಢಿಸಬೇಕೆಂದರು.


ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷರಾದ ಡಾ. ಹರಿಣಾಕ್ಷಿ ಕರ್ಕೇರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೂರ್ವ ಅಧ್ಯಕ್ಷರಾದ ರಫೀಕ್ ಖಾನ್, ಜಗದೀಶ್ ಶೆಟ್ಟಿ ಕೀಳಂಜೆ ಭಾಗವಹಿಸಿದ್ದರು. ವೇದಿಕೆಯಲ್ಲಿ ಪ್ರಕಾಶ್ ದೇವಾಡಿಗ, ಸಂಧ್ಯಾ ಕುಂದರ್, ವಾರ್ಡನ್ ಜಾನ್ ಸುದರ್ಶನ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರವನ್ನು ಉದ್ಯಮಿ ದಿನೇಶ್ ಎಂ ಪೂಜಾರಿ ಮತ್ತು ಶಿಕ್ಷಕರಾದ ಚಂದ್ರ ಬಿ ಅಮೀನ್ ರವರಿಗೆ ನೀಡಿ ಗೌರವಿಸಲಾಯಿತು. ವಲಯ ಮಟ್ಟದ ತರಬೇತಿಯಲ್ಲಿ ಭಾಗವಹಿಸಲಿರುವ ಬಾಸುಮ ಕೊಡಗು, ಉದಯ್ ನಾಯ್ಕ್ ರವರನ್ನು ಗುರುತಿಸಲಾಯಿತು. ನಂತರ ಸಹ ಭೋಜನ ನಡೆಯಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top